ಇದು ಕೇಂದ್ರ ಸರ್ಕಾರದ ವೈಫಲ್ಯವೇ-ಸಚಿವ ಮಧು ಬಂಗಾರಪ್ಪ-This is a failure of the central

 Suddilive || Shivamogga

This is a failure of the central government - Minister Madhu Bangarappa


Failure, central

ಉಸ್ತುವಾರಿ ಸಚಿವರ ಕಚೇರಿ ಶಿಪ್ಟ್ ಆಗಿದೆ. ನಗರದ ಸ್ಮಾರ್ಟ್ ಸಿಟಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವರಿ ಮಧು ಬಂಗಾರಪ್ಪನವರ ಕಚೇರಿ ಜಿಲ್ಲಾ ಪಂಚಾಯತ್ ಕಚೇರಿಯಿಂದ ಸ್ಮಾರ್ಟ್ ಸಿಟಿ ಕಚೇರಿಗೆ ಸ್ಥಳಾಂತರವಾಗಿದೆ.  

ಈ ವೇಳೆ ಮಾತನಾಡಿದ ಸಚಿವ ಕಚೇರಿ ದೊಡ್ಡದು ಬೇಕಿತ್ತು. ನಿಗಮ ಮಂಡಳಿಯ ಅಧ್ಯಕ್ಷರಿಗೆ ಕಚೇರಿ ಇಲ್ಲ ಅವರಿಗೂ ಅನುಕೂಲವಾಗುವಂತೆ ಮಾಡಲಾಗಿದೆ. 

ಎರಡು ವಿಚಾರಕ್ಕೆ ಅಧಿಕಾರಿಗಳ ಸಭೆ ರದ್ದಾಗಿದೆ ಪೋಪ್ ಮತ್ತು ನಗರದ ನಿವಾಸಿ ಭಯೋತ್ಪದಕರ ಗುಂಡಿಗೆ ಬಲಿಯಾದ ಮಂಜುನಾಥ್ ಅವರ ಅಗಲಿಕೆಗೆ ರಾಷ್ಟ್ರಾದ್ಯಂತ ಶೋಕಾಚರಣೆಯಿದೆ. ಅರ್ಜೆಂಟಾಗಿ ಮೃತ ಮಂಜುನಾಥರ ದೇಹವನ್ನ ಮತ್ತು ಸುರಕ್ಷಿತವಾಗಿ ಪತ್ನಿ ಪಲ್ಲವಿ, ಮಗ ಅಭಿಜೈ ಅವರನ್ನ ಕರೆತರುವುದು ನಮ್ಮ  ಕರ್ತವ್ಯವಾಗಿದೆ ಎಂದರು‌. 

ಪತ್ನಿ ಮತ್ತು ಮಗ ಕಣ್ಣುಮುಂದೆ ಮಂಜುನಾಥ್ ರನ್ನ ಸಾಯಿಸಲಾಗಿದೆ. ಕುಂಟುಂಬದ ನೋವು ಅರ್ಥವಾಗಲಿದೆ. ಇಂದು ಸಂಜೆ ಶವ ಕಾಶ್ಮೀರದಿಂದ ಹೊರಡಲಿದೆ. ನಾಳೆ ಬೆಳಿಗ್ಗೆ ನಗರಕ್ಕೆ ಬರಲಿದೆ. ಇದನ್ನ ಸರಿ ಮಾಡಲು ಆಗೊಲ್ಲ. ಪೊಲಿಟಿಕಲಿ ಮಾತು ಬೇಡ. ಸರ್ಕಾರ ಸಾಮಾನ್ಯ ಜನರು ಯೋಚನೆ ಮಾಡಬೇಕಿದೆ ಎಂದರು.

ತಾಯಿ ಪ್ರವಾಸ ಬೇಡ ಅಂದಿದ್ದರು. ಎಲ್ಲರೂ ಕಾಶ್ಮೀರಕ್ಕೆ ಹೋಗಿ ಬಂದಿದ್ದಾರೆ. ನಾನು ಹೋಗುವುದಾಗಿ ಹೇಳಿ ಹೋಗಿದ್ದಾರೆ ಎಂದು ತಿಳಿಸಿದರು‌. ಹಾಲಿಡೇಗೆ ಕಾಶ್ಮೀರಕ್ಕೆ ಹೋಗುವ ಕಾರ್ಯಕ್ರಮವಿದ್ದರೆ ಪ್ರವಾಸವನ್ನ ರದ್ದುಪಡಿಸೋದು ಒಳ್ಳೆಯದು ಎಂದು ಹೇಳಿದರು. 

