ಪ್ರತಾಪ್ ಸಿಂಹರನ್ನ ಹುಚ್ಚಾಸ್ಪತ್ರೆಗೆ ದಾಖಲಿಸುವ ಅಣುಕು ಪ್ರದರ್ಶ-ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ-Mock demonstration of admitting Pratap Sinha to a mental hospital

 SUDDILIVE || SHIVAMOGGA

ಪ್ರತಾಪ್ ಸಿಂಹರನ್ನ ಹುಚ್ಚಾಸ್ಪತ್ರೆಗೆ ದಾಖಲಿಸುವ ಅಣುಕು ಪ್ರದರ್ಶ-ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ-Mock demonstration of admitting Pratap Sinha to a mental hospital - Youth Congress's innovative protest


Mock, prathap sinha

ಶಿವಮೊಗ್ಗದ ಅಂಚೆ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಿತು. ಶಿಕ್ಷಣ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಎಂಪಿ ಪ್ರತಾಪ ಸಿಂಹನಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಾಪ್ ಸಿಂಹ ರವನ್ನ ಅಂಬ್ಯುಲೆನ್ಸ್ ನಲ್ಲಿ ಹುಚ್ಚಾಸ್ಪತ್ರೆಗೆ ಕಳುಹಿಸುವ ಅಣಕು ಪ್ರದರ್ಶನ ನಡೆಸಲಾಯಿತು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನೆಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರರಿಗೆ ಪತ್ರ ಬರೆದು ಪ್ರತಾಪ್ ಸಿಂಹರಿಗೆ ಮಾನಸಿಕ ರೋಗದ ಚಿಕಿತ್ಸೆ ಅಗತ್ಯವಿದೆ ಎಂದು ಪತ್ರ ಬರೆದು ಪೋಸ್ಟ್ ಮಾಡಲಾಗಿದೆ. 

ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮಾಜಿ ಎಂಪಿ ಪ್ರತಾಪ್ ಸಿಂಹ ಅನ್ ಪಡ್ ಎಂದು ಅವಹೇಳನವಾಗಿ ಕರೆದಿರುವುದು ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆಗೆ ಕಾರಣವಾಗಿದೆ. ಸಂವಿದಾನದ ಅಡಿ ಶಿಕ್ಷಣ ಸಚಿವರು ಕೆಲಸ ಮಾಡುತ್ತಿದ್ದಾರೆ. 

ಮಧು ಬಂಗಾರಪ್ಪನವರು ಸಚಿವರಾದ ನಂತರ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ‌ ಫಲಿತಾಂಶ ಬಂದಿದೆ. ಪ್ರತಾಪ ಸಿಂಹರವರು ಅಧಿಕಾರದಲ್ಲಿದ್ದಾಗ ಮಾಡಿಕೊಂಡಂತಹ ಅವಾಂತರಗಳು ಏನೇನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ. 

ಸಂಘಟನೆಯ ಚರಣ್ ಶೆಟ್ಟಿ ಜೆ, ಪ್ರವೀಣ್ ಕುನಾರ್, ಮಲಗೊಪ್ಪದ ಶಿವು, ತೌಫಿಕ್, ಎಂಡಿ ಷರೀಫ್,  ಅನಿಲ್ ಪಾಟೀಲ್, ಆಕಾಶ್, ಹಾಪ್ ಕಾಮ್ಸ್ ಅಧ್ಯಕ್ಷ ಸಂತೇಕಡೂರು ವಿಜಿ, ಮಧು, ಚೇತನ್ ಗೌಡ ಮೊದಲಾದವರು ಪ್ರತಿಭಟನೆಯಲ್ಲಿ ಭ ಅಗಿಯಾಗಿದ್ದರು.

 Mock demonstration of admitting Pratap Sinha to a mental hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close