ತ್ಯಾಗದ ಮಾತನಾಡಿದ ದತ್ತಾತ್ರಿ ಹೊಸಬಾಳೆ-Dattatri Hosabale spoke about sacrifice

 SUDDILIVE || SHIVAMOGGA

ತ್ಯಾಗದ ಮಾತನಾಡಿದ ದತ್ತಾತ್ರಿ ಹೊಸಬಾಳೆ-Dattatri Hosabale spoke about sacrifice

Dattatri Hosabale, sacrifies

ಸಂಘ ಎಲ್ಲರನ್ನೂ ಪ್ರಚಾರಕನ್ನಾಗಿ ಮಾಡಿಲ್ಲ. ಆದರೆ ಎಲ್ಲರನ್ನೂ ಸ್ವಯಂ ಸೇವಕರನ್ನಾಗಿ ರೂಪಿಸಲು ಹೊರಟಿದೆ ಎಂದು ಆರ್ ಎಸ್ ಎಸ್ ನ ಸಹಕಾರ್ಯವಾಹರಾದ ದತ್ತಾತ್ರಿ ಹೊಸಬಾಳೆ ತಿಳಿಸಿದರು

ನಗರದ ಕುವೆಂಪು ರಂಗ ಮಂದಿರದಲ್ಲಿ ಹಿರಿಯೂರು ಕೃಷ್ಣಮೂರ್ತಿ ಸಂಸ್ಕರಣಾ ಸಮಿತಿಯ ವತಿಯಿಂದ ಹಿರಿಯೂರು ಕೃಷ್ಣಮೂರ್ತಿಗಳ ಸಂಸ್ಕರಣಾ ಗ್ರಂಥ ಕೃಷ್ಣಸ್ಮೃತಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. 

ಪ್ರತಿಫಲ ಆಕ್ಷೇಪಿಸಿದೆ ಇರುವ ಕಾರ್ಯಕರ್ತರನ್ನ ಗುರುತಿಸಿ ಬೆನ್ನುತಟ್ಟುವ ಕೆಲಸವನ್ನ‌ ಹಿರಿಯೂರು ಮಾಡಿದ್ದರು. ಹಾಗಾಗಿ ಕಾರ್ಯಕರ್ತರು ಮತ್ತೊಮ್ಮೆ ದೇಶ ಸೇವೆಗೆ ನಿಲ್ಲುವಂತೆ ಮಾಡಿದ್ದಾರೆ. ಪತ್ನಿ ಉಮಾರವರ ತವರು ಮನೆಯಲ್ಲೂ ಅವರ ಸಹೋದರ ಮತ್ತು ಗಂಡನ ಮನೆಯಲ್ಲಿ ಪತಿಯೇ ಆರ್ ಎಸ್ ಎಸ್ ನವರಾಗಿದ್ದರು. ಹಿರಿಯೂರು ಕಾಲದ ನಂತರವೂ ಸಹಧರ್ಮಿಣಿಯಾಗಿ  ಸಂಘದ ಕೆಲಸ ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.

ಅಮರಕಲೆ ನಾರಾಯಣ್, ಕೃಷ್ಣಮೂರ್ತಿಯ ಬಗ್ಗೆ ಈ ಪೀಳಿಗೆಗೆ ಹೇಳಿಕೊಡಬೇಕಿದೆ. ಕೇವಲ ಭಾಷಣದ ಕೆಲಸ ಮಾಡಿದರೆ ಸಾಲದು. ರಾಮನ ಹೆಸರಿನಿಂದ  ರಾಮದರ್ಶನವಾಗದು, ರಾಮನ ಕೆಲಸ ಮಾಡಬೇಕು. ಇದು ಭಗವಂತನಾದ ಆಂಜನೇಯನ ಸಂದೇಶವಾಗಿತ್ತು. ಆ ಕೆಲಸವನ್ನ ನಾವೆಲ್ಲರೂ ಮಾಡೋಣ ಎಂದರು. 