ಮಂಜುನಾಥರ ಮಗ ಅಭಿಜೈಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 97% ತೆಗೆದು ಕಾಮರ್ಸಿಗೆ ಹೋಗುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಎಲ್ಲೆಡೆ ಅನುಕೂಲ ಮಾಡಲಾಗುವುದು. ಕಾಶ್ಮೀರದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾ ಎಂಬ ಪ್ರಶ್ನೆಗೆ ಇಲ್ಲವೆಂದು ಹೇಳೋದು ಹೇಗೆ ಎಂದು ಸಚಿವರ ಮಾಧ್ಯಮದವರಿಗೆ ಮರುಪ್ರಶ್ನಿಸಿದರು. 

ಇವುಗಳ ಬಗ್ಗೆ ಪೊಲಿಟಿಸೈಸ್ ಬೇಡ. ನೀವು ಕೇಳಿದ ಪ್ರಶ್ನೆಗೆ ಜವಬ್ದಾರಿ ತೆಗೆದುಕೊಳ್ಳೋದು ಕಷ್ಟ. ಒಂದು ಬಾರಿ ಜನರಿಗೆ ಪ್ರವಾಸೋದ್ಯೋಮಕ್ಕೆ ಬಿಡುವುದಾದರೆ ಕೇಂದ್ರ ಸರ್ಕಾರ ಜವಬ್ದಾರಿ ತೆಗೆದುಕೊಳ್ಳಬೇಕಿದೆ. ಕೇಂದ್ರ ದೇಶಕ್ಕೆ ಉತ್ತರಿಸಬೇಕು ಎಂದರು.  


ವೈಜ್ಞಾನಿಕ ಜಾತಿಗಣತಿ


ಜಾತಿ ಗಣತಿಯಲ್ಲಿ 54 ಮಾನದಂಡ ಇಟ್ಟಿಕೊಂಡು ಸರ್ವೆಯಾಗಿದೆ. ಕೆಲವರು ಮನೆಗೆ ಬಂದಿಲ್ಲ ಎಂದವರೆ ಸರ್ವೆಗೆ ಸಹಿಹಾಕಿದ್ದಾರೆ. ಸರ್ವೆ  ಚರ್ಚೆಯಾಗಲಿ. ತೊಂದರೆಯನ್ನ ಸರಿಪಡಿಸಲಿ ಎಂದು ಸಚಿವ ಮಧು ಬಂಗಾರಪ್ಪ ಪುನರುಚ್ಚರಿಸಿದ್ದಾರೆ. 

ಶಾಸಕ ಗೋಪಾಲ ಕೃಷ್ಣ ಬೇಳೂರು ಅವರೆ ಜಾತಿ ಗಣತಿಯನ್ನ ವಿರೋಧಿಸಿದ್ದಾರೆ ಎಂಬ‌ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬೇಳೂರು ನಾನು ವಿರೋಧಿಸಿಲ್ಲ. ಪರಿಗಣಿಸುವಾಗ ಎಲ್ಲಾ ಜಾತಿಯನ್ನ ಪರಿಗಣಿಸಿ ಸಂಖ್ಯೆ ತೆಗೆದುಕೊಳ್ಳಿ ಎಂದಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಇದು ವೈಜ್ಞಾನಿಕವಾಗಿದೆ ಸಾರ್ವಜನಿಕರ ಅಭಿಪ್ರಾಯದಂತೆ ಜಾತಿ ಗಣತಿ ಜಾರಿಯಾಗಬೇಕಿದೆ ಎಧು ಸಚಿವ ಮಧು ಬಂಗಾರಪ್ಪ ಹೇಳಿದರು.

ಬಡವರು ಎಲ್ಲಾ ಜಾತಿಯಲ್ಲಿದೆ. ಅಪ್ಲಿಫ್ಟಿಂಗ್ ಆಗಬೇಕು ಎಂಬುದು ಜಾತಿಗಣತಿಯ ಉದ್ದೇಶ ಎಂದು ಸಚಿವರು ಹೇಳಿದರು.

This is a failure of the central

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close