MrJazsohanisharma

ನಿನ್ನೆಯ ಮರ್ಡರ್ ಪ್ರಕರಣದ ಆರೋಪಿಯ ಕಾಲಿಗೆ ಗುಂಡೇಟು!shot in the leg

 Suddilive || Bhadravathi

ನಿನ್ನೆಯ ಮರ್ಡರ್ ಪ್ರಕರಣದ ಆರೋಪಿಯ ಕಾಲಿಗೆ ಗುಂಡೇಟು!The suspect in yesterday's murder case was shot in the leg!

Shot, leg

ಭದ್ರಾವತಿಯಲ್ಲಿ ಕ್ರಿಕೆಟ್ ಮ್ಯಾಚ್ ಹಿನ್ನಲೆಯಲ್ಲಿ ನಡೆದ ಕೊಲೆ ಹತ್ಯೆಯ ಏ3 ಆರೋಪಿಯನ್ನ ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಬಲ ಕಾಲಿಗೆ ಗುಂಡೇಟು ತಗುಲಿದೆ. 

ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶವಪುರ ಬಡಾವಣೆಯಲ್ಲಿ ಕ್ರಿಕೆಟ್ ನಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಗಲಾಟೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಸಂಧಾನ ನಡೆಸಲು ಅರಣ್ ಮತ್ತು ಸಚಿನ್ ನಡುವೆ ಸಂಧಾನಕ್ಕೆ ಕರೆಯಲಾಗಿತ್ತು. ಸಂಧಾನದಲ್ಲಿ ಮದ್ಯವನ್ನೂ ಸಹ ಹರಿಸಲಾಗಿತ್ತು.


ಅರುಣ್ ಕ್ರಿಕೆಟ್ ನಡೆಯುವಾಗ ಸಚಿನ್ ಎಂಬಾತನಿಗೆ ಹೊಡೆದಿದ್ದ. ನಂತರ ಸಚಿನ್ ಅರುಣ್ ಗೆ ತಿಗಿಸಿಕೊಟ್ಟಿದ್ದ. ಇದಾದ ನಂತರ ಕೇಶವಪುರದಲ್ಲಿ ಕಾಂಪ್ರಮೈಸ್  ನಡೆಸಲು ಇಬ್ಬರು ಬಂದಿದ್ದರು‌. ಎಣ್ಣೆ ಹೊಡೆದಿದ್ದ ಎಲ್ಲರೂ ಸಚಿನ್, ಅರುಣ್ ಕುಮಾರ್,  ಸಂಜಯ್ ಸೇರಿದಂತೆ ಐದಾರು ಜನ ಅರುಣ್ ನ ಎದೆಗೆ ಚಾಕು ಇಳಿಸಿದ್ದರು. 

ಅರುಣ್ ಸ್ನೇಹಿತರು ನಂತರ ಸಂಜುವನ್ನ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ ಏ3 ಆರೋಪಿ ಅರುಣ್ ಕುಮಾರ್ ನನ್ನ ಹೊಸಮನೆ ಪೊಲೀಸರು ಬಂಧಿಸಲು ಹೋದಾಗ ಅರುಣ್ ಕುಮಾರ್ (19) ಯಾನೆ ಕೊಕ್ಕು ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. 

ಆತನ ಕಾಲಿಗೆ psi ಕೃಷ್ಣ ಕುಮಾರ್ ಬಿ ಮಾನೆ ಹೊಸಮನೆಯವರು ಗುಂಡು ಹಾರಿಸಿದ್ದಾರೆ. ಆತನನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಸಮನೆ ಕಾನ್ ಸ್ಟೇಬಲ್ ಗೂ ಪೆಟ್ಟುಬಿದ್ದಿದೆ. ಆರೋಪಿ ಅರುಣ್ ಕುಮಾರ್ ಮೇಲೆ ನಿನ್ಬೆ ಮರ್ಡರ್ ಪ್ತಕರಣ ಸೇರಿದಂತೆ ಐದು ಮೊಕದ್ದಮೆಗಳಿವೆ. 

shot in the leg

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close