SUDDILIVE || SHIVAMOGGA
ನಕಲಿ ವಿಗಾರ್ಡ್ ವೈರ್ ಬಾಕ್ಸ್ ಮಾರಾಟ-ದೂರು ದಾಖಲು-Fake Viguard wire box sale-complaint filed
ವಿಗಾರ್ಡ್ ಕಂಪನಿಯ ನಕಲಿ ಮಾರಾಟಗಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸವಳಂಗ ರಸ್ತೆಯ ಸರ್ಜಿ ಕನ್ವೆಷನಲ್ ಹಾಲ್ ಎದುರಿನ ವೀರಭದ್ರೇಶ್ವರ ಗ್ಲಾಸ್ ಅಂಡ್ ಪ್ಲೇವುಡ್ ಮಾಲೀಕರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಿರಿಯಾ ನಾಯ್ಕ್ ಎಂಬುವರು ಮೇ.22 ರಂದು ವೀರಭದ್ರೇಶ್ವರ ಗ್ಲಾಸ್ ಅಂಡ್ ಪ್ಲೇವುಡ್ ಅಂಗಡಿಯಿಂದ 27 ವಿಗಾರ್ಡ್ ಖರೀದಿದಿಸಿದ್ದರು. ಈ 27 ವಿಗಾರ್ಡ್ ವೈರ್ ಬಾಕ್ಸ್ ಗಳನ್ನ ಖರೀದಿಸಿದ್ದು ವಿಗಾರ್ಡ್ ವೆಬ್ ಸೈಟ್ ನಲ್ಲಿ ವೈರ್ ಗಳ ಮೇಲೆಯಿರುವ ಕ್ಯೂ ಆರ್ ಕೋಡ್ ಗಳು ಒಂದೇ ನಂಬರ್ ತೋರಿಸುತ್ತಿದ್ದವು.
ಇವುಗಳ ಬಗ್ಗೆ ಗಿರಿಯಾ ನಾಯ್ಕ್ ಕಂಪನಿಗೆ ಮಾಹಿತಿ ನೀಡಿದ್ದರು. 13-14 ವಿಗಾರ್ಡ್ ವೈರ್ ಬಾಕ್ಸ್ ಗಳಲ್ಲಿನ ಕ್ಯೂ ಆರ್ ಕೋಡ್ ಒಂದೇ ಇರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಚಂಡಿಘಡದ ಸ್ಪೀಡ್ ಸರ್ಚ್ ಅಂಡ್ ಸೆಕ್ಯೂರಿಟಿ ನೆಟ್ ವರ್ಕ್ ಪ್ರೈ ಲಿ., ಬೆಂಗೂರಿನ ಫೀಲ್ಡ್ ಆಫೀಸರ್ ಬಂದು ತಪಾಸಣೆ ನಡೆಸಿ ನಕಲಿ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.
Fake Viguard wire box sale