Suddilive || Shovamogga
ಎಸ್ಪಿ ಮತ್ತು ಡಿಸಿ ನೇತೃತ್ವದಲ್ಲಿ ಮೈದಾನ ಸುಖಾಂತ್ಯ-Happy ending to the field led by SP and DC
ಕೊನೆಗೂ ಡಿಸಿ ಕಚೇರಿ ಎದುರಿನ ಮೈದಾನದ ಮಾಲಿಕತ್ವದ ವಿಷಯದಲ್ಲಿ ಬುಗಿಲೆದ್ದ ವಿಷಯ ಡಿಸಿ ಮತ್ತು ಎಸ್ಪಿ ನೇತೃತ್ವದಲ್ಲಿ ಬಗೆಹರಿದಿದೆ. ಮಾಲಿಕತ್ವ ವಿಷಯ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿದ್ದು, ಉಳಿದಂತೆ ಈ ಹಿಂದಿನಂತೆ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನ ಮೈದಾನದ ವಿಷಯದಲ್ಲಿ ಏ.1 ರಂದು ಬೇಲಿ ನಿರ್ಮಿಸಿರುವುದನ್ನ ವಿರೋಧಿಸಿ ಹಿಂದೂ ಸಂಘಟನೆಗಳು ದಿಡೀರ್ ಪ್ರತಿಭಟನೆ ನಡೆಸಿತು. ದಿಡೀರ್ ಪ್ರತಿಭಟನೆಯ ಹಿನ್ನಲೆಯಲ್ಲಿ ಸಂಜೆಯವರೆಗೆ ಅಕ್ರಮ ಬೇಲಿ ತೆರವಿಗೆ ಜಿಲ್ಲಾಡಳಿತ ಕಾಲಾವಕಾಶ ಕೇಳಿತ್ತು.
ಸಂಜೆಯ ನಂತರ ಅಕ್ರಮಬೇಲಿ ತೆರವುಗೊಳಿಸಿದರೂ ಸಹ ಬ್ಯಾರಿಕೇಡ್ ನಿರ್ಮಿಸಿದ್ದರು. ಇದರ ಬೆನ್ಬಲ್ಲೇ ಮುಸ್ಲೀಂ ಸಂಘಟನೆಗಳು ಪದರತಿಭಟಿಸಿ ಈ ಜಾಗ ನಮ್ಮದು ಎಂದು ಪ್ರತಿಭಟಿಸಿ ಮನವಿ ಸಲ್ಲಿಸಿತ್ತು. ಈ ಮನವಿಯ ಬೆನ್ನಲ್ಲೇ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ಮೈದಾನ ಒಂದು ಸಮುದಾಯಕ್ಕೆ ಸೇರಿದ್ದಲ್ಲ ಎಂದು ಪ್ರತಿಭಟನೆ ನಡೆದರೆ,
ಶಾಸಕ ಚೆನ್ನಬಸಪ್ಪ ನೇತೃತ್ವದಲ್ಲಿ ಡಿಸಿಯೊಂದಿಗೆ ಸಭೆ ನಡೆಸಿ ಬ್ಯಾರಿಕೇಡ್ ತೆರವಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ನಂತರ ಏ.9 ರ ನಂತರ ಪ್ರತಿಭಟಿಸುವಿದಾಗಿ ಭಾರತೀಯ ಜನತಾ ಪಕ್ಷ ಪ್ರತಿಭಟಿಸುವುದಾಗಿ ಹೇಳಿದ್ದರು.
ಇಂದು ಎಸ್ಪಿ ಮಿಥುನ್ ಕುಮಾರ್ ಮೈದಾನ ಸುಖಾಂತ್ಯಗೊಂಡಿದ್ದು ಎಲ್ಲಾ ಸಮುದಾಯದ ಜನರೊಂದಿಗೆ ಸಭೆ ನಡೆಸಿ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದ್ದಾರೆ. ಮಾಲಿಕತ್ವದ ವಿಷಯವನ್ನ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿರುವುದಾಗಿ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ನಾಳೆ 10 ಗಂಟೆಯ ನಂತರ ವಾಹನ ಪಾರ್ಕಿಂಗ್ ಗೆ ಅವಕಾಶ ಕಲದಪಿಸಲಾಗಿದೆ. ಈಗಾಗಲೇ 14 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
Happy ending