SUDDILIVE || SHIVAMOGGA
ಕಂಚಿನ ಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವರ ರಥೋತ್ಸವ-Kanchinabagilu Kote Sri Anjaneya Swamy God's Chariot Festival
ಹಳೆನಗರ ಕಂಚಿನ ಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವರ ರಥೋತ್ಸವ ಸೋಮವಾರ ಮಧ್ಯಾಹ್ನ ಜರುಗಿತು
ಮೇ.17 ರ ಶನಿವಾರದಿಂದ ಮೂರು ದಿನಗಳ ಕಾಲ ಪೂಜಾ ಕಾರ್ಯಗಳನ್ನು ನಡೆಸಿ ಸೋಮವಾರ ರಥೋತ್ಸವದ ರಾಜಬೀದಿ ಉತ್ಸವ ನಡೆಸಲಾಯಿತು ಶನಿವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಗಣಪತಿ ಪೂಜೆ ಪುಣ್ಯಾಹ ರಾಕ್ಷೋಘ್ನ ಹೋಮ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ದೊಂದಿಗೆ ಮಹಾಮಂಗಳಾರತಿಯನ್ನು ನಡೆಸಲಾಯಿತು.
18ರ ಭಾನುವಾರ ದೇವನಾಂದಿ ಪಣ್ಣಾರಿ ಕೇಳ ಧ್ವಜಾರೋಹಣ ದೊಂದಿಗೆ ಅನೇಕ ಪೂಜಾ ವಿಧಾನಗಳನ್ನು ನಡೆಸಲಾಯಿತು 18ರ ಸೋಮವಾರ ನವಗ್ರಹ ಹೋಮ ಅಧಿವಾಸ ಹೋಮ ರಥ ಶುದ್ಧೀಕರಣ ನಂತರ ಪೂಜೆಗಳನ್ನು ನೆರವೇರಿಸಿ ಶ್ರೀ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ಕೊಂಡೊಯ್ದು ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥೋತ್ಸವ ಮುನ್ನ ಕೆ ಆರ್ ಐ ಡಿ ಎಲ್ ಅಧ್ಯಕ್ಷ ಮತ್ತು ಶಾಸಕ ಬಿಕೆ ಸಂಗಮೇಶ್ವರ ರವರ ಅನುದಾನದ ನಿದಿಯಲ್ಲಿ ರೂ 10 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ತ್ಯಾಗ ಶಾಲಾ ಉದ್ಘಾಟನೆಯನ್ನು ಶಾಸಕರ ನೆರವೇರಿಸಿದರು ನಂತರ ನಡೆದ ಸಭಾ ವೇದಿಕೆಯಲ್ಲಿ ಶಾಸಕ ಬಿಕೆ ಸಂಗಮೇಶ್ವರ ಹಿರಿಯ ಪತ್ರಕರ್ತ ಕಣ್ಣಪ್ಪ ನಗರಸಭಾ ಸದಸ್ಯ ಬಿಟಿ ನಾಗರಾಜ್ ಸಮಿತಿ ಸದಸ್ಯ ಶಿವಣ್ಣಗೌಡ ಚೆನ್ನೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ರಥೋತ್ಸವದಲ್ಲಿ ತಹಶೀಲ್ದಾರ್ ಪರಸಪ್ಪ ಕುರುಬರ ಪೌರಾಯುಕ್ತ ಪ್ರಕಾಶ್ ಚನ್ನಣ್ಣನವರ್ ಟೌನ್ ಸರ್ಕಲ್ ಇನ್ಸ್ ಪೆಕ್ಟರ್ ಹಳೇನಗರ ಮತ್ತು ಹೊಸಮನೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು ಮೆಸ್ಕಾಂ ನೌಕರರು ರಥಸಾಗಲು ಅಡಚಣೆಯಾಗದಂತೆ ಗಮನಹರಿಸಿದರೆ ಆರಕ್ಷಕ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು ಉತ್ಸವದ ನಂತರ ಭಕ್ತರಿಗೆ ಮಹಾಪ್ರಸಾದ ವನ್ನು ವಿತರಿಸಲಾಯಿತು
ಬಿಸಿಲಿನ ತಾಪ ಕಂಡು ದೇವಸ್ಥಾನದ ಬಳಿ ಪಾನಕ ಮತ್ತು ಕೋಸುಂಬರಿಯನ್ನು ಭಕ್ತರು ವಿತರಿಸಿದರು.
Anjaneya Swamy God's Chariot Festival