ಮನುಷ್ಯ ಶಾಶ್ವತನಾಗುವುದು ಹೇಗೆ? ಪಶ್ಚಿಮದ ರಾಷ್ಟ್ರಗಳಲ್ಲಿ ಶಾಶ್ವತವಾಗಿರಲು ಪುಸ್ತಕ ಬರೆಯಬೇಕು ಅಥವಾ ವಂಶದ ಬಗ್ಗೆ ತಮ್ಮ ಪೀಳಿಗೆಗೆ ಹೇಳಿಕೊಡಬೇಕು. ಪೂರ್ವ ದೇಶದಲ್ಲಿ ಅದರಲ್ಲೂ ಭಾರತದಲ್ಲಿ ತ್ಯಾಗವನ್ನ ಮಾಡುವವರು ಶಾಶ್ವತವನ್ನ ಪಡೆಯುತ್ತಾರೆ. ಗೊಮಟೇಶ್ವರ ತ್ಯಾಗದ ಮೂರ್ತಿಯಾಗಿದ್ದಾರೆ. ಈ ದೇಶದಲ್ಲಿ ತ್ಯಾಗಕ್ಕೆ ಬೆಲೆಯಿದೆ. ಈ ಕೆಲಸವನ್ನ ಸಂಘ ನೂರು ವರ್ಷದಿಂದ ಮಾಡುತ್ತಾ ಬಂದಿದೆ. ಆದರ್ಶ ಸ್ವಯಂ ಸೇವಕ ಹೇಗಿರಬೇಕು ಎಂಬುದಕ್ಕೆ ಇರುವ ಕೈಪಿಡಿ ಕೃಷ್ಣಸ್ಮೃತಿಯಾಗಿದೆ ಎಂದರು. 

ಕೃಷ್ಣಸ್ಮೇತಿಯಲ್ಲಿ 70 ಲೇಖನಗಳಿವೆ. 70 ಹೂಮಾಲೆಯನ್ನ ಅರ್ಪಿಸಲಾಗಿದೆ. ನಾಲ್ಕು ವಲಯಗಳಿವೆ. ಒಂದೊಂದು ಸಂದೇಶಗಳಿವೆ ಎಂದಿದೆ. ಶೀರ್ಷಿಕೆ ಓದುವಾಗಲೇ ವ್ಯಕ್ತಿತ್ವದ ರೂಪುಗಳನ್ನ ತೆರವುಗೊಳಿಸುತ್ತದೆ. ಮೇರು ವ್ಯಕ್ತಿತ್ವ, ಹೂವಿನ ವ್ಯಕ್ತಿತ್ವ, ಪ್ರಾಂಜನರು, ವಾತ್ಸಲ್ಯ ರೀತಿ, ಪ್ರೇರಣ ಶಕ್ತಿ, ಉತ್ತಮ ಸಲಹೆಗಾರ, ಮಾತೃವಾತ್ಲ್ಯದ ಪ್ರತಿರೂಪ, ಚಾಣುಕ್ಯದ ಚಿಂತನೆ ಹೀಗೆ ವ್ಯಕ್ತಿಗಳನ್ನ ನೂರಾರು ರೂಪದಲ್ಲಿ ಪರಿಚಯಿಸಲಾಗಿದೆ ಎಂದರು.

ಪುಸ್ತಕ ಬರೆಯ ಬೇಕೆಂದು ಕೊಂಡ ವ್ಯಕ್ತಿ ಕೃಷ್ಣಮೂರ್ತಿಗಳಲ್ಲ. ಹಿರಿಯೂರು ಗತಿಸಿದ ನಂತರನೇ ಬಂದಿದ್ದರೆ ಸರಿಯಾಗಿರುತ್ತಿತ್ತು. 20 ವರ್ಷದ ನಂತರ ಈ ಪುಸ್ತಕ ಬಂದಿದೆ. ಸಂಘದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ವ್ಯಕ್ತಿಯ ಪುಸ್ತಕ ಈಗ ಬಂದಿರುವುದು ಸಮಯೋಚಿತವಾಗಿದೆ ಎಂದರು. 

