ಕೌಟುಂಬಿಕ ದೌರ್ಜನ್ಯದ ಪ್ರಕರಣದ ಆರೋಪಿಗೆ ಶಿಕ್ಷೆ-domestic violence case sentenced

Suddilive || Shivamogga

Accused in domestic violence case sentenced

Violence, sentenced



ಕೌಟುಂಬಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ಆರೋಪಿಗಳಿಗೆ ಘನ 2ನೇ  ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ. ಆರೋಪಿಗೆ 1 ವರೆ ವರ್ಷ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.  

2017 ನೇ ಸಾಲಿನಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ  ಪತಿ ಶಶಿಧರ ಶರ್ಮ ಮತ್ತು ತಾಯಿ ಜಯರತ್ನಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ, ದೌರ್ಜನ್ಯ ಪ್ರಕರಣವನ್ನ ಮಮತಾ ರಾಣಿ ಎಂಬುವರು ದಾಖಲಿಸಿದ್ದರು.   

ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನ ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣೆಯ ಆಗಿನ ತನಿಖಾಧಿಕಾರಿಗಳಾದ  ಶ್ರೀಮತಿ  ಪ್ರಭಾವತಿ ಸೇತುಸನದಿ ರವರು ತನಿಖೆಯನ್ನು ಪೂರ್ಣಗೊಳಿಸಿ  ಘನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. 

ಸರ್ಕಾರದ ಪರವಾಗಿ  ಕಿರಣ್ ಕುಮಾರ್ ಸರಕಾರಿ ಅಭಿಯೋಜಕರು ಪ್ರಕರಣದ ವಾದವನ್ನು ಮಂಡಿಸಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿತನಾದ ಶಶಿಧರ್ ಶರ್ಮ, 43 ವರ್ಷ, ಹೊಸ ಮನೆ ಶಿವಮೊಗ್ಗ,  ಸ್ವಂತ ವಿಳಾಸ: ದೇವರಹಳ್ಳಿ, ರಾಮೇನಹಳ್ಳಿ ಅಂಚೆ ಚನ್ನಗಿರಿ ತಾಲೂಕು,  ಈತನ ವಿರುದ್ದ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ತೀರ್ಪು ನೀಡಿದೆ.  

ದಿನಾಂಕ 03-04-2025 ರಂದು ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಶಾರದಾ ಕೊಪ್ಪದ ರವರು  ಆರೋಪಿತನಿಗೆ 1ವರ್ಷ 6 ತಿಂಗಳು ಸಾಧಾ ಕಾರವಾಸ ಹಾಗೂ 15,000/- ದಂಡ, ದಂಡ  ಕಟ್ಟಲು ವಿಫಲನಾದರೆ 7 ತಿಂಗಳು ಸಾಧಾ ಕಾರವಾಸ  ಶಿಕ್ಷೆ ವಿಧಿಸಿ ಆದೇಶಿಸಿರುತಾರೆ.

domestic violence case sentenced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close