ರಾಜ್ಯ ಸರ್ಕಾರದ ವಿರುದ್ಧ ಚಾರ್ಚ್ ಶೀಟ್ ಬಿಡುಗಡೆ-BJP release the chargesheet against Government

 SUDDILIVE || SHIVAMOGGA

ರಾಜ್ಯ ಸರ್ಕಾರದ ವಿರುದ್ಧ ಚಾರ್ಚ್ ಶೀಟ್ ಬಿಡುಗಡೆ-Bjp release the chargesheet against Government

BJP, chageshet


ರಾಜ್ಯದಲ್ಲಿ ಭಂಡ ಸರ್ಕಾರ ಬಂದಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದ್ದು, ಇಂದು ರಾಜ್ಯ ಸರ್ಕಾರದ ವಿರುದ್ಧ ಚಾರ್ಚ್ ಶೀಟ್ ಬಿಡುಗಡೆ ಮಾಡಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚ ಗ್ಯಾರೆಂಟಿ ಬಗ್ಗೆ ಮಾತನಾಡುವ ಸರ್ಕಾರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ ಎಂದರೆ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಜನರಿದ್ದಾರೆ. ಅದಕ್ಕೆ 2000 ರೂ. ಹಣ ಗುಣಿಸಿ ಒಟ್ಟು ಹಣ ಎಷ್ಟು ಬರುತ್ತದೆ ಅಷ್ಟು ಹಣ ಬಿಡುಗಡೆ ಮಾಡಿದ್ದೇವೆ ಎಂದು ಬಂಡತನದ ಹೇಳಿಕೆ ಹೇಳುತ್ತಾರೆ ಎಂದು ದೂರಿದರು. 

ಅಧಿವೇಶನದಲ್ಲಿ ಜನವಿರೋಧಿ ಬಿಲ್ ಬಗ್ಗೆ ಪ್ರಸ್ತಾಪಿಸಿದರೆ ನಾವು ಅದನ್ನ ತಂದೆ ತರುವುದಾಗಿ ಬಂಡತನ ತೋರುತ್ತಾರೆ. ಅದಕ್ಕೆ ಚಾರ್ಜ್ ಶೀಟ್ ನ್ನ ಬಿಜೆಪಿ ಬಿಡುಗಡೆ ಮಾಡುತ್ತಿದ್ದೇವೆ. ಮೂಡ, ವಾಲ್ಮೀಕಿ ರೈತರಿಗೆ ಮೋಸ, ವಕ್ಫ್ ನ ಮೂಲಕ ಭೂಗಳ್ಳತನ, ಹನಿಟ್ರ್ಯಾಪ್, ಭ್ರಷ್ಠಚಾರದ ಬಗ್ಗೆ ಚಾರ್ಚ್ ಶೀಟ್ ಬಿಡುಗಡೆ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ನ ದುರಾಡಳಿತದ ಕೈಗನ್ನಡಿಯಾಗಿದೆ ಎಂದು ದೂರಿದರು.

ಎರಡು ವರ್ಷದ ತೊಗಲಕ್ ದರ್ಬಾರದ ಸರ್ಕಾರದ ಚಾರ್ಚ್ ಶೀಟ್ ಬಿಡುಗಡೆ ಮಾಡಲಿದ್ದೇವೆ. ನಿನ್ನೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸಿ ಈ ಎಲ್ಲಾ ಹಗರಣಗಳನ್ನ‌ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಹುಟ್ಟಿನಿಂದ ಸಾವಿನವರೆಗೆ ಹೆಚ್ಚುವರಿ ತೆರಿಗೆ ಹೆಚ್ಚಳ ಮಾಡಿರುವ ಬಗ್ಗೆ ಜನ‌ಮಾತನಾಡುತ್ತಿದ್ದಾರೆ. ಡೆತ್ ಅಂಡ್ ಬರ್ತ್ ಸೆರ್ಟಿಫಿಕೇಟ್ ನ್ನ ಉಚಿತವಾಗಿ ನೀಡದೆ ಅದರ ಹಣವನ್ನ ಹೆಚ್ಚಿಸಿರುವುದು ದುರದೃಷ್ಟಕರವಾಗಿದೆ. ಇದೊಂದು ಶಾಪ ಮತ್ತು ವಸೂಲಿ ಸರ್ಕಾರವಾಗಿದೆ. ಇದರ ಬಗ್ಗೆ ಚಾರ್ಚ್ ಶೀಟ್ ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿ ನಂತರ ಸಾರ್ವಜನಿಕರಿಗೆ ಸರ್ಕಾರದ ವಿರುದ್ಧ ಕರಪತ್ರ ಹಂಚಲಾಯಿತು.

ಇದೇ ವೇಳೆ ಶಾಸಕರು ಚಾರ್ಚ್ ಶೀಟ್ ಬಿಡುಗಡೆ ಮಾಡಿದರು. ಈ ವೇಳೆ ಶಾಸಕ ಡಿ.ಎಸ್ ಅರುಣ್, ಜಿಲ್ಲಾಧ್ಯಕ್ಷ ಜಗದೀಶ್, ಮಾಲ್ತೇಶ್, ಜ್ಯೋತಿ ಪ್ರಕಾಶ್, ಶಿವರಾಜ್, ಚಂದ್ರಶೇಖರ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Bjp release the chargesheet against Government

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close