ಬಂಜಾರ ಎಂದು ನಮೂದಿಸಿ-Enter Banjara

 Suddilive || Shivamogga

ಬಂಜಾರ ಎಂದು ನಮೂದಿಸಿ-Enter Banjara

Enter, banjara

ಒಳ ಮೀಸಲಾತಿ ಸಮೀಕ್ಷೆಗೆ ಅಧಿಕಾರಿಗಳು ಮನೆಗೆ ಬಂದಾಗ ಬಂಜಾರ ಎಂದು ನಮೂದಿಸಲು ಲಂಬಾಣಿ ಸಮುದಾಯಕ್ಕೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮದ ಅಧ್ಯಕ್ಷರಾದ ಜಯದೇವ್ ನಾಯ್ಕ್ ಎನ್ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮಾಎ.5 ರಿಂದ 17 ರವರೆಗೆ ಪ.ಜಾ, ಉಪಜಾತಿ ಸಮಗ್ರ ಸಮೀಕ್ಷೆ ನಡೆಯಲಿದೆ. ತಾಂಡಾಗಳ ಮನೆ ಮಬೆಗೆ ಅಧಿಜಾರಿಗಳು ವಂದಾಗ ಲಂಬಾಣಿ ಸಮುದಾಯ ಬಂಜಾರ ಎಂದು ನಮೂದಿಸಬೇಕೆಂದು ಆಗ್ರಹಿಸಿದರು. 

19 ರಿಂದ 21 ರವರೆಗೆ ಗ್ರಾಮಾಂತರಕ್ಕೆ ಬರಲಿದ್ದಾರೆ. 3495 ತಾಂಡಗಳಿವೆ. ಇದು ಸರ್ಕಾರಿ ಲೆಕ್ಕದಲ್ಲುವೆ. 600-700 ತಾಂಡಗಳು ಸರ್ಕಾರಿ ದಾಖಲಾತಿಯಿಲ್ಲ. ಇವರನ್ನೂ ಸಮೀಕ್ಷೆಯಲ್ಲಿ ಒಳಪಡಿಸಬೇಕು. ಮೇ.21 ರಿಂದ ಆನ್ ಲೈನ್ ನಲ್ಲಿ ಸಮೀಕ್ಷೆಗೆ ನೋಂದಣಿಗೆ ಅವಕಾಶವಿದೆ ಒಟ್ಟು ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದೆ. 

ಎರಡು ತಿಂಗಳಲ್ಲಿ ಸಮೀಕ್ಷೆ ನಡೆಯುವುದರಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಲಿದೆ. ಆದರೂ ನಮ್ಮ ಸಮುದಾಯ ಗುಳೇ ಹೋದರೆ ಅವರ ಅಂಕಿ ಅಂಶ ಕೊಡಬೇಕು ಎಂದು ಆಗ್ರಹಿಸಿದ ಅವರು ಪಟ್ಟಣದಲ್ಲಿರುವ ಸಮೀಕ್ಷೆ ಮಾಡುವುದು ಕಷ್ಟವಿದೆ. ಪಟ್ಟಣದಲ್ಲಿರುವ ಲಂಬಾಣಿ ಸಮುದಾಯದ ಲೆಕ್ಕಸಿಕ್ಕಿಲ್ಲ. ಇವುಗಳನ್ನ ಆಯೋಗ ಜಾತಿಗಣತಿ ತೆಗೆದುಕೊಳ್ಳಬೇಕು ಎಂದರು. 

ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ ಖಾಸಗಿ ಉದ್ಯೋಗ ಭೂಮಿಯ ಒಡೆತನ, ಆದಾಯ, ಸರ್ಕಾರದಿಂದ ಪಡೆಯುವ ಸೌಲಭ್ಯ ಗಳು ರಾಜಕೀಯ ಪ್ರಾತಿನಿತ್ಯಮಾಹಿತಿ ನಮೂದಿಸಬೇಕು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ಡಿ.ಆರ್.ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು. 

Enter Banjara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close