SUDDILIVE || SHIVAMOGGA
ಶಿರಡಿ ಪ್ರಭು ಟೂರ್ ಅಂಡ್ ಟ್ರಾವೆಲ್ಸ್ ಗೆ 4 ಲಕ್ಷ ರೂ ವಂಚನೆ -Shirdi Prabhu Tour and Travels cheated of Rs 4 lakh
ಶಿರಡಿ ಪ್ರಭು ಟೂರ್ ಅಂಡ್ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಣದ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.
ಹೊಸಮನೆಯ 1st ಕ್ರಾಸ್ ನಲ್ಲಿರುವ ಶಿರಡಿ ಪ್ರಭು ಟೂರ್ ಅಂಡ್ ಟ್ರಾವೆಲ್ ನಲ್ಲಿ ಕಳೆದ 3 ವರ್ಷದಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವಿವೇಕ ಎಂಬ ಯುವಕ ಮೇ.19 ರಂದು ಬೆಂಗಳೂರಿನಿಂದ ದೆಹಲಿಗೆ ಹೋಗಲು ರೈಲಿಗೆ ಆನ್ ಲೈನ್ ಬುಕಿಂಗ್ ಮಾಡಿರುತ್ತಾನೆ. 47 ಜನರಿಗೆ ಟಿಕೇಟ್ ಮಾಡಿಸಿ ಕಚೇರಿಯ ಬೀರುವಿನಲ್ಲಿ ಇಟ್ಟಿದ್ದನು.
ಈ ಬಗ್ಗೆ ಏಜೆನ್ಸಿ ನಡೆಸುತ್ತಿದ್ದ ಮಾಲೀಕರಿಗೂ ಈ ಟಿಕೇಟ್ ಬಗ್ಗೆ ಖಾತರಿಯಾಗಿತ್ತು. ಮೇ.21 ರಂದು ಟಿಕೇಟ್ ಕಚೇರಿಯ ತಿಚೋರಿಯಿಂದ ಮಾಯವಾಗಿತ್ತು. ಜೊತೆ 20 ಸಾವಿರ ರೂ. ಹಣ ಸಹ ಕಾಣೆಯಾಗಿತ್ತು. ಈ ಬಗ್ಗೆ ಏಜೆನ್ಸಿ ಮಾಲೀಕ ಅಣ್ಣಪ್ಪ ಪರಿಶೀಲಿಸಿದಾಗ ವಿವೇಕ್ 47 ಜನರ ಪ್ರಯಾಣದ ಟಿಕೇಟ್ ನ್ನ ರೈಲ್ವೆ ನಿಲ್ದಾಣದಿಂದ ವಿತ್ ಡ್ರಾ ಮಾಡಿರುವುದು ತಿಳಿದು ಬಂದಿದೆ.
3.80 ಲಕ್ಷ ರೂ ಹಣ ಪಡೆದು ವಿವೇಕ್ ಪರಾರಿಯಾಗಿರುವುದಾಗಿ ಅಣ್ಣಪ್ಪನವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Shirdi Prabhu Tour and Travels