ಅತ್ಯಾಚಾರದ ಕೇಸ್ ಕೊಡಿಸಿ ಜೈಲಿಗೆ ಕಳುಹಿಸಿದ್ದು ನೀನೆ ಅಲ್ವ ಎಂದು ಬಾರ್ ಮಾಲಿಕನಿಗೆ ಚಾಕು ಇರಿತ-Bar owner stabbed

 SUDDILIVE || SHIVAMOGGA

ಅತ್ಯಾಚಾರದ ಕೇಸ್ ಕೊಡಿಸಿ ಜೈಲಿಗೆ ಕಳುಹಿಸಿದ್ದು ನೀನೆ ಅಲ್ವ ಎಂದು ಬಾರ್ ಮಾಲಿಕನಿಗೆ ಚಾಕು ಇರಿತ-Bar owner stabbed, accused of filing rape case

Bar, owner

ಶಿವಮೊಗ್ಗದ ಗಾಜನೂರಿನಲ್ಲಿರುವ ಬಾರ್ ವೊಂದಕ್ಕೆ ಬಂದಿದ್ದ ವ್ಯಕ್ತಿ ಮಾಲೀಕನಿಗೆ ಚಾಕು ಚುಚ್ಚಿ ಪರಾರಿಯಾಗಿದ್ದಾನೆ. ಆತ ಚಾಕು ಚುಚ್ಚಿದ ವಿಷಯ ಕೇಳುದ್ರೆ ನೀವು ಶಾಕ್ ಆಗ್ತೀರ!

ಗಾಜನೂರಿನ ಸ್ನೇಹ ಬಾರ್ ನ ಮಾಲೀಕ ಸಚಿನ್ ಇಂದು ಬಾರ್ ನ ಕ್ಯಾಶ್ ಕೌಂಟರ್ ನಲ್ಲಿದ್ದರು. ಬಾರ್ ನಲ್ಲಿದ್ದ ಶರತ್ ಎಂಬ ವ್ಯಕ್ತಿ ಕ್ಯಾಶ್ ಕೌಂಟರ್ ಗೆ ಬಂದು ಮಾಲೀಕ ಸಚಿನ್ ಗೆ ನೀನೆ ಅಲ್ವಾ ನನ್ನ‌ಮೇಲೆ ರೇಪ್ ಕೇಸ್ ಕೊಡಿಸಿ ಜೈಲಿಗೆ ಕಳುಹಿಸಿದ್ದು ಎಂದು ಪ್ರಶ್ನಿಸಿದ್ದಾನೆ.

ಈ ಮಾತು ಕೇಳಿದ ಸಚಿನ್ ಗೆ ಶಾಕ್ ಆಗಿದೆ. ಇವತ್ತೇ  ನಿನ್ನನ್ನ ನೋಡುತ್ತಿರುವುದು. ನೀನು ಯಾರೂ ಅಂತಲೇ ಗೊತ್ತಿಲ್ಲ. ನಾನು ಯಾಕೆ ನಿನ್ನ ಮೇಲೆ ಅತ್ಯಾಚಾರದ ಕೇಸ್ ಹಾಕಲಿ ಎಂದು ಉತ್ತರಿಸಿದ್ದಾರೆ. ತಕ್ಷಣವೇ ವರಸೆ ಬದಲಿಸಿದ ಶರತ್ ಕ್ಷಮಿಸಿ ಬಿಡಿ ಎಂಬ ನಾಟಕವಾಡಿದ್ದಾನೆ.

ನಾಟಕವಾಡುತ್ತಲೇ ಕ್ಯಾಶ್ ಕೌಂಟರ್ ನಿಂದ ಹೊರಗೆ ಕರೆದುಕೊಂಡು ಬಂದು ಚಾಕುವಿನಿಂದ ಕುಚ್ಚಿದ್ದಾನೆ. ಸಚಿನ್ ಗೆ ಕೈ ಮುಖ ಹಾಗು ಪಕ್ಕೆಯ ಬದಿ ಗಾಯಗಳಾಗಿವೆ. ತಕ್ಷಣವೇ ಅವರನ್ನ‌ ಮೆಗ್ಗಾನ್ ಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Bar owner stabbed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close