SUDDILIVE || SHIVAMOGGA
ಪ್ರೀತಿಸಿ ಮದುವೆಯಾದನಿಂದಲೇ ಚಾಕು ಇರಿತ-A knife attack after marrying for love
ಶಿವಮೊಗ್ಗದ ಹೊಸಮನೆಯಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯಿಂದ ಪತ್ನಿಗೆ ಚಾಕು ಇರಿಯಲಾಗಿದೆ. ಪ್ರೀತಿಸಿ ಮದುವೆಯಾಗಿದ್ದವನಿಂದಲೇ ಚಾಕು ಇರಿದು ಕೊಲೆಯ ಯತ್ನ ನಡೆದಿದ್ದು ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಪದ್ಮಾವತಿ ಮತ್ತು ವಿನಯ್ ಕುಮಾರ್ ಎಂಬುವರು ಹೊಸಮನೆ ಎರಡನೇ ತಿರುವಿನಲ್ಲಿ 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ವಿನಯ್ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಇಬ್ವರಿಗೆ 09 ವರ್ಷದ ಗಂಡು ಮಗನಿದ್ದನು. ಪದ್ಮಾವತಿ ಅನ್ನಪೂರ್ಣ ಪಿಜಿ ನಡೆಸುತ್ತಿದ್ದರು. ಕಳೆದ ಎರಡು ವರ್ಷದಿಂದ ಪತಿ ಪತ್ನಿಯರ ನಡುವೆ ವೈಮನಸ್ಸು ಆರಂಭವಾಗಿತ್ತು
ಪತಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದರು. ಪತ್ನಿ ದೂರು ನೀಡಿರುವುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪತಿ ಮಲಗಿದ್ದ ಕೋಣೆಗೆ ಬಂದು ನಿನ್ನೆ ರಾತ್ರಿ 1 ಗಂಟೆಗೆ ಪತ್ನಿಯ ಕುತ್ತಿಗೆಗೆ ಕೈಹಾಕಿದ್ದ ವಿನಯ್ ಕುಮಾರ್ ಕುತ್ತಿಗೆ ಹಿಸುಕಲು ಯತ್ನಿಸಿದ್ದ. ಆತನನ್ನ ತಳ್ಳಲಾಗದೆ ಮಹಿಳೆ ಕಿರುಚಿಕೊಂಡಿದ್ದರು.
ವಿನಯ್ ತಾಯಿ ಬಂದು ರೂಂ ನ ಬಾಗಿಲು ಬಡೆದಿದ್ದಾರೆ. ಕನಸು ಬಿದ್ದಿತ್ತು ಹಾಗಾಗಿ ಗಾಬರಿಯಾಗಿದ್ದಾಳೆ ಎಂದು ಸಮ್ಜಾಯಿಷಿ ನೀಡುತ್ತಿದ್ದ ವೇಳೆಯಲ್ಲೇ ಪತ್ನಿ ಅತ್ತೆ ರೂಂಗೆ ಬಂದು ಮಲಗಿದ್ದರು. ಅಲ್ಲಿಗೆ ಚಾಕು ಹಿಡಿದುಕೊಙಡು ಬಂದ ವಿನಯ್ ಪತ್ನಿಯ ಪಕ್ಕೆಗೆ ಇರಿದಿದ್ದಾನೆ. ನಂತರ ಸ್ನೇಹಿತೆಗೆ ಹಾಗೂ 112 ಗೆ ಕರೆ ಮಾಡಿ ಪದ್ಮಾವತಿ ಗಂಡನ ಸಾವಿನ ಅಂಗಳದಿಂದ ಬಜಾವ್ ಆಗಿದ್ದಾರೆ.
ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ವಿನಯ್ ಅವರನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೊಳಡಿಸಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
A knife attack