suddilive|| Shivamogga
ಜಾತಿಗಣತಿ ಮಂಡನೆ ವಿರುದ್ಧ ಈಡಿಗ ಸಮಾಜ ಸುದ್ದಿಗೋಷ್ಠಿ -Ediga Samaj press conference against the presentation of caste census
ದಿನೇ ದಿನೆ ಕಳೆದಂತೆ ಜಾತಿ ಗಣತಿ ವಿಚಾರ ಮುನ್ನಾಲೆಗೆ ಬರುತ್ತಿದೆ. ಇಂದು ಕ್ಯಾಬಿನೆಟ್ ನಲ್ಲಿ ರಾಜ್ಯ ಸರ್ಕಾರ ಮಂಡಿಸುವ ಹಿನ್ನಲೆಯಲ್ಲಿ ಎಲ್ಲರ ಚಿತ್ತ ವಿಧಾನ ಸಭೆಯತ್ತ ಎಂಬಂತಾಗಿದೆ. ಈ ನಡುವೆ ಈಡಿಗ ಸಮಾಜವೂ ಸಹ ಜಾತಿ ಗಣತಿ ಸರಿಯಿಲ್ಲ ಎಂದಿದೆ. ಇದನ್ನ ತಿರಸ್ಕರಿಸುವುದಾಗಿ ಹೇಳಿದೆ.
ಜಾತಿ ಗಣತಿ ಜಾರಿಗೊಳಿಸುವಲ್ಲಿ ನಮಗೆ ಬೇಸರವಿಲ್ಲ ಆದರೆ ಜನಾಂಗಗಳ ಜನಸಂಖ್ಯೆ ಕಡಿಮೆ ಕೊಡಲಾಗಿದೆ ಎಂದು ಈಡಿಗ ಸಮಾಜದ ಜ್ಞಾನೇಶ್ವರ್ ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಸೋಷಿಯೋ ಎಕನಾಮಿಕ್ಸ್ ಸರ್ವೆ ಎಂದಿದ್ದಾರೆ. ಸೋಷಿಯೋ ಎಕನಾಮಿಕ್ಸ್ ನಲ್ಲಿಯೂ ಅನ್ಯಾಯವಾಗಿದೆ. ಏಕೆಂದರೆ ದೀವರು ಮತದಾರರೇ ಸೊರಬವೊಂದರಲ್ಲೇ 66 ಸಾವಿರ ಇದ್ದಾರೆ. ಆದರೆ ಜಾತಿ ಗಣತಿಯಲ್ಲಿ ರಾಜ್ಯದಲ್ಲಿ ದೀವರ ಸಂಖ್ಯೆಯನ್ನ 66 ಸಾವಿರ ಜನಸಂಖ್ಯೆಯಿದೆ ಎಂದು ಹೇಳಲಾಗುತ್ತಿದೆ
ಇದು ದೀವರಿಗೆ ಆಗಿರುವ ಅನ್ಯಾಯವಾಗಿದೆ ಈಡಿಗರು 3.5 ಲಕ್ಷ ಬಿಲ್ಲವರನ್ನ ಸೇರಿಸಿ ಒಟ್ಟು 12 ಲಕ್ಷ ಜನಸಂಖ್ಯೆ ಯಿದೆ ಎಂದು ಹೇಳಿ 95% ಅಕ್ಯೂರೆಟ್ ಇದೆ ಎಂದು ಹೇಳುತ್ತಿದ್ದಾರೆ. ಇದು ವ್ಯವಸ್ಥಿತವಾಗಿ ದೀವರನ್ನ ತುಳಿಯುವ ಕೆಲಸವಾಗಿದೆ ಎಂದು ಅವರು ದೂರಿದರು.
ಕುರುಬರಿಗೆ ಸಮನಾಗಿ ಈಡಿಗರು ಇದ್ದೀವಿ. ಕುತ್ತಿಗೆ ಹಿಚುಕಿ ಸಾಯಿಸುವ ರೀತಿ ಮಾಡಿದ್ದೀರಿ ಎಂದು ದೂರಿದರು. ಬಂಗಾರಪ್ಪನವರ ಸಮಯದಲ್ಲಿ ಬೆಂಗಳೂರಿಗೆ ಹೋದವರ ಸಂಖ್ಯೆ 50 ಸಾವಿರವಿದೆ. ಹೊದನಗರ, ಸಾಗರದಲ್ಲಿ 26 ಪಂಗಡವಿದೆ ಐದು ಪಂಗಡ ಮಾತ್ರ ಕೊಡಲಾಗಿದೆ ಉಳಿದ 21 ಪಂಗಡ ಎಲ್ಲಿಯೋಯಿತು. ಆತ್ಮಹತ್ಯೆ ಮಾಡಿಕೊಂಡ್ರಾ ಎಂದು ಆಕ್ಷೇಪಿಸಿದರು
caste census