SUDDILIVE || SHIRALKOPPA
ಇಬ್ಬರು ನಾಪತ್ತೆ-Two persons Missing
ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕಾಣೆಯಾಗಿದ್ದು, ಮರು ಪ್ರಕಟಣೆ ಮಾಡಲಾಗಿದೆ. ತಬ್ರೇಜ್ ಖಾನ್ ಮತ್ತು ಶ್ರೀಧರ್ ಒಂದೇ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ನಗರ ಹಳ್ಳೂರುಕೇರಿ ವಾಸಿ ತಬ್ರೇಜ್ ಖಾನ್ ಎಂಬುವವರ ಮಗ ತಾಹೀರ್ ಖಾನ್ ಎಂಬ 26 ವರ್ಷದ ಯುವಕ ಏಪ್ರಿಲ್ 2023ರಲ್ಲಿ ಕಾಣೆಯಾಗಿದ್ದು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.2 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.
ಶಿರಾಳಕೊಪ್ಪ ನಗರ, ಬೆಲವಂತನಕೊಪ್ಪ ವಾಸಿ ಚೇತನಕುಮಾರ್ ಎಂಬುವವರ ಅಣ್ಣ ಶ್ರೀಧರ ಬಿನ್ ಜಗನ್ನಾಥ ಎಂಬ 40 ವರ್ಷದ ವ್ಯಕ್ತಿ ನವೆಂಬರ್ 2024 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಇಬ್ಬರು ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಪೊ.ನಂ.: 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Two persons Missing