Suddilive. || Shivamogga
ಮಾದಿಗರು 61 ಆದಿ ಕರ್ನಾಟಕ ಎಂದು ನಮೂದಿಸಿ-ಹೆಚ್ ಆಂಜನೇಯ-Enter Madigaru 61 Adi Karnataka- H.Anjaneya
ಒಳ ಮೀಸಲಾತಿ ಸಮೀಕ್ಷೆ ಬಗ್ಗೆ ಇಂದು ಮಾಜಿ ಸಚಿವ ಹೆಚ್ ಆಂಜನೇಯಪ್ಪ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಕಳೆದ 30-35 ವರ್ಷದಿಂದ ಒಳಮೀಸಲಾತಿಗಾಗಿ ಹೋರಾಟ ಮಾಡಿದ್ದೇವೆ. 101 ಒಳ ಜಾತಿಗಳಿವೆ ಇದರಲ್ಲಿ ಹಿಂದುಳಿದವರು ಮಾದಿಗ ದಂಡೋರದವರಿದ್ದಾರೆ. ಗಾರೆ, ಚಪ್ಪಲಿ ಹೊಲಿಯುವ ಕಾರ್ಯದಲ್ಲಿದ್ದಾರೆ . ಗ್ರಾಮೀಣ ಪ್ರದೇಶದಲ್ಲಿ ಇವರೆಲ್ಲಾ ವಾಸಿಸುತ್ತಿದ್ದಾರೆ. ಇವರೆಲ್ಲಾ ನೋಂದಣಿಯಾಗಬೇಕು ಎಂದರು.
ಕೃಷಿ ಕಾಯಕದಲ್ಲಿ ಮಾದಿಗ ಜನಾಂಗವಿದೆ. ನಮ್ಮ ಸಂಖ್ಯೆಗೆ ಅನುಗುಣವಾಗಿ ನಮಗೆ ಮೀಸಲಾತಿ ಸಿಕ್ಕಿಲ್ಲ. ಉದ್ಯೋಗ, ಶಿಕ್ಷಣದಲ್ಲಿ 15% ನಿಂದ 17% ಏರಿಸಲಾಗಿದೆ. ಉದ್ಯೋಗ, ಮೆಡಿಕಲ್ ಸೀಟ್ ಸಿಗ್ತಾಯಿಲ್ಲ ಹಾಗಾಗಿ ನಮಗೆ ನಾವು 2% ಮೀಸಲಾತಿ ಸಿಗ್ತಾಯಿದೆ ಎಂಬ ಅನುಮಾನವಿತ್ತು.
ಈ ವೇಳೆ ಆಂದ್ರದ ಮಂದಕೃಷ್ಣ ಎಂಬ ದೊಡ್ಡ ನಾಯಕ ದೊಡ್ಡ ಹೋರಾಟ ಮಾಡಿದ ಕಾರಣ ಆಗ ಚಂದ್ರಬಾಬು ನಾಯ್ಡು ಮೀಸಲಾತಿ ಜಾರಿನೀಡಿದರು. ಅದಕ್ಕೂ ಕೋರ್ಟ್ ಗೆ ಹೋಗಿ ಸ್ಟೇ ತಂದರು. ಐದು ಜನರ ಪೀಠದ ಅರುಣ್ ಮಿಶ್ರ ಪೀಠ ಮರು ಪರಿಶೀಲಿಸಿ ಒಳ ಮೀಸಲಾತಿ ನೀಡಿದ ಚಂದ್ರಬಾಬು ನಾಯ್ಡು ಅವರ ಆದೇಶ ಎತ್ತಿಹಿಡಿದರು. ಆದರೂ ಮತ್ತೆ ಏಳು ಜನರ ಪೀಠಕ್ಕೆ ಮೀಸಲಾತಿ ವಿಷಯ ಹೋಯಿತು. ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ಹೊರಬಂತು ಎಂದು ವಿವರಿಸಿದರು.
