SUDDILIVE || SHIVAMOGGA
ಶಾರ್ಟ್ ಸರ್ಕೂಟ್, ಗೋಪಾಳದ ಬೇಕರಿಯಲ್ಲಿ ಬೆಂಕಿ-Short circuit, fire at Gopal's bakery
ಗೋಪಾಳದ ಮುಖ್ಯ ರಸ್ತೆಯಲ್ಲಿರುವ ದಿ ಬೇಕ್ ಅಂಡ್ ಫ್ಲೇಕ್ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಸುಟ್ಟು ಕರಕಲಾಗಿದೆ. ಮಾಹಿತಿ ಪ್ರಕಾರ ಸುಮಾರು 6 ರಿಂದ 7 ಲಕ್ಷ ರೂ. ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದೆ.
ನಿನ್ನೆ ರಾತ್ರಿ ಸುಮಾರು 10-30 ಕ್ಕೆ ಬೇಕರಿ ಕ್ಲೋಸ್ ಮಾಡಿಕೊಂಡು ಮನೆಗೆ ಬಂದ ವೇಳೆ ಸುಮಾರು 11-15 ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬೇಕರಿಯ ಮುಂದಿನ ದ್ವಾರದ ಬಾಗಿಲಲ್ಲೇ ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿ ಬಹುತೇಕ ಕರಕಲಾಗಿದೆ ಎಂದು ಹೇಳಲಾಗುತ್ತಿದೆ. ಕೆಳ ಅಂತಸ್ಥಿನಲ್ಲಿ ಬೇಕರಿಯಿದ್ದರೆ, ಮೇಲಂತಸ್ಥಿನಲ್ಲಿ ಪಿಜ್ಜಾ, ಬರ್ಗರ್ ಮೊದಲಾದ ವಸ್ತುಗಳನ್ನ ಮಾರಾಟ ಮಾಡುವ ಸೆಲ್ಲಿಂಗ್ ಪಾಯಿಂಟ್ ಇದಾಗಿತ್ತು.
ಮಂತ್ರಾಲಯಕ್ಕೆ ಹೊರಟಿದ್ದ ಮಾಲೀಕರು ವಾಪಾಸ್
ಬೇಕರಿ ಮಾಲೀಕ ರಾಘವೇಂದ್ರ ಎಂಬುವರು ಅತ್ತೆ ಮತ್ತು ಮಾವರನ್ನ ಬೇಕರಿ ನೋಡಿಕೊಳ್ಳಲು ಬಿಟ್ಟು ಪತ್ನಿ ಮತ್ತು ಮಕ್ಕಳ ಜೊತೆ ಮಂತ್ರಾಲಯಕ್ಕೆ ಹೊರಟಿದ್ದರು. ಬಸ್ ಪ್ರಯಾಣದಲ್ಲಿರುವಾಗಲೇ ಈ ವಿಷಯ ಗೊತ್ತಾಗಿ ಅವರೆಲ್ಲಾ ವಾಪಾಸ್ ಶಿವಮೊಗ್ಗಕ್ಕೆ ಬಂದಿದ್ದಾರೆ.
ಪರಿಹಾರ ಮರೀಚಿಕೆ!
ಬೇಕರಿಯಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡದಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಈ ಬಗ್ಗೆ ಸರ್ಕಾರದ ಸ್ಪಂದನೆ ಕಷ್ಟನೇ ಎನಬಹುದಾಗಿದೆ. ಈ ಹಿಂದೆ ಚೋರ್ ಬಜಾರ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ 8-9 ರಿಂದ ಅಂಗಡಿಗಳು ಸುಟ್ಟು ಕರಕಲಾಗಿದ್ದವು. ಇವತ್ತಿಗೂ ಅಲ್ಲಿನ ವ್ಯಾಪರಸ್ಥರಿಗೆ ಪರಿಹಾರ ದೊರೆತಿಲ್ಲ. ಅಲ್ಲಿಯ ಮಸೀದಿಯ ವತಿಯಿಂದ ಸಣ್ಣಪುಟ್ಟ ಪರಿಹಾರ ದೊರೆತಿದೆ ಬಿಟ್ಟರೆ ಆ ವ್ಯಾಪಾರಸ್ಥರ ಕೈ ಹಿಡಿದವರು ಯಾರೂ ಇಲ್ಲ. ಇಲ್ಲೂ ಸಹ ಅದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
Short circuit