Suddilive || Shivamogga
ವಿನಾಕಾರಣ ಡಿ.ಮಂಜುನಾಥ್ ರಾದ್ಧಾಂತ ಮಾಡುತ್ತಿದ್ದಾರೆ-ಶಂಕರಪ್ಪ-D.Manjunath is being criticized for no reason-Shankarappa
ಜಿಲ್ಲಾ ಕಸಾಪದ ಅಧ್ಯಕ್ಷರಿಗೆ ನೀಡಿರುವ ಷೋಕಾಸ್ ನೋಟೀಸ್ ಬಗ್ಗೆ ಕೆಲವು ವಿಷಯಗಳು ನಿಶ್ಚಯವಾಗಿಲ್ಲ. ಕೆಲವು ವಿಷಯಗಳು ಪೂರ್ಣವಾಗಬೇಕಿದೆ. ಅಷ್ಟರೊಳಗೆ ಕಸಾಪ ಜಿಲ್ಲಾಧ್ಯಕ್ಷರು ರಾದ್ದಾಂತ ಮಾಡುತ್ತಿದ್ದಾರೆ ಎಂದು ರಂಜನಿ ದತ್ತಾತ್ರಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಜಿಲ್ಲೆಯ ಮಂಜುನಾಥ್ ಅವರಿಗೆ ಸಂಘನಾಕಾರ್ಯದರ್ಶಿ ಆಗಿ ನೇಮಿಸಿದ್ದರು. ರಾಜ್ಯ ಪ್ರತಿನಿಧಿಯನ್ನಾಗಿ ನೇಮಿಸಿದ್ದರು. ರಾಜ್ಯಧ್ಯಕ್ಷರಾದ ಮಹೇಶ್ ಜೋಷಿ ಅವರು ಈ ಬಗ್ಗೆ ಡಿ.ಮಂಜುನಾಥ್ ಅವರಿಗೆ ಪತ್ರನೂ ಬರೆದು ನಿಮ್ಮೊಂದಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಸೂಚಿಸಿದ್ದರು.
ಆದರೆ ಜಿಲ್ಲಾ ಅಧ್ಯಕ್ಷರು ಯಾವುದೇ ಸಮಾರಂಭ ಸಭೆಗೆ ಯಾವುದೇ ಪತ್ರ ಬರೆದಿಲ್ಲ. ಜೋಶಿಯವರು ಮಹಿಳೆಯ ಆಸ್ಮಿತೆಗೆ ನೀಡಿದ ಅವಕಾಶವಾಗಿತ್ತು. ಜವಬ್ದಾರಿ ಘೋಷಣೆಯಾದ ನಂತರ ಎಲ್ಲಾ ಕಾರ್ಯಕಾರಿ ಸಮಿತಿ ಸಭೆಗೆ ಭಾಗಿಯಾಗಿದ್ದೆ. ಆದರೆ ನಮ್ಮಮಂಜಣ್ಣ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಇದು ಮಹಿಳಾ ಪ್ರಾತಿನಿಧ್ಯಕ್ಕೆ ದಕ್ಕೆವುಂಟಾಗಿದೆ ಎಂದರು.
ಮಹಿಳಾ ಪ್ರಾತಿನಿಧ್ಯ ಕ್ಕೆ ತೋರಿದ ಅಗೌರವ ತೋರಿದ್ದಾರೆ. ನಮ್ಮೊಂದಿಗೆ ಒಂದೇ ಒಂದು ನಮಸ್ಕಾರ ಎಂದರೂ ಹೇಳದೆ ಹೋಗುವ ಸ್ವಭಾವ ತೋರಿದ್ದಾರೆ. ನನ್ನ ಬಿಟ್ಟರೆ ಬೇರೆಯಾರು ಇಲ್ಲ ಎಂಬ ಧೋರಣೆಯಾ? ಬೇರೆಯವರು ನಮ್ಮ ಮುಂದೆ ಬೆಳೆಯ ಬಾರದೆ ಎಂಬ ಅಭಿಪ್ರಾಯವೇ ಎಂದು ರಂಜನಿ ದತ್ತಾತ್ರಿ ಪ್ರಶ್ನಿಸಿದ್ದಾರೆ.
