Suddilive || Shivamogga
ವರದಕ್ಷಿಣ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪಿಗೆ ಶಿಕ್ಷೆ-The accused of murder due to dowry harassment was sentenced.
ವರದಕ್ಷಿಣೆ ವಿಚಾರದಲ್ಲಿ ಪತ್ನಿಯನ್ನ ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕಃ 20-09-2022 ರಂದು ಕರುಣಾಕರ 36 ವರ್ಷ, ದುಮ್ಮಳ್ಳಿ ಗ್ರಾಮ, ಶಿವಮೊಗ್ಗ ಈತನು ತನ್ನ ಪತ್ನಿ ಅಮಿತಾ, 27 ವರ್ಷ, ದುಮ್ಮಳ್ಳಿ ಗ್ರಾಮ, ಶಿವಮೊಗ್ಗ ಈಕೆಯನ್ನು ವರದಕ್ಷಿಣೆ ವಿಚಾರವಾಗಿ ಹಿಂಸಿಸಿ, ಕೌಟುಂಬಿಕ ಕಿರುಕುಳ ನೀಡಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ *ಗುನ್ನೆ ಸಂಖ್ಯೆ 438/2022 ಕಲಂ 304(B), 498(A), 302 ಐಪಿಸಿ ಮತ್ತು ಕಲಂ 3, 4 ಡಿ ಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಬಿ ಮಂಜುನಾಥ್. ಪಿ. ಐ ತುಂಗಾನಗರ ಪೊಲೀಸ್ ಠಾಣೆ ರವರು ತನಿಖೆ ನಡೆಸಿದ್ದು, ಬಾಲರಾಜ್, ಡಿವೈಎಸ್.ಪಿ ಶಿವಮೊಗ್ಗ ಉಪವಿಭಾಗ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿ ಕರುಣಾಕರ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ.ಆರ್ ರವರು ದಿನಾಂಕ:- 08-04-2025 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ರೂ 1,85,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
dowry harassment was sentenced