ಪವರ್ ಹೌಸ್ ಮೂಲಕ ತುಂಗ ನದಿಗೆ ನೀರು-Water to Tunga River through Power House

 SUDDILIVE || SHIVAMOGGA

ಪವರ್ ಹೌಸ್ ಮೂಲಕ ತುಂಗ ನದಿಗೆ ನೀರು-Water to Tunga River through Power House

Tunga, river


ಜಲಾನಯನ ಪ್ರದೇಶದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ತುಂಗ ನದಿಗೆ ಕಟ್ಟಲಾದ ಗಾಜನೂರು ಜಲಾಶಯ ಭರ್ತಿಯಾಗಿದೆ. ಈಗಾಗಲೇ ಯಾವಕ್ಷಣದಲ್ಲಾದರೂ ಜಲಾಶಯದ ನೀರು ನದಿಗೆ ಹರಿಸುವುದಾಗಿ ಪ್ರಕಟಣೆ ತಿಳಿಸಿದ್ದ ನೀರಾವರಿ ಇಲಾಖೆ, ಈಗ ಪವರ್ ಹೌಸ್ ಮೂಲಕ ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

588.24 ಸಾಮರ್ಥ್ಯದ ಜಲಾಶಯ ಮುಂಗಾರು ಪೂರ್ವದಲ್ಲಿಯೇ ಭರ್ತಿಯಾಗಿದೆ. 3.71 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯಕ್ಜೆ 2000 ಕ್ಯೂ ಸೆಕ್ ನೀರು ಹರಿದು ಬರುತ್ತಿದ್ದು, ಮಧ್ಯಾಹ್ನದ ವೇಳೆಗೆ 800 ಕ್ಯೂಸೆಕ್ ನೀರನ್ನ ಪವರ್ ಹೌಸ್ ನಿಂದ ಹರಿಬಿಡಲಾಗುತ್ತದೆ.‌ 800 ರಿಂದ 5000 ಕ್ಯೂಸೆಕ್ ವರೆಗೂ ಪವರ್ ಹೌಸ್ ಮೂಲಕವೇ ನದಿಗೆ ನೀರು ಹರಿಸಲಾಗುತ್ತದೆ.

ಒಂದು ವೇಳೆ ಒಳಹರಿವು ಹೆಚ್ಚಾದಲ್ಲಿ ಜಲಾಶಯದ ಮುಖ್ಯ ಗೇಟ್ ಗಳನ್ನ ತೆರೆದು ಜಲಾಶಯದಿಂದ ನದಿಗೆ ನೀರು ಹರಿಸಲಾಗುವುದು. ತುಂಗ ಜಲಾಶಯ ರಾಜ್ಯದಲ್ಲಿಯೇ ಅತಿ ಸಣ್ಣ ಜಲಾಶಯವಾಗಿದ್ದು ಮುಂಗಾರು ಪೂರ್ವ ಮಳೆಗೆ ಭರ್ತಿಯಾಗಿದೆ. ಆದರೆ ಭದ್ರ ನದಿಗೆ ಒಳಹರಿವು ಇನ್ನೂ ಸಣ್ಣಪ್ರಮಾಣದಲ್ಲಿದೆ. 186 ಅಡಿ ಸಾಮರ್ಥ್ಯದ ಭದ್ರ ಜಲಾಶಯದಲ್ಲಿ 136 ಅಡಿ ನೀರು ಸಂಗ್ರಹವಾಗಿದೆ. 

Water to Tunga River through Power House

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close