SUDDILIVE || SHIVAMOGGA
ಚಲುವಾದಿಗೆ ಭದ್ರತೆ ನೀಡಿ ಡಿ.ಎಸ್.ಅರುಣ್-DS Arun demands provides security to Chaluvadi
ನಾಯಿ ಬೊಗಳಿದರೆ ಆನೆ ತಿರುಗಿ ನೋಡೀತಾ ಎಂದು ನಿನ್ನೆ ಕಲಬುರ್ಗಿಯಲ್ಲಿ ಬಿಜೆಪಿಯ ನಾರಾಯಣ ಸ್ವಾಮಿ ಕಾಂಗ್ರೆಸ್ ನವರಿಗೆ ಹೇಳಿದ ಹೇಳಿಕೆಗೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆಯನ್ನ ಎಂಎಲ್ ಸಿ ಡಿಎಸ್ ಅರುಣ್ ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ದಬ್ಬಾಳಿಕೆಯನ್ನ ಖಂಡಿಸಿರುವ ಎಂ ಎಲ್ ಸಿ ಅರುಣ್, ಚಲುವಾದಿ ನಾರಾಯಣ ಸ್ವಾಮಿಯವರು ಎಐಸಿಸಿ ಮಲ್ಲಿಕಾರ್ಜುನಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣ ವಿರುದ್ಧ ಬಿಡಿ ಬಿಡಿಯಾಗಿ ಸದನದಲ್ಲಿ ಬಿಚ್ಚಿಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಗೂಂಡಾ ವರ್ತನೆ ನಡೆಸಿದ್ದಾರೆ.
ಇದೇ ಖರ್ಗೆ ಅವರು ಪ್ರಧಾನಿಯನ್ನ ವಿಷಸರ್ಪ ಎಂದು ಕರೆದಿದ್ದರು. ನಾವು ಹಾಗೆ ವರ್ತಿಸಿದ್ದೀವಾ? ಹೇಗೆ ಪ್ರತಿಭಟನೆ ನಡೆಸಬೇಕೆಂದು ನಡೆಸಿದ್ದೇವೆ. ಹಾಗಾಗಿ ನಮ್ಮ ನಾಯಕ ಚಲುವಾದಿ ನಾರಾಯಣ ಸ್ವಾಮಿ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿದರು.
ಯುವ ಕಾಂಗ್ರೆಸ್ ನವರ ಪ್ರತಿಭಟನೆ ಕಾನೂನು ಬಾಹಿರ ಪ್ರತಿಭಟನೆ
ಮಾಜಿ ಸಂಸದರಾದ ಪ್ರತಾಪ್ ಸಿಂಹನವರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಬ್ಯುಲೆನ್ಸ್ ಬಳಕೆಯನ್ನ ದುರ್ಬಳಕೆ ಮಾಡಿ ತುರ್ತು ಸೇವೆಯನ್ನ ಅಣಕಿಸಿದ್ದಾರೆ. ಅಂಬ್ಯುಲೆನ್ಸ್ ಬಳಸಿರುವುದನ್ನ ಅನುಮತಿ ಪಡೆಯದೆ ಬಳಸಲಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಅರುಣ್ ಆಗ್ರಹಿಸಿದರು.