Suddilive || Soraba
ಮಂಚಿ ಗ್ರಾಮದ ಮರ ಕಿತ್ತು ತರುವ ಪವಾಡ-ಮಳೆ ಭವಿಷ್ಯವೇನು? -What is the future of the miracle rain that uproots trees in Manchi village?
ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಮಂಚಿ ಗ್ರಾಮದ ಹನುಮಂತ ದೇವರ ಜಾತ್ರ ನಡೆದಿದೆ. ನಿನ್ನೆ ರಥೋತ್ಸವ ನಡೆದರೆ ಇಂದು ಮರ ತರುವ ಪವಾಡ ನಡೆದಿದೆ. 6 ಮರವನ್ನ ಹೊತ್ತು ತಂದು ವರ್ಷದಲ್ಲಿ ಮಳೆಯ ಭವಿಷ್ಯ ಹೇಳುವ ಜಾತ್ರೆ ಇದಾಗಿದೆ.
ದಾಸ ಕುಟುಂಬದಿಂದ ಮರ ಹೊತ್ತುತರುತ್ತಾರೆ. ಮಳೆ ಹೇಗೆ ಆಗುತ್ತೆ ಎಂಬುದನ್ನ ಮರ ತರುವ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ಷಣ್ಮುಖಪ್ಪ, ಗುತ್ಯಪ್ಪ, ಸುಭಾಷಪ್ಪ, ಲಿಂಗರಾಜ, ವಾಸುದೇವ ಎಂಬ ಆರು ಜನ ಆರು ದಿಕ್ಕಿನಲ್ಲಿ ಹೋಗಿ 6 ಮರವನ್ಜ ಹೊತ್ತು ತಂದಿದ್ದಾರೆ.
5 ದಿನ ಬಾಳೆಹಣ್ಣು ಮತ್ತು ಹಾಲಿನ ವೃತದಲ್ಲಿದ್ದು ಇಂದು ಮರ ತರಲು ಕಾಡಿಗೆ ತೆರಳಿದಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ 6 ಬಿಲ್ವ ಮರಗಳು ಚಿಗುರಿದರೂಪದಲ್ಲಿದ್ದು ಉತ್ತಮ ರೀತಿಯಲ್ಲಿ ಮಳೆಯಾಗಲಿದೆ ಎಂಬುದು ಭವಿಷ್ಯವಾಗಿದೆ.
ಪತ್ರೆ ಮರವನ್ನ ತಂದ ನಂತರ ಕೆರೆ ಅಂಗಳದಲ್ಲಿ ದೇವಸ್ಥಾನಕ್ಕೆ ಕೊಂಡಯ್ಯಲಾಯಿತು.6 ಮರ ಚಿಗುರಿದ ರೂಪದಲ್ಲಿರುವುದರಿಂದ ಉತ್ತಮ ಮಳೆಯಾಗುತ್ತದೆ ಎಂಬ ಭವಿಷ್ಯ ಹೊರಬಿದ್ದಿದೆ. ಮರ ಹೊತ್ತು ತರುವ ದಿಕ್ಕು ಸಹ ಪರಿಗಣಿಸಲಾಗುತ್ತದೆ. ಈಶಾನ್ಯ ಉತ್ತರ ಭಾಗದಿಂದ ಮರ ತಂದಿರುವುದು ಸಹ ಉತ್ತಮ ಮಳೆಯ ಭವಿಷ್ಯಕ್ಕೆ ಕಾರಣವಾಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಬೆಳಿಗ್ಗೆ ಕೆರೆಯ ಭಾಗದಿಂದ 6 ದಿಕ್ಕಿನಿಂದ ಜನ ಹೋಗಿರುತ್ತಾರೆ. ಸಂಜೆ ವೇಳೆಗೆ ಒಟ್ಟಿಗೆ ಬರುವುದು ಪವಾಡವಾಗಿದೆ. ಇದನ್ನು ನೋಡಲು ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು.
ಶ್ರೀರಾಮನ ಬ್ರಹಹತ್ಯೆ ದೋಷ ನಿವಾರಣೆಗೆಂದು ಪೂಜೆ ಸಲ್ಲಿಸಲು ಬೇಕಿದ್ದ ಬಿಲ್ವ ಪತ್ರ ಮರಗಳನ್ನ 6 ವಾನರರು ಬಿಲ್ವ ಪತ್ರ ಮರವನ್ನಕಿತ್ತು ತಂದಿದ್ದರು ಎಂಬುದು ಪೌರಣಿಕ ಕಥೆಯಾಗಿದೆ. ಈ ಹಿನ್ನಲೆಯಲ್ಲಿ ಶತಮಾನಗಳಿಂದ ಮರ ಕಿತ್ತು ತರುವ ಪದ್ಧತಿ ನಡೆದುಕೊಂಡು ಬಂದಿದೆ.
What is the future of the miracle rain