SUDDILIVE || BHADRAVATHI
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಲಕ್ಷ ಲಕ್ಷ ರೂ.ವಿನ ಲಂಚದ ಆರೋಪ!Allegations of bribery worth lakhs of rupees for the post of Gram Panchayat President!
ಭದ್ರಾವತಿಯ ದೊಣಬಘಟ್ಟದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಣದ ಹೊಳೆ ಹರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸದಸ್ಯರಿಗೆ ತಲಾ 1 ಲಕ್ಷ ರೂ. ಹಣ ಪಡೆದಿದ್ದು, ಹಣ ಪಡೆದ 10 ಜನರ ವಿರುದ್ಧ ಗ್ರಾಪಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೌಸರ್ ಭಾನು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
2020 ರಲ್ಲಿ ಕೌಸರ್ ಭಾನು ಅವರು ದೊಣಬಘಟ್ಟದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಆಸೀಫ್ ಅಲಿ, ಜುಲ್ಫಿಯಾ ಭಾನು, ಗುಲ್ಜರ್ ಭಾನು, ಶಬನಾಭಾನು, ರಸೂಲ್ ಸಾಬ್, ಜೋಹರ್ ಭಾನು, ಶಮೇಮ್ ಬಾನು, ಅಮದ್ ಅಲಿ, ಮಲ್ಲಮ್ಮ ಹಾಗೂ ಹಾಲಮ್ಮನವರು ಕೌಸರ್ ಭಾನು ಬಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾಗಿ ಒಬ್ಬೊಬ್ಬರು ತಲಾ ಒಂದು ಲಕ್ಷ ರೂ. ಹಣ ಪಡೆದಿದ್ದರು.
ಆಯ್ಕೆಯಾಗದಿದ್ದಾಗ 16 ತಿಂಗಳ ಒಳಗಾಗಿ ಹಣ ನೀಡುವುದಾಗಿ 10 ಜನ ಭರವಸೆ ನೀಡಿದ್ದರು. 16 ತಿಂಗಳು ಕಳೆದರೂ ಯಾವ ಹಣವೂ ಬಂದಿಲ್ಲ. ನಂತರ ಆರೋಪಿತರೆಲ್ಲರೂ ಕೌಸರ್ ಮನೆಯ ಬಳಿ ಬಂದು ಯಾವ ಹಣವೂ ನೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಘಟನೆ 2022 ರಲ್ಲಿ ನಡೆದಿತ್ತು. ಈ ಘಟನೆ ನಂತರ ಪಿಸಿಆರ್ ಮೂಲಕ ದೂರು ದಾಖಲಿಸಲಾಗಿದೆ.
post of Gram Panchayat President