SUDDILIVE || BHADRAVATHI
ನಾಲೆಯಲ್ಲಿ ತೀವ್ರ ಶೋಧದ ನಂತರ ಪತ್ತೆಯಾದ ಮೃತ ದೇಹ-Dead body found in canal after intensive search
ಭದ್ರಾ ಬಲದಂಡೆ ನಾಲೆಗೆ ಕಾರೊಂದು ಉರುಳಿ ಬಿದ್ದಿದ್ದು, ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ. ತೀವ್ರ ಶೋಧದ ನಂತರ ಮೃತನ ದೇಹ ಚಾನೆಲ್ ನಲ್ಲಿ ಪತ್ತೆಯಾಗಿದೆ.
ನಿನ್ನೆ ಸಂಜೆ ಸ್ವಿಫ್ಟ್ ಡಿಸೇರ್ ಕಾರಿನಲ್ಲಿ ಭೋಜರಾಜ್ (32) ಎಂಬ ವ್ಯಕ್ತಿ ದಾನವಾಡಿಯಿಂದ ನಾಗವಲ್ಲಿ ಗ್ರಾಮದೆಡೆಗೆ ಹೋಗುವಾಗ ನಾಲೆಗೆ ಕಾರು ಉರುಳಿ ಬಿದ್ದಿದೆ. ಈ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸಂಜೆಯವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕಾರಿನ ಸುಳಿವು ಲಭ್ಯವಾಗಿರಲಿಲ್ಲ.
ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ನಾಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ, ಸಾಕಷ್ಟು ಹುಡುಕಾಟದ ನಂತರ ನಾಲೆಯಲ್ಲಿ ಕಾರೊಂದು ಕಡೆ ಪತ್ತೆಯಾದರೆ ಭೋಜರಾಜರ ಮೃತ ದೇಹ ಬೇರೆಡೆ ಪತ್ತೆಯಾಗಿದೆ.
ಇತ್ತೀಚೆಗೆ ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡಲಾಗಿದ್ದು, ಇದರಿಂದ ನಾಲೆಯು ಮೈದುಂಬಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡೆತಡೆಯಾಗಿತ್ತು.
ಭೋಜರಾಜು ಬಾಳೆಹೊನ್ನೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಡೆಸುತ್ತಿದ್ದರು. 6 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಪತ್ನಿ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Dead body found in canal