SUDDILIVE || SHIVAMOGGA
ಚುನಾವಣೆ ಆಯುಕ್ತರನ್ನ ಭೇಟಿ ಮಾಡಿದ ಬಿಜೆಪಿ ನಿಯೋಗಕ್ಕೆ ಸಿಕ್ಕ ಭರವಸೆ ಏನು?What assurances did the BJP delegation receive after meeting the Election Commissioner?
ಶಿವಮೊಗ್ಗಕ್ಕೆ ಆಗಮಿಸಿದ ಚುನಾವಣೆ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ರನ್ನ ಬಿಜೆಪಿ ಶಾಸಕ ಚೆನ್ನಬಸಪ್ಪ ನೇತೃತ್ವದ ಆಯೋಗ ಭೇಟಿಯಾಗಿ ಸ್ಥಳೀಯಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ವಿಚಾರಿಸಿದರು. ಭೇಟಿಯಾದ ನಿಯೋಗಕ್ಕೆ ಭರವಸೆ ಬಿಟ್ಟರೆ ಬೇರೆಯಾವ ಆಶ್ವಾಸನೆ ದೊರೆಯಲಿಲ್ಲ.
ಆಯುಕ್ತರು ಮಾತನಾಡಿ, ವೋಟರ್ ಲೀಸ್ಟ್ ಮತ್ತು ಮೀಸಲಾತಿ ಪಟ್ಟಿಯನ್ನ ಸರ್ಕಾರಕ್ಕೆ ಕೊಡಿ ಎಂದು ಆಯೋಗ ಹೇಳಿತ್ತು. ಸರ್ಕಾರ ಇನ್ನೂ ಕೊಟ್ಟಿಲ್ಲ. ಸುಪ್ರೀಂನ ಆದೇಶದಲ್ಲಿ ಮತ್ತೊಂದು ಸಾಲನ್ನ ಬರೆಯಲಾಗಿದೆ. ಸರ್ಕಾರ ಮೀಸಲಾತಿ ಪಟ್ಟಿ ಕೊಡದಿದ್ದರೆ ಮತ್ತೊಮ್ಮೆ ಹೈಕೋರ್ಟ್ ಗೆ ರಿಟ್ ಹಾಕಿ ಅದರ ಆದೇಶದ ಮೇರೆಗೆ ಸರ್ಕಾರಕ್ಕೆ ನಿರ್ದೇಶನ ನೀಡಿ ಚುನಾವಣೆ ನಡೆಸಲು ಸೂಚಿಸುವುದರಿಂದ ಹೈಕೋರ್ಟಗೆ ಈಗಾಗಲೇ ರಿಟ್ ಹಾಕಿದ್ದೇವೆ. ಎಂದು ಆಯುಕ್ತರು ಆಯೋಗಕ್ಕೆ ತಿಳಿಸಿಸರು.
ಈ ವೇಳೆ ಶಿವಮೊಗ್ಗದ ಶಾಸಕರು ನೀವು ಸುದ್ದಿಗೋಷ್ಠಿ ನಡೆಸಿ ಚುನಾವಣೆ ನಡೆಸುವುದಾಗಿ ಹೇಳಿದ್ದು 1 ವರ್ಷ ಕಳೆಯುತ್ತಾ ಬಂದಿದೆ. ಇನ್ನೂ ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯದ ಮೆಟ್ಟಿಲಿನಲ್ಲೇ ಓಡಾಡುತ್ತಿದ್ದೀರಿ. ಹೀಗಾದರೆ ಆಯೋಗದ ಮೇಲಿನ ವಿಶ್ವಾಸವೇ ಕಳೆದು ಹೋಗುವ ಅಪಾಯವಿದೆ ಎಂಬ ಮಾತನ್ನೂ ಹೇಳಿದರು.
ಸರ್ಕಾರ ಇರುವ ಮೀಸಲಾತಿಯಲ್ಲೇ ಚುನಾವಣೆ ನಡೆಸುವುದಾಗಿ ಹೇಳಿತ್ತು. ಅದನ್ನೂ ನಡೆಸಿಲ್ಲ. ಐದು ಮಹಾನಗರ ಪಾಲಿಕೆ, ಜಿಪಂ ತಾಪಂ ಚುನಾವಣೆ ಹಾಗೂ ನವೆಂಬರ್ ನಲ್ಲಿ ಅನೇಕ ಪುರಸಭೆ, ನಗರಸಭೆಗಳ ಅವಧಿ ಮುಗಿಯಲಿದೆ. ಸರ್ಕಾರಕ್ಕೆ ಆಸಕ್ತಿವಹಿಸುತ್ತಿಲ್ಲ ಎಂದು ದೂರಿದರು.
ಅದಕ್ಕೆ ಆಯುಕ್ತರಾದ ಸಂಗ್ರೇಶ್ ಬಿಜೆಪಿ ನಿಯೋಗಕ್ಕೆ ಮತ್ತೊಮ್ಮೆ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಿ. ನ್ಯಾಯಾಲಯದ ಹಂತವನ್ನ ಆಯೋಗ ಕ್ಲಿಯರ್ ಮಾಡಲಿದೆ ಎಂದು ಹೇಳಿದರು. ಡಿ.ಎಸ್.ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಕಾರ್ಪರೇಟರ್ ಗಳಾದ ಸುರೇಖ ಮುರುಳೀಧರ್, ಅನಿತಾ ರವಿಶಂಕರ್ ಮೊದಲಾದವರು ನಿಯೋಗದಲ್ಲಿದ್ದರು.
What assurances did the BJP delegation receive