SUDDILIVE || SHIVAMOGGA
ಶ್ರೀ ವಿದ್ಯಾರಣ್ಯ ಗುರುಕುಲಮ್ ನಲ್ಲಿ ಪ್ರವೇಶ ಆರಂಭ-Admissions begin at Sri Vidyaranya Gurukulam
ನಗರದ ಬಿಬಿ ರಸ್ತೆಯಲ್ಲಿರುವ ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್ ಇದೇ ಮೊದಲ ಬಾರಿಗೆ ನರ್ಸರಿ ಹಂತದಲ್ಲಿ ಮಕ್ಕಳಿಗೆ ಅತ್ಯಾಧುನಿಕ ತ್ರಿ ಡಿ ವಿಸ್ಯುವಲ್ ತರಗತಿಗಳನ್ನು ಆರಂಭಿಸುತ್ತಿದ್ದು, ಪ್ರವೇಶ ಪ್ರಕ್ರಿಯೆ ಈಗ ಆರಂಭವಾಗಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಅರುಣ್ ಕುಮಾರ್ ಜಿ. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್ ವತಿಯಿಂದ ನರ್ಸರಿ ತರಗತಿಗಳು ಶುರುವಾಗಿ ಇದೇ ಎರಡನೇ ವರ್ಷ. ಮೊದಲ ವರ್ಷ ೧೭ ಮಕ್ಕಳು ನರ್ಸರಿಗೆ ಸೇರಿದ್ದವು. ಅವರ ಮೊದಲ ವರ್ಷದ ತರಗತಿಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಮಕ್ಕಳ ಪೋಷಕರು ತುಂಬಾನೆ ಖುಷಿ ಪಟ್ಟಿದ್ದಾರೆ ಎಂದು ತಿಳಿಸಿದರು.
ಸದ್ಯಕ್ಕೆ ಈಗ ಶ್ರೀ ವಿದ್ಯಾರಣ್ಯ ಗುರು ಕುಲಮ್ ನಲ್ಲಿ ಡೇ ಕೇರ್( ಅಮ್ಮನ ಮಡಿಲು), ನರ್ಸರಿ( ಮಾತೃಛಾಯಾ), ಶಿಶು ವಿಹಾರ( ಎಲ್ ಕೆಜಿ) ಮತ್ತು ಶಿಶು ಮಂದಿರ( ಯುಕೆಜಿ) ತರಗತಿಗಳು ನಡೆಯಲಿವೆ. ಮಕ್ಕಳಿಗೆ ಭಾರತೀಯ ಸಂಸ್ಕೃತಿ ಪರಂಪರೆ ಮತ್ತು ವಿಚಾರಗಳನ್ನು ಒಳಗೊಂಡ ಮೌಲ್ಯಯುತ ಶಿಕ್ಷಣವನ್ನು ಸಣ್ಣ ವಯಸ್ಸಿನಿಂದಲೇ ಕಲಿಸಲಾಗುತ್ತದೆ ಎಂದರು.
ಉನ್ನತ ಧ್ಯೇಯೋದ್ದೇಶಗಳನ್ನು ಇಟ್ಟು ಕೊಂಡು ಕಳೆದ ವರ್ಷ ನಮ್ಮ ಸಂಸ್ಥೆಯನ್ನು ಶುರು ಮಾಡುವಾಗ ದಕ್ಷಿಣಾಮ್ಮಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಮಹಾ ಸ್ವಾಮಿಗಳ ಬಂದು ದಿವ್ಯ ಸಾನ್ನಿದ್ಯ ವಹಿಸಿ, ಅವರ ಅಮೃತಾ ಹಸ್ತದಿಂದ ಗುರುಕುಲವನ್ನು ಪ್ರಾರಂಭಿಸಿದ್ದರು. ಅವರ ಆಶೀರ್ವಾದಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಯು ಮಕ್ಕಳಲ್ಲಿ ಸಚ್ಚಾರಿತ್ರ್ಯ, ಸದ್ವಿಚಾರ, ಸದ್ಗುಣಗಳನ್ನು ಕಲಿಸುವ ಉದ್ದೇಶವನ್ನು ಹೊಂದಿದೆ. ಆಸಕ್ತರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಬಹುದು ಎಂದರು. ಗೋಷ್ಠಿಯಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಎನ್. ಎಲ್. ಪ್ರಸಾದ್, ಪ್ರಾಂಶುಪಾಲರಾದ ವೀಣಾ ಅರುಣ್, ಟ್ರಸ್ಟಿಗಳಾದ ಮಂಜುನಾಥ್, ಪವನ್ ಕಾರಂಜಿ ಮತ್ತು ಗೋಪಾಲಕೃಷ್ಣ ಇದ್ದರು.
Admissions begin