ನಾಳೆ ಪ್ರಿಯಾಂಕ್ ಖರ್ಗೆ ಹಠವೋ, ಕಲಬುರ್ಹಿ ಬಜಾವೋ ಪ್ರತಿಭಟನೆ-BJP protest against Kharge

 SUDDILIVE || SHIVAMOGGA

ನಾಳೆ ಪ್ರಿಯಾಂಕ್ ಖರ್ಗೆ ಹಠವೋ, ಕಲಬುರ್ಹಿ ಬಜಾವೋ ಪ್ರತಿಭಟನೆ-Tomorrow, BJP protest against Kharge Hatavo Kalaburhi Bajao 

Kharge, Bjp


ರಿಪಬ್ಲಿಕ್ ಆಫ್ ಕಲಬುರ್ಗಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ‌ಖಂಡಿಸಿ ನಾಳೆ ಮೇ.24 ರಂದು ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರ್ಗಿ ಬಜಾವೋ ಪ್ರತಿಭಟನೆ ನಡೆಸುತ್ತಿರುವುದಾಗಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ನ ವಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿಯವರನ್ನ ಚಿತ್ತಾಪುರದಲ್ಲಿ ಕೂಡಿಹಾಕಿ ದಾಳಿ ನಡೆಸುವ ವ್ಯವಸ್ಥೆ ಕಲಬುರ್ಗಿಯಲ್ಲಿ ನಡೆಯುತ್ತಿದೆ ಎಂದರೆ ಸಾಮಾನ್ಯ ಪ್ರಜೆ ಯೋಚಿಸುವಂತಾಗಿದೆ. ಸಂವಿಧಾನಾತ್ಮಕವಾಗಿ ಅಧಿಕಾರ ಸಿಗದಿದ್ದಾಗ ಶ್ಯಾಡೋ ಮುಖ್ಯಮಂತ್ರಿಗಳ ರೀತಿ ನಡೆಸುವ ಬಗ್ಗೆ ಖರ್ಗೆ ಪರೋಕ್ಷವಾಗಿ ಕೇಳಿದ್ದರು. 

ಇಡಿ ರಾಜ್ಯದ ಕಾನೂನು ವ್ಯವಸ್ಥೆ ಕೆಲ ಸಚಿವರ ಕೈಯಲ್ಲಿದೆ. ನಾರಾಯಣ ಸ್ವಾಮಿ ಅವರು ಖರ್ಗೆಯವರ ಆಸ್ತಿಯ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಇದು ಹಲ್ಲೆಗೆ ಕಾರಣವಾಗಿದೆ. ಇದಾದ ನಂತರ ಖರ್ಗೆ ಆಸ್ತಿ ವಾಪಾಸ್ ನೀಡಿದ್ದಾಗಿತ್ತು. ನಾನು ಅಪರಾಧ ಮಾಡಿಲ್ಲ ಎಂದು ಹೇಳಿದರು‌. ಯಾರು ಖರ್ಗೆ ವಿರೋಧವಾಗಿ ಮಾತನಾಡುತ್ತಾರೋ ಅವರನ್ನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ದೂರಿದರು. 

ಖರ್ಗೆಯವರು ಪ್ರಧಾನಿಗಳಿಗೆ ಬಳಸಿದ ಪದಗಳ ಬಗ್ಗೆ ಬಿಜೆಪಿ ತಡೆದುಕೊಂಡಿಲ್ವಾ? ಪತ್ರಕರ್ತರ ಹೇಳಿಕೆಗೆ ಚಲುವಾದಿ ನಾರಾಯಣ ಸ್ವಾಮಿ ನಾಯಿ ಬೊಗಳಿದರೆ ಆನೆ ನಡೆದುಕೊಂಡು ಹೋಗ್ತಾಯಿದೆ ಎಂದು ಹೇಳಿದರೆ ಅದನ್ನ ಮಾತಿನಲ್ಲಿ ಎದುರಿಸುವ ಬದಲು ಕೈ ಕೈ ಮಿಲಾಸ್ತಿರಲ್ಲಾ? ಎಷ್ಟು ನ್ಯಾಯ ಎಂದರು. 

ಆತ್ಮಗೌರವಕ್ಕೆ ಬೆಲೆ ಕೊಡುವುದಾದರೆ ಜಂಟಲ್ ಮ್ಯಾನ್ ತರ ನಡೆದುಕೊಳ್ಳಿ, ಧೋರಣೆ ಬದಲಾಯಿಸಿಕೊಳ್ಳಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಯತ್ ರಾಜ್ ಬಗ್ಗೆ ಮಾತನಾಡಿ, ಇದನ್ನ ಬಿಟ್ಟು, ರಾಹುಲ್, ಸೋನಿಯಾ ಮತ್ತು ಸಿದ್ದರಾಮಯ್ಯರನ್ನ ನೆಚ್ಚಿಸುವಂತೆ ನಡೆದುಕೊಳ್ಳಬೇಡಿ. ನಿಮ್ಮ ಗೂಂಡಾ ಸಂಸ್ಕೃತಿಯ ಹಿನ್ಬಲೆಯಲ್ಲಿ ರಾಜೀನಾಮೆ ನೀಡಿ. 

ಅವರ ರಾಜೀನಾಮೆಗೆ ಆಗ್ರಹಿಸಿ ಮೇ24 ರಂದು ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರ್ಗಿ ಬಜಾವೋ ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು ನಾವೆಲ್ಲರೂ ಭಾಗಿಯಾಗುತ್ತಿರುವುದಾಗಿ ಹೇಳಿದರು. 

BJP protest against Kharge Hatavo Kalaburhi Bajao 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close