Suddilive || Shivamogga
ಮಹಿಷಿ ದರೋಡೆ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು-Mahishi robbery case accused shot in the leg
ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯ ಮಹಿಷಿ ಉತ್ತರಾಧಿ ಮಠದಲ್ಲಿ ದರೋಡೆ ನಡೆಸಿದ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. ಪೊಲೀಸರು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಹೋಗಿ ಅವರ ಮೇಲೆ ದಾಳಿ ನಡೆಸಲು ಮುಂದಾದ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ.
ಏ.5 ರಂದು ಮಹಿಷಿ ಉತ್ತರಾಧಿ ಮಠದಲ್ಲಿ 12-15 ಜನ ಮುಸಿಕುಧಾರಯಾಗಿ ಬಂದು 50 ಸಾವಿರ ರೂ ನಗದು ಲ್ಯಾಪ್ ಟಾಪ್, ಮೊಬೈಲ್ ಗಳು ಒಟ್ಟು 1,16,000 ರೂ ಮೌಲ್ಯದ ವಸ್ತುಗಳನ್ನ ಕಿತ್ತುಕೊಂಡು ಹೋದ ಪ್ರಕರಣ ನಡೆದಿತ್ತು. ಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಏ.6 ರಂದು ಎಸ್ಪಿ ಮಿಥುನ್ ಕುಮಾರ್ ಸ್ಥಳ ಭೇಟಿ ನೀಡಿದ್ದರು.
ಪ್ರಕರಣದ ಆರೋಪಿಯನ್ನ ಪತ್ತೆಹಚ್ಚಿ ಕೆಂಗುಡ್ಡೆಯ ಕೆರೆಯ ಬಳಿ ಬಂಧಿಸಲು ತೆರಳಿದ್ದ ಮಾಳೂರು ಪಿಎಸ್ ಐ ಕುಮಾರ್ ಕೆ ಮತ್ತು ಇತರೆ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗಿದ್ದ ಆರೋಪಿ ಎಡಗಾಲಿಗೆ ಗುಂಡೇಟು ಬಿದ್ದಿದೆ.
ಶಿಕಾರಿಪುರದ ಪ್ರಗತಿ ನಗರದ ನಿವಾಸಿ ಕೆ. ಶ್ರೀನಿವಾಸ ಯಾನೆ ಸೀನಾ (25) ನ್ನ ಹಿಡಿಯಲು ಮುಂದಾದ ಮಾಳೂರು ಪಿಸಿ ಸಂತೋಷ ಮೇಲೆ ದಾಳಿ ನಡೆಸಿದ್ದಾನೆ. ಮಾಳೂರು ಪಿಎಸ್ಐ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಸಹ ಎಚ್ಚರಿಕೆಗೆ ಬಗ್ಗದ ಸೀನಾ ದಾಳಿ ಮುಂದುವರೆಸಿದ್ದ.
ಅನಿವಾರ್ಯವಾಗಿ ಪಿಎಸ್ಐ ಅವರು ಸೀನನ ಎಡಕಾಲಿಗೆ ಗುಂಡು ಹಾರಿಸಿದ್ದಾರೆ. ಆತನನ್ನ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಎಸ್ಪಿ ಮಿಥುನ್ ಕುಮಾರ್ ವಾಟ್ಸಪ್ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Mahishi robbery case accused shot in the leg