SUDDILIVE || SHIVAMOGGA
ಸರ್ವೆ ನಂ.26 ರಲ್ಲಿ ಉತ್ತಮ ಸಿಟಿ ಬಸ್ ನಿರ್ಮಿಸಿ ಮಹಾಪುರಷರ ಹೆಸರಿಡಿ-ಉಸ್ತುವಾರಿ ಸಚಿವರಿಗೆ ಮಾಜಿ ಡಿಸಿಎಂ ಸಲಹೆ-Construct a good city bus stand in Survey No. 26 and name it after great personalities - Former DCM advises the in-charge minister
ಖಾಸಗಿ ಬಸ್ ನಿಲ್ದಾಣದ ಎದುರಿನ ಜಾಗವನ್ನ ನಗರ ಸಿಟಿ ಬಸ್ ನಿಲ್ದಾಣ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಜಾಗವನ್ನ ಅಕ್ರಮವಾಗಿ ಪಡೆಯಲು ಯತ್ನನಡೆದಿತ್ತು. 1989 ರಲ್ಲಿ ಮೊದಲ ಬಾರಿಗೆ ಭದ್ರಾವತಿ-ಶಿವಮೊಗ್ಗ ಮಹಾನಗರ ಪಾಲಿಕೆಯನ್ನ ನಿರ್ಮಿಸಲಾಗಿತ್ತು. ಪಾಲಿಕೆ ನಾಮನಿರ್ದೇಶಿತ ಸೇರಿ 24 ಜನರಿಗೆ ಈ ಜಾಗವನ್ನ ಅಕ್ರಮವಾಗಿ ಮಾರಾಟಮಾಡಿ, ಅವರ ಹೆಸರಿಗೆ ಅಕ್ರಮವಾಗಿ ಖಾತೆಯಾಗಿತ್ತು. ಇದನ್ನ ವಿಧಾನ ಸಭೆಯಲ್ಲೂ ನಾನು ಪ್ರಸ್ತಾಪಿಸಿ ಹೋರಾಟ ನಡೆಸಿದ್ದೆ. ಪರಿಣಾಮ ಪಾಲಿಕೆಯಲ್ಲಿ ಸರ್ವೆನಂಬರ್ 26 ರನ್ನ ಹಂಚಿಕೆಯನ್ನು ರದ್ದುಪಡಿಸಲಾಗಿತ್ತು. ಸಿಒಡಿ ತನಿಖೆಗೆ ನೀಡಲಾಗಿತ್ತು ಎಂದು ವಿವರಿಸಿದರು.
ನಾನು ಬಿಜೆಪಿ ಸರ್ಕಾರದಲ್ಲಿದ್ದಾಗ ಕೇಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ನಿರ್ಮಿಸಿದ್ವಿ. ಈಗ ಕಾಂಗ್ರೆಸ್ ಗೆ ಸುದಿನವಾಗಿದೆ. ನ್ಯಾಯಾಲಯದ ಆದೇಶ ಬಂದು 6 ತಿಂಗಳಾಗಿದೆ. ಸರಿಯಾದ ಫೆನ್ಸಿಂಗ್ ಹಾಕಿಕೊಂಡು ಭದ್ರ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಹೋರಾಟದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನ್ಯಾಯಾಲಯದ ಮೂಲಕ ಶಿಕ್ಷೆಯಾಗಿತ್ತು. ತುಂಗ ರೈಸ್ ಮಿಲ್ ಮತ್ತು 24 ಜನ ದಾವೆ ಹೂಡಿದ್ದರು. ನ್ಯಾಯಾಲಯವೂ ಸಹ ರದ್ದು ಮಾಡಿ ಪಾಲಿಕೆ ಪರ ನ್ಯಾಯ ಘೋಷಿಸಲಾಗಿತ್ತು. 24 ಜನ ಹೈಕೋರ್ಟ್ ಗೆ ಹೋಗಿದ್ದರು. ಹೈಕೋರ್ಟ್ ಸ್ಥಳೀಯ ನ್ಯಾಯಾಲಯಕ್ಕೆ ಕಳುಹಿಸಿತ್ತು. ಈಗ ಮತ್ತೆ ಅದು ಅಕ್ರಮ ಎಂದು ಪಾಲಿಕೆ ಪರ ನ್ಯಾಯ ಬಂದಿದೆ.
ನೂರಾರು ಕೋಟಿ ಆಸ್ತಿಯಾಗಿದೆ. ಪಾಲಿಕೆ ಅಧಿಕಾರಿಗಳು, ವಕೀಲರು ಮತ್ತು ಮೊದಲಾದವರು ಭಾಗಿಯಾಗಿದ್ದರು. ಅವರಿಗೆ ಅಭಿನಂದನೆಗಳು. ಸರ್ವೆ ನಂಬರ್ 26 ಈಗ ಪಾಲಿಕೆಯ ಆಸ್ತಿಯಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಇದನ್ನ ಸಿಟಿ ಬಸ್ ನಿಲ್ದಾಣ ಮಾಡಿ ಮತ್ತು ಮಹಾಪುರುಷರ ಹೆಸರನ್ನ ಇಡಿ ಎಂದು ಮನವಿ ಮಾಡಿದರು. ಮತ್ತೆ ಹೋರಾಟ ನಡೆಸದಂತೆ ಉಸ್ತುವಾರಿ ಸಚಿವರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
Construct a good city bus stand