ತೀರ್ಥಹಳ್ಳಿಯಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಭೆ-meeting in Thirthahalli

Suddilive || Shivamogga

ತೀರ್ಥಹಳ್ಳಿಯಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಭೆ-Auto driver and owner meeting in Thirthahalli

Meeting, thirthahalli


ಇಂದು ಬೆಳಿಗ್ಗೆ ತೀರ್ಥಹಳ್ಳಿಯ ಡಿವೈಎಸ್ಪಿ ಅರವಿಂದ ಕಲಗುಜ್ಜಿರವರ ನೇತೃತ್ವದಲ್ಲಿ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಭೆಯನ್ನು ನಡೆದಿದ್ದು,  ಸಭೆಯಲ್ಲಿ ಹಲವು ಸೂಚನೆಗಳನ್ನ ಪೊಲೀಸರು ನೀಡಿದ್ದಾರೆ.‌

ಸುರಕ್ಷತೆಯ ದೃಷ್ಠಿಯಿಂದ ವೇಗದ ಮಿತಿಯಲ್ಲಿಯೇ ಆಟೋಗಳನ್ನು ಚಾಲನೆ ಮಾಡಿ  ಹಾಗೂ ಸಾರ್ವಜನಿಕರು / ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. NO PARKING ಸ್ಥಳಗಳಲ್ಲಿ ಆಟೋಗಳನ್ನು ನಿಲ್ಲಿಸಿ,  ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡದಂತೆ,  ಸಂಚಾರ ನಿಯಮಗಳ ಪಾಲಿಸುವಂತೆ ಸೂಚಿಸಲಾಗಿದೆ. 

ಆಟೋಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಆಟೋದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಿ. ಆಟೋ ಸ್ಟಾಂಡ್ ಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು  ಅಳವಡಿಸಿಕೊಳ್ಳುವಂತೆ ಮತ್ತು ಯಾವುದೆ ತುರ್ತು ಸಂದರ್ಭದಲ್ಲಿ, 112  ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಯಿತು. 

ಈ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯತ್ ಸದಸ್ಯ  ಸೊಪ್ಪುಗುಡ್ಡೆ ರಾಘವೇಂದ್ರ, ಪಿಐ ಇಮ್ರಾನ್ ಬೇಗ್, ಹಾಗೂ ತೀರ್ಥಹಳ್ಳಿ ಟೌನ್ ನ ಆಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.

meeting in Thirthahalli

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close