SUDDILIVE || BHADRAVATHI
ಜಿಂಕೆ ರಕ್ಷಣೆ-Deer protection
ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ದಡದಿಂದ ಬಚಾವ್ ಮಾಡಿದ್ದಾರೆ.
ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ನೋಡಿ ಶಿವಮೊಗ್ಗದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ಭದ್ರ ನಾಲೆಗಳಲ್ಲಿ ನದಿಯ ಒಳಹರಿವು ಹೆಚ್ಚಾಗಿದ್ದು, ಜಿಂಕೆಯೊಂದು ನೀರಿಗೆ ಸಿಲುಕಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅಗ್ನಿಶಾಮಕ ಠಾಣೆಯ Afsto- ಮುಕ್ತುಂ ಉಸೇನ್, ಪ್ರಮುಖ ಅಗ್ನಿಶಾಮಕ ಠಾಣೆಯ ಚೇತನ್ ಕುಮಾರ್, ಚಾಲಕ - ಶರತ್ ಕುಮಾರ್ .ಕೆ, ನಿರಂಜನ್, ಸಂತೋಷ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ - ಬಿ ಆರ್ ಅಶೋಕ್ ಕುಮಾರ್, ಚಾಲಕ ತಂತ್ರಜ್ಞ - ಗಣೇಶ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Deer protection