ಆದರೆ ರಾಜ್ಯದ ಎಲ್ಲಾ ಪಕ್ಷಗಳು ಸಹಾಯ ಮಾಡಿದೆ. ಬಿಜೆಪಿಯ ಬೊಮ್ಮಾಯಿ ಸರ್ಕಾರ ಜೆಡಿಎಸ್ ಸಹ ಸಹಾಯ ಮಾಡಿತ್ತು. ಈಗ ಸಿದ್ದರಾಮಯ್ಯ ನವರ ಸರ್ಕಾರ ಒಳ ಮೀಸಲಾತಿ ಸರ್ವೆಗೆ ಸುಪ್ರೀಂ ಕೋರ್ಟ್ ನ ಮೂಲಕ ನೀಡಿದ್ದಾರೆ. ಮೊಬೈಲ್ ಆಪ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಚಿತ್ರದುರ್ಗದಲ್ಲಿ ನಾನು ನಾಗರೀಕರಾಗಿ ಈ ನಸಗಮೋಹನ್ ದಾಸರ ಸರ್ವೆ ಗಮನಿಸಿದ್ದೇನೆ ರೇಷನ್ ಕಾರ್ಡ್ ನಂಬರ್ ಫೀಡ್ ಮಾಡಿದರೆ ಅವರ ಎಲ್ಲಾ ಕುಟುಂಬದ ಹೆಸರುಗಳು ಡಿಸ್ಪ್ಲೇ ಆಗುತ್ತದೆ. ಅಗ ತಾನೆ ಹುಟ್ಟಿದ ಮಗುವಿನ ಹೆಸರು ದಾಖಲಾಗುವಂತೆ ಹೇಳಿದ್ದೇನೆ ಮೇ 5ರಿಂದ 23 ರ ಒಳಗೆ ಹಿಂದುಳಿದವರು ಬಹಳ ಎಚ್ಚರಿಕೆಯಿಂದ ಸರ್ವೆಯಲ್ಲಿ ನೋಂದಣಿ ಮಾಡಿಸಬೇಕು ಎಂದರು. .
ಮೇ.17 ರಿಂದ 19 ರವರೆಗೆ ಬೂತ್ ನಲ್ಲಿ ಹೆಸರು ನೋಂದಾಯಿಸದಿದ್ದರೆ ಅವಕಾಶವಿದೆ. 19 ರ ನಂತರ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಎಲ್ಲಾ ಜಾತಿ ಜನಾಂಗದ ಮನೆಯವರ ಮನೆಗೆ ಹೋಗಿ ಸರ್ವೆ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ. ಇದು ಸರಿಯಾದ ಕ್ರಮವಾಗಿದೆ. 54 ಅಂಶಗಳ ಮೇಲೆ ಸರ್ವೆ ನಡೆಯುತ್ತಿದೆ. ಅದಕ್ಕೆ ತಕ್ಕ ದಾಖಲಾತಿ ನೀಡಿ ಎಂದರು.
ಮಾದಿಗರು ಆದಿ ಕರ್ನಾಟಕ ಎಂದು ನಮೂದಿಸಬೇಕು. ವಲಯರು ಸಹ ಆದಿ ಕರ್ನಾಟಕ ಎಂದು ನಮೂದಿಸುತ್ತಾರೆ. ಹಾಗಾಗಿ 61 ಆದಿ ಕರ್ನಾಟಕ ಎಂದು ನಮೂದಿಸಬೇಕು. ಮುಖ್ಯಮಂತ್ರಿಗಳು ಒಳಮೀಸಲಾತಿ ಜಾರಿಗೆ ಬದ್ಧವಾಗಿದ್ದಾರೆ ಜನ ಎಲ್ಲೂ ಹೋಗದೆ ಮೊದಲು ಮೀಸಲಾತಿ ಸರ್ವೆಯಲ್ಲಿ ಭಾಗಿಯಾಗಿ ಎಂದು ಕರೆ ನೀಡಿದರು.
ಒಳ ಮೀಸಲಾತಿ ಜಾರಿಯಾದ ನಂತರ ಹುದ್ದೆಗಳು ಭರ್ತಿಯಾಗಲಿವೆ. ಜೂನ್ ತಿಂಗಳಲ್ಲಿ ಈ ಮೀಸಲಾತಿ ಜಾರಿಯಾಗು ಸಾಧ್ಯತೆಯಿದೆ. ಹಾಗಾಗಿ ಮೇ 23 ವರೆಗೆ ಸರಿಯಾಗಿ ಹೆಸರು ನೋಂದಾಯಿಸಿಕೊಳ್ಳಿ ಎಂದರು. ಇದಾದ ನಂತರ ಬೆಂಗಳೂರಿನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.
61 Adi Karnataka