ಹೊನ್ನಾವರದ ಗರ್ಭಿಣಿ ಮೆಗ್ಗಾನ್ ನಲ್ಲಿ ಸಾವು-dies in Meggan

 SUDDILIVE || SHIVAMOGGA 

ಹೊನ್ನಾವರದ ಗರ್ಭಿಣಿ ಮೆಗ್ಗಾನ್ ನಲ್ಲಿ ಸಾವು-Pregnant woman from Honnavar dies in Meggan

Dies, Meggan

ಹೊನ್ನಾವರದಿಂದ ಬಂದಿದ್ದ ಗರ್ಭಿಣಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. 

ಹೊನ್ನಾವರ ಗ್ರಾಮಾಂತರ ಭಾಗದ ನಿವಾಸಿ ಸಿಮ್ರಾನ್ ಭಾನು (22) ಮೃತಪಟ್ಟ ದುರ್ದೈವಿ.  ಇಂದು ಬೆಳಿಗ್ಗೆ ಮೆಗ್ಗಾನ್ ಗೆ ಬಂದು ದಾಖಲಾಗಿದ್ದ ಸಿಮ್ರನ್ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೊದಲು ಹೊನ್ನಾವರ ತಾಲೂಕು ಆಸ್ತತ್ರೆಗೆ ಬಂದು ದಾಖಲಾಗಿದ್ದರು. ಸಿಮ್ರನ್ ಭಾನುಗೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ದಾಖಲಾಗಲು ಅಲ್ಲಿನ ವೈದ್ಯರು ಸೂಚಿಸಿದ್ದರು. 

ಮೆಗ್ಗಾನ್ ಗೆ ದಾಖಲಾಗಲು ವೈದ್ಯರ ಸಲಹೆ ಸಹಯಿತ್ತು ವೆಂಬ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ ಹೊನ್ನಾವರದಿಂದ ಬಂದು ಮೆಗ್ಗಾನ್ ನಲ್ಲಿ ದಾಖಲಾಗಿದ್ದ ಸಿಮ್ರನ್ ಮಧ್ಯಾಹ್ನದ ಹೊತ್ತಿಗೆ ಸಾವನ್ನಪ್ಪಿದ್ದಾರೆ. ಮಗು ಸಹ ಹೊಟ್ಟೆಯಲ್ಲೇ ಸತ್ತು ಹೋಗಿದೆ ಎನ್ನಲಾಗಿದೆ. 

ಹೆರಿಗೆಯ ಸಮಸ್ಯೆಯನ್ನ ಎದುರಿಸುತ್ತಿದ್ದ ಸಿಮ್ರನ್ ಚಿಕಿತ್ಸೆ ಫಲಕಾರಿಯಾಗದೆ ಸಾವನವನಪ್ಪಿದ್ದಾಳೆ. ಮೃತ ದೇಹವನ್ನ ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ. 

dies in Meggan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close