ಶಿಕಾರಿಪುರದ ಅಡಿಕೆ ಖೇಣಿದಾರರಿಗೆ ಬೆಣ್ಣ ಪ್ರವೀಣ್ ಮನವಿ-Benne Praveen's appeal to the areca nut farmers

 SUDDILIVE || SHIVAMOGGA

ಶಿಕಾರಿಪುರದ ಅಡಿಕೆ ಖೇಣಿದಾರರಿಗೆ ಬೆಣ್ಣ ಪ್ರವೀಣ್ ಮನವಿ-Benne Praveen's appeal to the areca nut farmers of Shikaripura

Benne, praveens

ಶಿಕಾರಿಪುರ ತಾಲೂಕಿನಲ್ಲಿ ಅಡಿಕೆ ಖೇಣಿದಾರರು ಸಹಕಾರಿ ಸಂಘವೆಂದು ರೈತರ ವಿರುದ್ಧವಾಗಿ ಅವರದೇ ಆದ ನಿಬಂದನೆ ಮಾಡಿಸಿ ಕರಪತ್ರ ಹೊರಡಿಸಲಾಗಿದೆ. ಇದು ಖೇಣಿದಾರರ ಆತಂಕಕ್ಕೆ ಕಾರಣವಾಗಿದೆ ಎಂದು ರೈತ ಬೆಣ್ಣೆ ಪ್ರವೀಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೌಹಾರ್ಧ ಸಹಕಾರ ಸಂಘ ಎಂದು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ. ಮನಸೊ ಇಚ್ಚೆ ಕರಪತ್ರದಲ್ಲಿ ನಿಬಂದನೆಗಳನ್ನ ಮಾಡಿಕೊಂಡಿದ್ದಾರೆ. ಶಿಕಾರಿಪುರದಲ್ಲಿ ಖೇಣಿದಾರರಿಗೆ ಅಡಿಕೆ ಖರೀದಿ ಮಾಡುವಂತೆ ಕೆಲವರನ್ನು ವ್ಯಾಪಾರಕ್ಕೆ ಬಾರದಂತೆ ತಡೆಹಿಡಿದ್ದಾರೆ ಎಂದು ದೂರಿದರು.

ಇದು ಆತಂಕಕ್ಕೆ ಈಡು ಮಾಡಿದೆ. ಬೇರೆ ಬೇರೆ ತಾಲೂಕಿನಿಂದ ಬಂದು ಅಡಿಕೆ ಖರೀದಿಸದಂತೆ ನೋಡಿಕೊಳ್ಳಲಾಗಿದೆ. 25 ಸಾವಿರ  ನೀಡಿ ಸದಸ್ಯತ್ವ ಪಡೆಯಬೇಕು. ಚನ್ನಗಿರಿ, ಶಿವಮೊಗ್ಗ ಚಿತ್ರದುರ್ಗದಲ್ಲಿ ಸಭೆ ನಡೆಸಿ ಕಂಡಿಷನ್ ಮಾಡಿದ್ದಾರೆ. ಇದು ರೈತ ಬಾಂಧವರನ್ನ ಆತಂಕದಲ್ಲಿರಿಸಿದೆ ಎಂದು ದೂರಿದರು.

ಮೇ 13 ಸಭೆ ನಡೆಸಿದ್ದಾರೆ. ಕರಪತ್ರ ಬಿಡುಗಡೆಯ ನಂತರ ಖೇಣಿದಾರರು ಮುಂದೆ ಬಂದಿಲ್ಲ. ಎಕರೆಗೆ 25 ಸಾವಿರ ರೂ. ನಿಗದಿ ಪಡಿಸಲಾಗಿದೆ. 10 ವರ್ಷದ ಒಳಗಿನ ಕ್ವಿಂಟಾಲ್ ಗೆ 10 ಸಾವಿರ ರೂ. ನಿಗದಿ ಪಡಿಲಾಗಿದೆ. ಈ ಬಗ್ಗೆ ತಹಶೀಲ್ದಾರ್ ಗೆ ಮನವಿ ನೀಡಲಾಗಿತ್ತು. ಸೌಹಾರ್ಧ ವೇದಿಕೆಯವರನ್ನ ಕರೆದು ತಾಲೂಕು ಆಡಳಿತ ಚಾಟಿ ಬೀಸಿದೆ. ಯಾರ ವೇದಿಕೆಯವರ ಮಾತು ಕೇಳದಂತೆ ಅವರು ಅಡಿಕೆ ಖೇಣಿದಾರರಿಗೆ ಮನವಿ ಮಾಡಿದರು. 

Benne Praveen's appeal to the areca nut farmers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close