ಹಿರಿಯೂರುನವರು ಮತ್ತು ಬಿಎಸ್ ವೈ ಮಲೆನಾಡಿನವರಲ್ಲ. ಒಬ್ಬರು ಬಯಲುಸೀಮೆಯವರು ಮತ್ತೊಬ್ವರು ಮಂಡ್ಯದವರು. ಇಬ್ವರನ್ನೂ ಮಲೆನಾಡು ಸ್ವೀಕರಿಸಿದೆ. ಅವರೂ ಸಹ ಹೊರಗಿನವರಾಗಿ  ಉಳಿಯಲಿಲ್ಲ. ಇವರು ಸಹ ನಮಗೆ ಬೇರೆಯವರು ಅನಿಸಲಿಲ್ಲ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ದೊರೆತಿದೆ ಎಂದರು. 

ಸಂಘದವರು ಹೆಚ್ಚಾಗಿ ಅಧ್ಯಾಪಕರಾಗಿದ್ದರಿಂದ ವಿದ್ಯಾರ್ಥಿಗಳನ್ನ ಆರ್ ಎಸ್ ಎಸ್ ಗೆ ಸೆಳೆಯುವ ಕೆಲಸ ಮಾಡಲಾಗುತ್ತಿತ್ತು. ಅಧ್ಯಾಪಕರಾದ ಕಾರಣ ಪ್ರಚಾರಕ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಇಂತಹವರ ಸಾಲಿಗೆ ಹಿರಿಯೂರು ಕೃಷ್ಣಮೂರ್ತಿಗಳು ಸೇರುತ್ತಾರೆ ಎಂದರು. 

ಕರ್ತವ್ಯದ ಋಣದಲ್ಲಿ ಹಿರಿಯೂರು ಕೃಷ್ಣಮೂರ್ತಿ ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ.  ಋಣ ತೀರಿಸುವುದರ ಜೊತೆ ತನ್ನನ್ನ ವ್ಯಕ್ತಿತ್ವವನವನ್ನ ಬೆಳೆಸಿಕೊಂಡಿದ್ದರು. ಶಿಲ್ಪಿಯ ಕೆಲಸವನ್ನ ಅವರು ಅದ್ಭುತವಾಗಿ ಮಾಡಿದ್ದರು ಎಂದು ಹೇಳಿದರು.  

ಈಶ್ವರಪ್ಪ ಮಾತು

ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ, ಅವರ ಜೊತೆ ಕೆಕಸ ಮಾಡಲು ಅವಕಾಶ ಸಿಕ್ಕಿದ್ದು ಸೌಭಾಗ್ಯ, 1985 ರಲ್ಲಿ ಬಿಜೆಪಿ 2 ನೇ ಸ್ಥಾನಕ್ಕೆ ಕುಸಿದ್ವಿ, ರಾಜಕಾರಣದಲ್ಲಿ ಕಳೆದುಕೊಂಡ್ವಿ ಎಂಬ ಭಾವನೆಯಲ್ಲಿದ್ವಿ, ನಾಗಪ್ಪನವರ ಬಳಿ ಕೃಷ್ಣಮೂರ್ತಿಗಳು ಕರೆದುಕೊಂಡು ಹೋದರು. 

ರೈತರ ಹೋರಾಟ ಮಾಡಿ ಎಂದಿದ್ವಿ. ಯಡಿಯೂರಪ್ಪ ನಾನು ಒಂದು ಸ್ಕೂಟರ್ ನಲ್ಲಿ ಪ್ರಯಾಣ ಮಾಡುದ್ವಿ ಲಕ್ಷಾನುಗಟ್ಟಲೆ ಹಣ ಸಂಗ್ರಹವಾಯಿತು. ಇದಕ್ಕೆ ಹಿರಿಯೂರು ಕೃಷ್ಣ ಮೂರ್ತಿ ಕಾರಣ ಎಂದರು. 

