ಮಾಲೀಕರು, ಅಧಿಕಾರಿಗಳ ವಿರುದ್ಧ ಕಟ್ಟಡ ಕಾರ್ಮಿಕ ಸಂಘಟನೆ ಡಿಸಿಗೆ ಮನವಿ-The construction workers

 SUDDILIVE || SHIVAMOGGA

ಮಾಲೀಕರು, ಅಧಿಕಾರಿಗಳ ವಿರುದ್ಧ ಕಟ್ಟಡ ಕಾರ್ಮಿಕ ಸಂಘಟನೆ ಡಿಸಿಗೆ ಮನವಿ-The construction workers' union filed a petition with the DC against the officials and officials



ಕಾರ್ಮಿಕರನ್ನ ಕಡಿಮೆ ಸಂಬಳಕ್ಕೆ ಹೆಚ್ಚಿನ ಸಮಯ ದುಡಿಸಿಕೊಳ್ಳುತ್ತಿರುವ ಮಾಕೀಜರ ವಿರುದ್ಧ ಹಾಗೂ ಕಣ್ಣಿದ್ದರೂ ಕುರುಡರಂತೆ ನಟಿಸುತ್ತಿರುವ ಕಾರ್ಮಿಕ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರ ಸಂಘ ದೇವು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. 

ಕೆಲಸಗಾರರಿಗೆ ತುಂಬಾ ಕಡಿಮೆ ಸಂಬಳ ನೀಡಿ ಹೆಚ್ಚು ಸಮಯ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಈ ಬಗ್ಗೆ ಕಾರ್ಮಿಕ ಇಲಾಖೆಯವರಿಗೂ ಗೊತ್ತಿದ್ದರೂ ಸಹ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ. ಇದಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. 

ಶಿವಮೊಗ್ಗ ನಗರದಾದ್ಯಂತ ಸುಮಾರು ಅಂಗಡಿಗಳು, ಕಛೇರಿಗಳು, ಬಟ್ಟೆ ಅಂಗಡಿಗಳು, ಫ್ಯಾನ್ಸಿ ಸ್ಟೋರ್‌ಗಳು, ಮೆಡಿಕಲ್‌ಗಳು, ಹೋಟೆಲ್, ಗಾರ್ಮೇಂಟ್ಸ್‌ಗಳು ಮಾಲ್‌ಗಳು ಹಾಗೂ ಮಂಡಿಗಳು, ಬ್ಯೂಟಿ ಪಾರ್ಲ‌ರ್ಗಗಳು ಇನ್ನು ಅನೇಕ ಶಾಪ್‌ಗಳಲ್ಲಿ ಮತ್ತು ಆಫೀಸ್‌ ಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸ ಮಾಡಿಕೊಂಡು ತಮ್ಮಗಳ ಜೀವನ ಸಾಗಿಸುತ್ತಿದ್ದಾರೆ. 

ಇವರುಗಳು ತೀರ್ಥಹಳ್ಳಿ, ಲಕ್ಕವಳ್ಳಿ ಇನ್ನು ದೂರದ ಊರುಗಳಿಂದ ಬಂದು ಕೆಲಸ ಮಾಡುತ್ತಿದ್ದಾರೆ. ಕೆಲವು ಮಾಲೀಕರು ತಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಕಡಿಮೆ ಕೂಲಿ ಕೊಟ್ಟು ಹೆಚ್ಚು ಸಮಯ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕೆಲಸಗಾರರು ಧ್ವನಿ ಎತ್ತುವಂತಿಲ್ಲ. ಕೆಲಸಗಾರರು ಮಾಲೀಕರು ಕೊಟ್ಟ ಸಂಬಳವನ್ನು ಪಡೆದುಕೊಂಡು ಅವರು ಹೇಳಿದ ಕೆಲಸಗಳನ್ನು ಹೇಳಿದ ಸಮಯದವರೆಗೆ ಮಾಡುತ್ತಿದ್ದಾರೆ. ಇದು ಕೆಲಸಗಾರರಿಗೆ ಅನಿವಾರ್ಯವಾಗಿದೆ.

