SUDDILIVE || SHIVAMOGGA
20 ನಿಮಿಷ ಶಿವಮೊಗ್ಗ ನಗರದಲ್ಲಿ ಸುರಿದ ಮಳೆ-20 minutes of rain in Shivamogga city
ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶಿವಮೊಗ್ಗದಲ್ಲಿ ಎರಡು ದಿನ ಯಲ್ಲೋ ಅಲರ್ಟ್ ನಡುವೆ ಇಂದು ಬೆಳಿಗ್ಗೆ 11 ಗಂಟೆಗೆ ಸುರಿದ ಮಳೆ ಹಲವೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅಡ್ಡಿ ಉಂಟಾಗಿದೆ.
ಶಿವಮೊಗ್ಗದ ಜೈಲ್ ರಸ್ತೆ ಕಾಂಗ್ರೆಸ್ ಕಚೇರಿ ಮೊದಲಾದ ಕಡೆ 20 ನಿಮಿಷದ ಮಳೆಗೆ ಅವಾಂತರ ಸೃಷ್ಠಿಸಿದೆ. ಜೈಲ್ ರಸ್ತೆಯಂತೂ ಅಕ್ಷರಶಃ ನೀರಿನಲ್ಲಿ ಮುಳಿಗಿದೆ. ಜೈಲ್ ವೃತ್ತದ ಬಳಿ ದ್ವಿಚಕ್ರವಾಹನಗಳ ಟಯರ್ ಗಳು ಅರ್ಧ ಮುಳುಗಿವೆ.
ಅದರಂತೆ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆ ಎಮದಿನಂತೆ ಇವತ್ತು ಮುಳುಗಿದೆ. ಒಂದು ವೇಳೆ ಮಳೆ ಮುಂದುವರೆದಿದ್ದರೆ ವಾಹನ ಸವಾರರು ಇನ್ನೂ ಕಷ್ಟಪಡುವಂತಾಗುತ್ತಿತ್ತು.
Rain in Shivamogga city