SUDDILIVE. || SHIVAMOGGA
KSRTC ನಗರ ಸಾರಿಗೆ ಸಂಸ್ಥೆಯಿಂದ ಸಿದ್ದಾಪುರದ ಮೇಲೂ ಭದ್ರಾವತಿಗೆ ಬರಲು ಅವಕಾಶ-KSRTC allows people to travel to Bhadravati via Siddapur
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಿವಮೊಗ್ಗ ವಿಭಾಗದ ಶಿವಮೊಗ್ಗ ಘಟಕ ಹಾಗೂ ಭದ್ರಾವತಿ ಘಟಕದಿಂದ ಶಿವಮೊಗ್ಗ - ಭದ್ರಾವತಿ ವಯಾ ಸಿದ್ದಾಪುರ, ಮಿಲ್ಟ್ರಿ ಕ್ಯಾಂಪ್, ಜಯಶ್ರೀ ಸರ್ಕಲ್ ಮಾರ್ಗವಾಗಿ ನಗರ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಈ ಸಾರಿಗೆಯ ಪ್ರಯೋಜನವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡದಕಟ್ಟೆಯ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಹಿನ್ನಲೆಯಲ್ಲಿ ಮೂರು ವರ್ಷಗಳಿಂದ ಸಿದ್ದಾಪುರದ ಮೇಲೆ KSRTC ನಗರ ಸಂಚಾರಿ ಬಸ್ ಗಳು ಭದ್ರಾವತಿ ನಗರವನ್ನ ಪ್ರವೇಶಿಸುತ್ತಿತ್ತು. ಈಗ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೊಂಡ ಕಾರಣ ಎಲ್ಲಾ ಸರ್ಕಾರಿ ಸಾರಿಗೆ ಸಂಸ್ಥೆ ಬಸ್ ಗಳು ಮತ್ತು ನಗರ ಸಂಚಾರಿ ಬಸ್ ಗಳು ಈ ಮಾರ್ಗವಾಗಿ ಭದ್ರಾವತಿ ಪ್ರವೇಶಿಸುತ್ತಿದೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಿದ್ದಾಪುರದ ಮೇಲೆ ಸಂಚರಿಸುವರಿಗೆ ತೊಂದರೆ ಆಗದಂತೆ ನಾಲ್ಕು ಬಸ್ ಗಳನ್ನ ಸಂಸ್ಥೆ ಸಂಚರಿಸಲು ಅನುವು ಮಾಡಿಕೊಟ್ಟಿದೆ. ನಾಳೆಯಿಂದ ಈ ನಾಲ್ಕು ಬಸ್ ಗಳು ಅಧಿಕೃತವಾಗಿ ಸಂಚರಿಸಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
Bhadravati via Siddapur