ಕೆಲ ಅಂಗಡಿ ಮಾಲೀಕರು 4 ರಿಂದ 8 ಸಾವಿರ ರೂಗಳನ್ನು ಕೊಟ್ಟು ಬೆಳಗ್ಗೆ 9:00 ರಿಂದ ಸಂಜೆ 9:00 ಗಂಟೆಯವರೆಗೆ ದುಡಿಸಿಕೊಳ್ಳುತ್ತಿದ್ದಾರೆ. ಕೆಲ ಕೆಲಸಗಾರರು ಈ ಬಗ್ಗೆ ಸಂಘಟನೆಯೊಂದಿಗೆ  ಹೇಳಿಕೊಂಡಿದ್ದಾರೆ. ಮತ್ತು ಕೆಲಸಗಾರರಿಗೆ ಇ.ಎಸ್.ಐ ಸೌಲಭ್ಯ ಇರುವುದಿಲ್ಲ. ಇಷ್ಟು ಕಡಿಮೆ ಸಂಬಳ ಪಡೆದುಕೊಂಡು ಈಗಿನ ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ. 

ತಿಂಗಳಿಗೆ 4 ರಿಂದ 8 ಸಾವಿರ ಸಂಬಳ ತೆಗೆದುಕೊಂಡು ಮನೆ ಬಾಡಿಗೆ, ಸಿಲೆಂಡರ್, ದಿನಸಿ, ಆಸ್ಪತ್ರೆ ಮತ್ತು ವಿದ್ಯಾಭ್ಯಾಸ ಮಾಡಿಸಲು ಸಾಕಾಗದೇ ಸಂಘಗಳಲ್ಲಿ ಸಾಲಸೂಲ ಮಾಡಿಕೊಂಡು ಬಂದ ತಿಂಗಳ ಸಂಬಳದಲ್ಲಿ ಸಂಘಗಳ ಸಾಲ ತೀರಿಸಿಕೊಂಡು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಇದನ್ನು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. 

ಆದ್ದರಿಂದ ಜಿಲ್ಲಾಧಿಕಾರಿಗಳು ಶಿವಮೊಗ್ಗ ನಗರದಾದ್ಯಂತ ಕೆಲಸ ಮಾಡುವ ಕೆಲಸಗಾರರಿಗೆ ತಿಂಗಳಿಗೆ 15 ರಿಂದ 20 ಸಾವಿರ ರೂಗಳ ಸಂಬಳ ನೀಡುವಂತೆ ಮತ್ತು 8 ಗಂಟೆಗಳ ಸಮಯ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕು ಹೆಚ್ಚು ಸಮಯ ಕೆಲಸ ಮಾಡಿಸಿಕೊಂಡರೆ ಅದಕ್ಕೆ ಹೆಚ್ಚುವರಿ ಸಂಬಳ ನೀಡುವಂತೆ ಹಾಗೂ ಇ.ಎಸ್.ಐ ಸೌಲಭ್ಯ ಸಿಗುವಂತೆ ಮಾಡಬೇಕೆಂದು.

ಒಂದು ವೇಳೆ ಇವುಗಳನ್ನು ಸಂಬಂಧಪಟ್ಟ ಮಾಲೀಕರು ಪಾಲಿಸದಿದ್ದಲ್ಲಿ ಮತ್ತು ಮಾಲೀಕರು ಇದನ್ನು ಪಾಲಿಸುವಂತೆ ಕಾರ್ಮಿಕ ಇಲಾಖೆಯವರು ಮಾಡದಿದ್ದರೆ, ಮಾಲೀಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಇರುದ್ಧ ಕ್ರಮ ಕೈಗೊಳ್ಳುಬೇಕು. ಈ ರೀತಿಯ ಅನುಕೂಲ ಮಾಡಿಕೊಡುವವರೆಗೂ ನಮ್ಮ ಸಂಘಟನೆಯು ಹೋರಾಟ ಮಾಡುತ್ತದೆ ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಲಾಗಿದೆ. 

The construction worker

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close