ಉಗ್ರರ ಗುಂಡಿನ ದಾಳಿಯಲ್ಲಿ ಹತರಾದ ಮಂಜುನಾಥ್ ಮನೆಗೆ ಅಸ್ಸಾಂ ಸರ್ಕಾರದ ಸಚಿರು ಭೇಟಿ, 5 ಲಕ್ಷ ರೂ. ಚೆಕ್ ನ್ನ ಪರಿಹಾರವಾಗಿ ನೀಡಿದ ಸಚಿವರು- Assam government pays brief visit

SUDDILIVE || SHIVAMOGGA

ಉಗ್ರರ ಗುಂಡಿನ ದಾಳಿಯಲ್ಲಿ ಹತರಾದ ಮಂಜುನಾಥ್ ಮನೆಗೆ ಅಸ್ಸಾಂ ಸರ್ಕಾರದ ಸಚಿರು ಭೇಟಿ, 5 ಲಕ್ಷ ರೂ. ಪರಿಹಾರ-Assam government pays brief visit to Manjunath's house, who was killed in terrorist attack, announces Rs 5 lakh compensation

Assam, government

ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಹತ್ಯೆರಾದ ಶಿವಮೊಗ್ಗದ ವಿಜಯನಗರದಲ್ಲಿರುವ  ಮಂಜುನಾಥ್ ಅವರ ಮನೆಗೆ ಅಸ್ಸಾಂ ಬಿಜೆಪಿ ಸರ್ಕಾರದ ಕೈಗಾರಿಕ ಸಚಿವ ಬಿಮಲ್ ಬೋರಾ ಇಂದು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಪತ್ನಿ ಆರ್ ಪಲ್ಲವಿಗೆ ಸರ್ಕಾರದ 5 ಲಕ್ಷ ರೂ. ಚೆಕ್ ಮತ್ತು ಸರ್ಕಾರದ ಪತ್ರವನ್ನ‌ನೀಡಿದರು. 

ಏ.22 ರಂದು ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ಹತ್ಯೆಯಲ್ಲಿ ದೇಶದ 26 ಜನ ಹತ್ಯೆಯಾಗಿದ್ದರು. ಇದರಲ್ಲಿ ಶಿವಮೊಗ್ಗದ ಮಂಜುನಾಥ್ ಸಹ ಸಾವನ್ನಪ್ಪಿದ್ದರು. ಇಂದು ಅಸ್ಸಾಂ ಸರ್ಕಾರದ ಸಚಿವ ಬಿಮಲ್ ಬೋರಾ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. 

ಪತ್ನಿ ಪಲ್ಲವಿಯವರು ಪೆಲ್ಗಾಮ್ ನಲ್ಲಿ ರಜೆ ದಿನಗಳಿಗೆ ಹೋದಾಗ ಉಗ್ರರ ದಾಳಿಗೆ  ಮನೆಯವರನ್ನ ಕಳೆದುಕೊಳ್ಳಬೇಕಾಯಿತು. 15 ಸೆಕೆಂಡ್ ನಲ್ಲಿ ಎಲ್ಲ ಘಟನೆಗಳು ನಡೆದುಹೋಯಿತು. ಉಗ್ರನೊಬ್ಬ ಪತಿಜೊತೆಯಿದ್ದ ಅಭಿಜೈಯನ್ನ ಕರೆದುಕೊ ಎಂದು ಆರ್ಡರ್ ಕೊಡುತ್ತಿದ್ದಂತೆ 26 ಜನರ ರಕ್ತ ಚಿಮ್ಮಿಸಿದ್ದನ್ನ ಸಚಿವ ಬೋರಾರಿಗೆ ತಿಳಿಸಿದರು. 


ಕಷ್ಟದ ಕಾಲದಲ್ಲಿ ನನಗೆ ಎಲ್ಲರೂ ಸಹಾಯ ಮಾಡಿದರು. ದುಖದಲ್ಲಿ ನೀವೆಲ್ಲರೂ ಬಂದು ಸಾಂತ್ವಾನ ಹೇಳುತ್ತಿರುವುದು ನಮಗೆ ಮನಸ್ಸು ಉಮ್ಮಳಿಸಿ ಬರುತ್ತಿದೆ ಎಂದು ಭಾವುಕರಾದರು. ಮಗ ಅಭಿಜೈಯ ವಿದ್ಯಾಭ್ಯಾಸದ ಬಗ್ಗೆನೂ ಸಚಿವರು ಕೇಳಿ ಖುಷಿಪಟ್ಟರು. ಆರಂಭದಲ್ಲಿ ಮಂಜುನಾಥ್ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿದರು‌. 

ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವ ಬಿಮಲ್ ಬೋರಾ ಅಸ್ಸಾಂ ಸರ್ಕಾರ ನೊಂದವರ ಜೊತೆಯಿದೆ. ಮುಖ್ಯಮಂತ್ರಿ ಹಿಮಂತ್ ಕುಮಾರ್ ಬಿಶ್ವಾಸ್ ಅವರ ಆದೇಶದ ಮೇರೆಗೆ ಪೆಹಲ್ಗಾಮ್ ನಲ್ಲಿ ಹತ್ಯೆಯಾದ 26 ಜನರ ಕುಟುಂಬಕ್ಕೆ ಪರಿಹಾರ ನೀಡಲು ತೀರ್ಮಾನಿಸಿದ್ದು ಪರಿಹಾರ ಕೊಡಲಾಗುತ್ತಿದೆ. ಕುಟುಂಬದ ದುಖದಲ್ಲಿ ಅಸ್ಸಾಂ ಸರ್ಕಾರ ಭಾಗಿಯಾಗಿದೆ. ಮೃತರ ಕುಟುಂಬಕ್ಕೆ ದೇವರು ದುಖಭರಿಸುವ ಶಕ್ತಿ ನೀಡಲಿ ಎಂದರು. 

Assam government pays brief visit

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close