SUDDILIVE || BHADRAVATHI
JCB and dead body of wild boar found in Bhadra canal
ಭದ್ರಾವತಿ ತಾಲೂಕಿನ ಅಂತರಗಂಗೆ -ಕೂಡ್ಲಿಗೆರೆ ಬಳಿ ಭದ್ರಾ ಕಾಲುವೆಯಲ್ಲಿ ಕಾಡುಕೋಣದ ಶವ ಛಿದ್ರವಾಗಿ ತೇಲುತ್ತಿರುವ ವಿಡಿಯೋ ತುಣುಕು ವೈರಲ್ ಆಗಿತ್ತು. ಜೊತೆಗೆ ದಡದ ಮೇಲೆಯೇ ಇದ್ದ ಜೆಸಿಬಿಯೇ ಶವ ವಿಲೇವಾರಿ ಮಾಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಎದುರೇ ನಡೆದ ಘಟನೆ ಎಂದು
ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಪುತ್ರ ಅಜಿತ್ ಗೌಡ ಫೇಸ್ ಬುಕ್ ಲ್ಲಿ ಬರೆದುಕೊಂಡಿದ್ದರು. ಆದರೆ ಅಜಿತ್ ಗೌಡರ ಆರೋಪ ಸರಿ ಇದ್ದರೂ ಸಹ ವಿಡಿಯೋ ಮಾಹಿತಿ ಪೂರ್ಣ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಜಿತ್ ಗೌಡರ ಪೋಸ್ಟ್ ಏನಿತ್ತು..? ಅರಣ್ಯ ಅಧಿಕಾರಿಗಳ ಅಮಾನುಷ ಕೃತ್ಯ. ಸತ್ಯ ಕಾಡು ಕೋಣ ಮಹಜರು ಮಾಡದೇ, ಶವ ಸಂಸ್ಕಾರ ನೆರವೇರಿಸದೇ ಅಮಾನವೀಯವಾಗಿ ಕೋಣವನ್ನು ತುಂಡಾಗಿ ಕತ್ತರಿಸಿದ್ದಾರೆ. ಚಾನೆಲ್‌ಗೆ ಜೆಸಿಬಿ ಬಳಸಿ ಬಿಸಾಡಿದ್ದಾರೆ. ಈ ಕುರಿತು ಕ್ರಮ ಜರುಗದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಪೋಸ್‌ಟ್ ಮಾಡಿದ್ದರು.
ವಿಡಿಯೊ ವ್ಯಾಪಕವಾಗಿ ಹರಡಿದ ನಂತರ, ಅರಣ್ಯ ಸಚಿವರ ಕಚೇರಿಗೆ ಮಾಹಿತಿ ತಲುಪಿತ್ತು. ಆದರೆ ಅಧಿಕಾರಿಗಳು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಭದ್ರಾವತಿಯ ಉಸ್ತುವಾರಿ ಡಿಸಿಎಫ್, ಪ್ರಸನ್ನ ಕೃಷ್ಣ ಪಟಗಾರ್ ಮಾಹಿತಿ ನೀಡಿ ಈ ಘಟನೆ ಮೇ 6 ರಂದು ನಡೆದಿದೆ. ಕೋಣ ನೀರಿಗಾಗಿ ಕಾಲುವೆಯ ಬಳಿಗೆ ಬಂದು ಆಕಸ್ಮಿಕವಾಗಿ ಬಿದ್ದಿರಬಹುದು. ಮರುದಿನ ಇಲಾಖೆ ಸಿಬ್ಬಂದಿಗೆ ಶವವು ನೀರಿನ ಗೇಟ್ ತಡೆಗೋಡೆಯಲ್ಲಿ ಸಿಲುಕಿರುವುದು ಕಂಡುಬಂದಿತು. ಶವವನ್ನು ಮೇಲೆತ್ತುವ ಪ್ರಯತ್ನದ ವೇಳೆ ಅದು ಸೀಳಿ ತೇಲಿಹೋಗುವಾಗ ವಿಡಿಯೋ ಮಾಡಲಾಗಿದ್ದು ಅದು ಭಾಗಶಃ ದೃಶ್ಯವಷ್ಟೇ. ಪೋಸ್ಟ್ ಮಾರ್ಟಮ್ ಮಾಡಿ ಸುಡಲಾಗಿದೆ ಎಂದು ತಿಳಿಸಿದ್ದಾರೆ.
Wild boar found in Bhadra canal