ಡಾ. ಬಿ. ಆರ್. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಿ: ಡಾ. ಸಿದ್ದರಾಜು- ideology icorporated

 Suddilive || Shivamogga

ಡಾ. ಬಿ. ಆರ್. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಿ: ಡಾ. ಸಿದ್ದರಾಜು-Dr. B. R. Ambedkar's ideologies should be incorporated: Dr. Siddharaju.

Ideology, icorporated

ಡಾ. ಬಿ. ಆ‌ರ್. ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ (ರಿ), ಭದ್ರಾವತಿಯ ಅಡಿಯಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 12-04-2025 ರಂದು ಡಾ. ಬಿ. ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಬಿ.ಇಡಿ ಕಾಲೇಜುಗಳ ಡಾ. ಬಿ. ಆರ್ ಅಂಬೇಡ್ಕರವರ ವಿಚಾರಧಾರೆಗಳ ಕುರಿತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು , ಅರಕೆರೆಯ ಸರ್ಕಾರಿ ಪ್ರೌಡಶಾಲೆಯ ಭಾಷಾ ಶಿಕ್ಷಕರಾದ ಅರಳಿಹಳ್ಳಿ ಅಣ್ಣಪ್ಪ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ಅಂತರ ಬಿ.ಇಡಿ ಕಾಲೇಜುಗಳ ಸ್ಪರ್ದೆ ಏರ್ಪಡಿಸಿರುವುದು ಶ್ಲಾಘನೀಯ, ಇಂದಿನ ಜಗತ್ತಿನಲ್ಲಿ ಯುವಜನತೆಯು ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿದ್ದು, ಆದರ್ಶ, ಮಹಾನ್ ನಾಯಕರಾದಂತಹ ಡಾ.ಬಿ.ಆರ್ ಅಂಬೇಡ್ಕ‌ರ್, ಬುದ್ಧ, ಬಸವಣ್ಣನವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಂಡು, ಇತರರಿಗೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶಿಕ್ಷಕರಾದ ಸುದೀಂದ್ರ ರೆಡ್ಡಿ, ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಗಳಿಸಿಕೊಳ್ಳುವುದರ ಜೊತೆಗೆ ಇಂದಿನ ಆಧುನಿಕ ಜಗತ್ತಿಗೆ ಅವಶ್ಯಕವಾದ ಸಂವಹನ ಕೌಶಲ್ಯಗಳನ್ನು, ಕಲಿತು ವೃತ್ತಿ ನಿರ್ಮಾಣ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಡಾ. ಸಿದ್ದರಾಜು, ಇಂದಿನ ಜಗತ್ತಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ವಿಚಾರಧಾರೆಗಳು ಎಂದೆಂದಿಗೂ ಅತ್ಯವಶ್ಯಕ. ಡಾ.ಬಿ.ಆರ್ ಅಂಬೇಡ್ಕರ್‌ರವರ ಚಿಂತನೆಗಳೇ ನಮಗೆ ದಾರಿದೀಪ, ಎಲ್ಲರ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಆ ನಿಟ್ಟಿನಲ್ಲಿ ಭಾವೀ ಶಿಕ್ಷಕರರಾಗುವ ತಾವೆಲ್ಲರೂ ಜ್ಞಾನದ ಜೊತೆ ವೃತ್ತೀಯ ಕೌಶಲ್ಯಗಳಾದ ಸಂವಹನ, ಚಿತ್ರಕಲೆ, ಭಾಷಣ ಕಲೆಗಳನ್ನು ಕಲಿತು, ವಿವಿಧ ರಂಗಗಳಲ್ಲಿ ಸಾಧನೆ ಮಾಡುವ ಮೂಲಕ ಮಾನಸಿಕ ನೆಮ್ಮದಿ, ಸಂತೋಷದ ಜೀವನವನ್ನು ನಡೆಸಲು ಕಾರಣವಾಗಲಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಬಿ.ಇಡಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರುಗಳು, ಹಾಗೂ ನಿರ್ದೇಶಕರಾದ ಶ್ರೀಮತಿ ನೇತ್ರಾವತಿ ಸುಭಾಷ್, ಶ್ರೀಮತಿ ಸಾವಿತ್ರಿ ಗಣೇಶಪ್ಪ, ಶ್ರೀಯುತ ಹನುಮಂತಪ್ಪ ಎಸ್. ಸಂಶೋಧಕರು, ಶ್ರೀ ಪವನ್‌ರಾಜ್, ಶ್ರೀ ಪ್ರಜ್ವಲ್ ಕುಮಾರ್, ತೀರ್ಪುಗಾರರಾಗಿ ಶ್ರೀಯುತ ನಾಗೇಶ್ ಮುಖ್ಯಶಿಕ್ಷಕರು, ಹೊಸಮನೆ, ಶ್ರೀಯುತ ತಮಟೆ ಜಗದೀಶ್, ಕಲಾವಿದರು, ಭದ್ರಾವತಿ ಶ್ರೀಯುತ ಶಿವಕುಮಾರ್, ಚಿತ್ರಕಲಾ ಶಿಕ್ಷಕರು, ಡಾ.ವೈ.ಕೆ. ಹನುಮಂತಯ್ಯ, ಹಿರಿಯ ರಂಗ ಕಲಾವಿದರು ಭದ್ರಾವತಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಜರಿದ್ದರು.

ideology icorporated

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close