ಮಾಜಿ ಜಿಲ್ಲಾಧ್ಯಕ್ಷ ಡಿಬಿ ಶಂಕರಪ್ಪ ಮಾತನಾಡಿ, ನಾನು ಮಾತನಾಡುವ ಅವಶ್ಯಕತೆಯಿರಲಿಲ್ಲ. ನನ್ನ ಹೆಸರು ತಳಕು ಹಾಕಿದೆ. ಡಿ ಮಂಜುನಾಥ್ ಎರಡು ಭಾಗ ಮಾಡುವ ಸಂಚನ್ನ ರೂಪಿಸಿದ್ದಾರೆ. ಬಿಎಸ್ ವೈ ಸಿಎಂ ಆಗಿದ್ದಾಗ ಒಂದು ಕೋಟಿ ಹಣ ಬಿಡುಗಡೆಯಾಗಿತ್ತು. ನಾನು ಖಜಾಂಚಿಯಾಗಿದ್ದೆ ನನ್ನ ಬಳಿ ಮಂಜುನಾಥ್ ಅವರು ಅನೇಕ ಚೆಕ್ ಲೀಫ್ ಗೆ ಸಹಿ ಮಾಡಿಸಿಕೊಂಡಿದ್ದರು.
ಒಙದು ಕೋಟಿ ಬಳಕೆಯಾಗದ ಕಾರಣ ಸಾಹಿತ್ಯ ಗ್ರಾಮದ ಕಟ್ಟಡ ಅರ್ಧಂಬರ್ಧ ವಾಗಿತ್ತು. ಮತ್ತೆ 50 ಲಕ್ಷವನ್ನ ಸರ್ಕಾರದ ಬಳಿ ಕೇಳಲಾಯಿತು. ಹಿಂದಿನ ಲೆಕ್ಕವನ್ನ ಸರ್ಕಾರ ಕೇಳಿತ್ತು. ದಯಾನಂದ ಅವರು ಡಿಸಿ ಆಗಿ ಬಂದಾಗ ಶಂಕರಪ್ಪ ಮತ್ತು ಡಿ ಮಂಜುನಾಥ್ ಅವರನ್ನಕರೆಯಿಸಿ ವಿಚಾರಿಸಿದ್ದರು.
ನಕ್ಷೆ ಕೊಡುವುದಾಗಿ ಕೊಡಲಿಲ್ಲ. 50 ಲಕ್ಷದಲ್ಲಿ ನಿರ್ಮಿತ ಕೇಂದ್ರದಿಂದ ಡಿಸಿ ದಯಾನಂದ್ ನಿರ್ಮಿಸಿದರು. ಡಿ ಮಂಜುನಾಥ್ ಅವರ ಸ್ನೇಹಿತರು ಡಿಸಿಗೆ ಪತ್ರ ಬರೆದು ಚುನಾವಣೆಗೆ ಗೋಡಾನ್ ಮಾಡಿಕೊಳ್ಳಿ ಎಂದು ಬರೆದಿದ್ದರು. ನಂತರ ಸಾಹಿತ್ಯ ಮನಸ್ಸುಗಳು ಒಂದಾಗಿ ಫರ್ನಿಚರ್ ಹಾಕಲಾಯಿತು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಬಳಗವನ್ನ ಹುಟ್ಟುಹಾಕಿ ಸಾಹಿತ್ಯ ಪರಿಷತ್ ನ್ನ ಒಡೆಯುವ ಹುನ್ನಾರ ಮಾಡಿದ್ದರು.
ಡಿ.ಮಂಜುನಾಥ್ ಅವರ ಪರವಾಗಿ ನಿನ್ನೆ ಮಾತನಾಡಿದ ಬಳಗ ಈ ಹಿಂದೆ ನಡೆದಾಗ ಯಾಕೆ ಮಾತನಾಡಲಿಲ್ಲ. ಈಗ ಮಹೇಶ್ ಜೋಷಿ ಅವರ ಪತ್ರ ಚರ್ಚೆ ನಡೆಯುತ್ತಿದೆ. ಅಷ್ಟೆ ಅದನ್ನ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ನೋಟೀಸ್ ನೀಡಲಾಗಿದೆ ವಿನಃ ಶಿಕ್ಷೆ ವಿಧಿಸಿರುವುದಲ್ಲ ಎಂದು ಸ್ಪಷ್ಟಪಡಿಸಿದರು.
ಕಟ್ಟಡ ನಿರ್ಮಾಣದ ಹಂತದಲ್ಲಿ ಒಂದು ಕೋಟಿ ಹಣ ಕೊಟ್ಟಿರುವ ಬಗ್ಗೆ ತನಿಖೆ ನಡೆದು ಕ್ಲೀನ್ ಚೀಟ್ ನೀಡಲಾಗಿದೆ ಎಂದು ಡಿ ಮಂಜುನಾಥ್ ತಿಳಿಸಿದ್ದಾರೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಡಿ.ಬಿ ಶಂಕರಪ್ಪ, ಮಂಜುನಾಥ್ ಹೇಳಿರುವುದನ್ನ ನಂಬಬೇಡಿ. ಡಿಸಿ ಕಚೇರಿಯಲ್ಲಿ ದಾಖಲೆಗಳಿವೆ ಪರಿಶೀಲಿಸಿ ಎಂದರು.
criticized for no reason-Shankarappa