SUDDILIVE || SHIVAMOGGA
ಸದ್ದುಗದ್ದಲವಿಲ್ಲದೆ ಮತ್ತೊಂದು ಸೇತುವೆ ಉದ್ಘಾಟನೆ-Another bridge inaugurated without any fuss
ಮತ್ತೊಂದು ರಾಷ್ಟ್ರೀಯ ಹೆದ್ದಾರಿ-13 ರ ಸೇತುವೆಯೊಂದು ಸದ್ದುಗದ್ದಲವಿಲ್ಲದೆ ಉದ್ಘಾಟನೆಯಾಗಿದೆ. ಸಂಸದರ ಬಹು ನಿರೀಕ್ಷಿತ ಅಭಿವೃದ್ಧಿ ಕಾರ್ಯದಲ್ಲೊಂದಾದ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-13 ರ ಹೊಳೆಹೊನ್ನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನ ದಿಡೀರ್ ಎಂದು ಉದ್ಘಾಟಿಸಲಾಗಿದೆ.
ಏ.26 ರಂದು ಭದ್ರಾವತಿಯ ಕಡದಕಟ್ಟೆಯ ಮೇಲ್ಸೇತುವೆ ಉದ್ಘಾಟನೆ ನಡೆದಿತ್ತು. ಇದೂ ಸಹ ಸದ್ದುಗದ್ದಲ ವಿಲ್ಲದೆ ಉದ್ಘಾಟನೆಯಾಗಿತ್ತು. ಈಗ ಇನ್ನೊಂದು ಸೇತುವೆ ಉದ್ಘಾಟನೆಯಾಗಿದೆ. ಇದನ್ನೆಲ್ಲಾ ಗಮನಿಸಿದರೆ ಇದೇ ರೀತಿ ಒಂದು ದಿನ ಸಿಗಂದೂರು ಮೇಲ್ಸೇತುವೆಯೂ ದಿಡೀರ್ ಎಂದು ಉದ್ಘಾಟನೆಗೊಂಡರೆ ಅಚ್ಚರಿಪಡುವಂತಿಲ್ಲ.
ಶಿವಮೊಗ್ಗ - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ - 13 ರ ನಡುವೆ ಹಾದುಹೋಗುವ ಹೊಳೆಹೊನ್ನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸುಸಜ್ಜಿತ ನೂತನ ಸೇತುವೆ ಹಾಗೂ ಬೈಪಾಸ್ ರಸ್ತೆಯನ್ನು ಇಂದು ಸಾರ್ವಜನಿಕ ಬಳಕೆಗೆ ಅಧಿಕೃತವಾಗಿ ಲೋಕಾರ್ಪಣೆ ಗೊಳಿಸಲಾಯಿತು.
ಒಟ್ಟು 518.00 ಕೋಟಿ ವೆಚ್ಚದಲ್ಲಿ 106 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸುವ ಈ ಯೋಜನೆಯಲ್ಲಿ ಸುಮಾರು 80.00 ಕೋಟಿ ವೆಚ್ಚದಲ್ಲಿ ಹೊಳೆಹೊನ್ನೂರು ಸೇತುವೆ ಮತ್ತು ಬೈಪಾಸ್ ಅಭಿವೃದ್ಧಿ ಪಡಿಸಿ ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ.
ಈ ಸಮಯದಲ್ಲಿ ಶಾಸಕರಾದ ಡಾ.ಧನಂಜಯ ಸರ್ಜಿ ಅರುಣ್ ಅವರು, ಶ್ರೀಮತಿ ಭಾರತಿ ಶೆಟ್ಟಿ ಅವರು, ಗ್ರಾಮಾಂತರ ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯಕ್ ಅವರು, ಮಂಡಲ ಅಧ್ಯಕ್ಷರಾದ ಶ್ರೀ ಮಲ್ಲೇಶಪ್ಪ ಅವರು ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.
Another bridge inaugurated without any fuss