Suddilive || Shivamogga
ಶಿವಮೊಗ್ಗದ ನಾಲ್ಕು ಠಾಣೆಯ ಪಿಐಗಳ ವರ್ಗಾವಣೆ-Transfer of PI of four police stations in Shimoga
ರಾಜ್ಯಾದ್ಯಂತ ಒಟ್ಟು 27 ಸಿವಿಲ್ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಮೂರು ಠಾಣೆಯ ಪಿಐಗಳನ್ನ ಸರ್ಕಾರ ವರ್ಗಾಯಿಸಿ ಆದೇಶಿಸಿದೆ.
ಮಹಿಳಾ ಪೊಲೀಸ್ ಠಾಣೆಯ ಪಿಐಆಗಿದ್ದ ಭರತ್ ಕುಮಾರ್ ಡಿ.ಆರ್ ಅವರನ್ನ ಖಾಲಿಯಿರುವ ವಿನೋಬ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಶಿಕಾರಿಪುರದ ಟೌನ್ ವೃತ್ತದ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರುದ್ರೇಶ್ ಕೆ.ಪಿ ಅವರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ರುದ್ರೇಶ್ ಕೆ.ಪಿ ಅವರ ಸ್ಥಾನಕ್ಕೆ ಕರ್ನಾಟಕಲೋಕಾಯುಕ್ತ ಆದೇಶದಲ್ಲಿರದ್ದ ಸಂತೋಷ್ ಪಾಟೀಲ್ ಅವರನ್ನ ವರ್ಗಾಯಿಸಲಾಗಿದೆ. ಸಂತೋಷ್ ಪಾಟೀಲ್ ಶಿಕಾರಿಪುರ ಟೌನ್ ವೃತ್ತದ ಸಿಪಿಐ ಆಗಿ ವರ್ಗಾಯಿಸಿದ್ದಾರೆ.
ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಾಯಿತ್ರಿ ಆರ್ ಅವರನ್ನ ಶಿವಮೊಗ್ಗ ಸಂಚಾರಿ ವೃತ್ತದ ಸಿಪಿಐ ಆಗಿ ವರ್ಗಾಯಿಸಲಾಗಿದೆ. ಈಗ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ ಕುಮಾರ್ ಅವರಿಗೆ ಸ್ಥಾನ ಯಾವುದು ಎಂಬುದು, ಮತ್ತು ಮಹಿಳಾ ಪೊಲೀಸ್ ಠಾಣೆಯ ಪಿಐಯಾಗಿ ಯಾರು ಎಂಬುದು ಸ್ಪಷ್ಟವಾಗಬೇಕಿದೆ.
Transfer of PI