ತುರ್ತು ಸಂದರ್ಭದಲ್ಲಿ ಮಲನಾಡ ಅಸೋಸಿಯೇಷನ್ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದವರು. ನನ್ನ ತಂದೆ ತಾಯಿ ಬೆಳೆಸಿದಂತೆ ಕೃಷ್ಣಮೂರ್ತಿಗಳು ಬೆಳೆಸಿದ್ದಾರೆ. ಹಿಂದೂ ಸಮಾಜೋತ್ಸವ ನಡೆಸಲು ಸ್ಪೂರ್ತಿ ಅವರೆ. ಎಲ್ಲಾ ಪಕ್ಷ ಮತ್ತು ಜಾತಿ ಸೇರಿಸಲು ಕೃಷ್ಣಮೂರ್ತಿ ನಿರ್ದೇಶಿಸಿದರು. ಕಾಂಗ್ರೆಸ್ ನಾಯಕರು ಸಮಾಜೋತ್ಸವದಲ್ಲಿ ಭಾಗಿಯಾದರು. ಕಾರ್ಯಕ್ರಮ ಯಶಸ್ವಿಯಾಯಿತು. 

1989 ರ ಚುನಾವಣೆಯಲ್ಲಿ ಆನಂದರಾವ್ ಹಿಂದಕ್ಕೆ ಸರಿದರು. ಕೆ.ಹೆಚ್ ಶ್ರೀನಿವಾಸ್ ಎದುರು ಸ್ಪರ್ಧಿಸಿದ್ದೆ. ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಮತ್ತು ಹಿರಿಯೂರು ಕಾರಣವೆಂದರು. ಬಿಎಸ್ ವೈ ಮತ್ತು ನನಗೆ ಫ್ಯಾಕ್ಟರಿ ನೋಡಿಕೊಳ್ಳಲು ಆಗಲಿಲ್ಲ. ಒಂದಿದ್ದನ್ನ ಮೂರು ಫ್ಯಾಕ್ಟರಿ ಮಾಡಿಸಿದವರು.  ಚುನಾವಣೆಯಲ್ಲಿ ಗೆಲ್ಲಿಸಿದ್ದು ಹಿರಿಯೂರು ಕೃಷ್ಣಮೂರ್ತಿಗಳು ಎಂದರು. 

ಬಿಎಸ್ ವೈ ಮಾತು

ಮಾಜಿ ಸಿಎಂ ಬಿಎಸ್ ವೈ ಮಾತನಾಡಿ, ಹಿರಿಯೂರು ಕೃಷ್ಣಮೂರ್ತಿಯವರು ಒಬ್ಬ ಆದರ್ಶ ವ್ಯಕ್ತಿ, ಅವರು ಎಲ್ಲರನ್ನು ಬೆಳಸಿದವರು. ನಾನೂ ಅನೇಕ ಬಾರಿ ಸಮಸ್ಯೆಗಳು ಸಿಕ್ಕಿಕೊಂಡಗ ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನೂ ಸಿಎಂ ಆಗಲು ಅವರೇ ಮೂಲಕಾರಣ. ಅವರು ನಮಗೆಲ್ಲರಿಗೂ ಮೇಷ್ಟ್ರು. ನಾನೂ ಸಿಎಂ ಆದಾಗ ಅವರು ಇರಲಿಲ್ಲ. ಆ ನೋವು ನನಗೆ ಕಾಡುತ್ತಿದೆ ಎಂದರು

ಸು.ರಾಮಣ್ಣ, ಭ.ಮ.ಶ್ರೀಕಂಠ, ಆರ್ ಎಸ್ ಎಸ್ ನ ಪಟ್ಟಾಭಿರಾಮ್, ಆರ್ ಜೆ ರಾಮಚಂದ್ರ, ಉಮಾ ಹಿರಿಯೂರು ಕೃಷ್ಣಮೂರ್ತಿ, ಮಾಜಿ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಮೊದಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

Dattatri Hosabale spoke about sacrifice

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close