ಕೋಮುವಾದ ಧಿಕ್ಕರಿಸಿ, ಸಂವಿಧಾನ ರಕ್ಷಿಸಿ ಮೇ.8 ಕ್ಕೆ ಬೆಂಗಳೂರು ಚಲೋ-Bangalore Chalo

 Suddilive || Shivamogga

ಕೋಮುವಾದ ದಿಕ್ಕರಿಸಿ, ಸಂವಿಧಾನ ರಕ್ಷಿಸಿ ಮೇ.8 ಕ್ಕೆ ಬೆಂಗಳೂರು ಚಲೋ-Bangalore Chalo, on May 8th to save the Constitution and ward off communalism.

Banglore, chalo

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನ ಅಂಗವಾಗಿ ಕೋಮುವಾದ ಧಿಕ್ಕರಿಸಿ ಸಂವಿಧಾನ ರಕ್ಷಿಸಿ ದಲಿತರ ಅಭಿವೃದ್ಧಿಗಾಗಿ ಜನಕ್ರಾಂತಿ ಸಮಾವೇಶದ ಅಂಗವಾಗಿ ಮೇ.8 ರಂದು ಬೆಂಗಳೂರು ಚಲೋ ನಡೆಸಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ,   ಪೇಜಾವರ ಶ್ರೀಗಳು ಮತ್ತು ಚಂದ್ರನಾಥ ಸ್ವಾಮೀಜಿ, ಬಾಲರಾಮನ ಪ್ರತಿಷ್ಠಾಪಿಸಿದಾಗ ಆರ್ ಎಸ್ ಎಸ್ ನ ಮುಖಂಡ ಮೋಹನ್ ಭಾಗವತ್ ಇವತ್ತು ಸಂವಿಧಾನ ದೊರೆತಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಹೇಳಿಕೆಗಳು ಮನುವಾದವನ್ನ ಸೃಷ್ಠಿಸಿದೆ.

ಇವನ್ನ ಖಂಡಿಸಿ ಹಾಗೂ ವಿವಿಧ ಹಕ್ಕೋತ್ತಾಯಕ್ಕಾಗಿ ಬೆಂಗಳೂರು ಚಲೋ ನಡೆಯುತ್ತಿದ್ದು,  750 ಜನ ಶಿವಮೊಗ್ಗದ ಜಿಲ್ಲೆಯಿಂದ ಬೆಂಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದರು. 

ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಮನುಧರ್ಮ ಮರುಸ್ಥಾಪಿಸುವ ಹುನ್ನಾರವಾಗಿದೆ. ಪ್ರೊ.ಬಿ.ಕೃಷ್ಣಪ್ಪರ ಜನ್ಮದಿನ ಜೂ.9 ರಂದು ರಜೆ ರಹಿತ ಸರ್ಕಾರಿ ಕಾರ್ಯಕ್ರಮ ಆಚರಿಸಬೇಕು. ಮರುಣೋತ್ತರವಾಗಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು‌‌. 42 ಸಾವಿರ ಕೋಟಿ ರೂಪಾಯಿ SCSP/TSP ಅನುದಾನವನ್ನ ಗ್ಯಾರೆಂಟಿ ಯೋಜನೆ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸದೆ ದಲಿತರ ಅಭಿವೃದ್ಧಿಗೆ ಬಳಸಬೇಕು.

ಭೂ ರಹಿತ ದೇವದಾಸಿ ಮತ್ತು ವಿಧವಾ ಮಹಿಳೆಯರಿಗೆ ತಲಾ ಕನಿಷ್ಠ 3 ಎಕರೆ ಜಮೀನು ಮಂಜೂರಾಗಬೇಕು. ಗುಡಿಸಲು ಮನೆ ಮತ್ತು ಖಾಲಿ ನಿವೇಶನ ಹೊಂದಿರುವವರಿಗೆ ಬಡವರು ಮನೆ ಕಟ್ಟಿಕೊಳ್ಳಲು 6 ಲಕ್ಷ ಸಹಾಯಧನ ನೀಡಬೇಕು ಸೇರಿದಂತೆ15 ಹಕ್ಕೋತ್ತಾಯವನ್ನ ಬೆಂಗಳೂರು ಚಲೋದಲ್ಲಿ ಮಂಡಿಸಲಾಗುವುದು ಎಂದರು. 

Bangalore Chalo

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close