ಮುಸ್ಲೀಂ ಗೂಂಡಾಗಳನ್ನ ಗಡಿಪಾರು ಮಾಡಿ-ಬಿಜೆಪಿ ನಗರ ಘಟಕ ಮನವಿ- Deport Muslim goons

 SUDDILIVE || SHIVAMOGGA

ಮುಸ್ಲೀಂ ಗೂಂಡಾಗಳನ್ನ ಗಡಿಪಾರು ಮಾಡಿ-ಬಿಜೆಪಿ ನಗರ ಘಟಕ ಮನವಿ-Deport Muslim goons - BJP urban unit appeals


Goons, Muslims

ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವ ಮುಸ್ಲಿಂ ಗೂಂಡಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ನಗರ ಬಿಜೆಪಿ ಇಂದು ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಿದೆ. 

ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಜೀವಕ್ಕೆ ಯಾವುದೇ ರೀತಿಯ ರಕ್ಷಣೆ ಇಲ್ಲವಾಗಿದೆ. ಮುಸ್ಲಿಂ ಗೂಂಡಾಗಳಿಂದ ನಿತ್ಯ ನಿರಂತರವಾಗಿ ಹಿಂದೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳಗಳು ಆಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಮೇ.27 ರ ರಾತ್ರಿ ಸರಿಸುಮಾರು 08.30 ರ ಹೊತ್ತಿಗೆ ಬಾಪೂಜಿನಗರದ 2 ನೇ ತಿರುವಿನಲ್ಲಿ ಹಿಂದೂಗಳ ಮೇಲೆ ಮುಸ್ಲಿಂ ಗೂಂಡಾಗಳು ಬಂದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. 

ನಾಗರಾಜ್ ಎಂಬ ಯುವಕ ಮತ್ತು ಅವರ ಪತ್ನಿಯಾದ ರೋಹಿಣಿ ಜೊತೆ ಇವರುವಾಗ ನಾಗರಾಜ್ ಮೇಲೆ ದೈಹಿಕವಾಗಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಪೌರಕಾರ್ಮಿಕನಾದ ನಾಗರಾಜ್ ಅವರ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದಲ್ಲದೇ, ಅವರ ಪತ್ನಿಯವರಿಗೂ ಕೂಡ ಬಹಳಷ್ಟು ಸಲ ಚುಡಾಯಿಸುತ್ತಿದ್ದರು. ಈ ರೀತಿಯ ಘಟನೆ ಬಾಪೂಜಿನಗರದಲ್ಲಿ ಹಲವಾರು ಬಾರಿ ನಡೆದಿದೆ ಎಂದು ಬಿಜೆಪಿ ಮನವಿಯಲ್ಲಿ ತಿಳಿಸಿದೆ. 

ಇತ್ತೀಚೆಗೆ ಗಾಂಧಿ ಬಜಾ‌ರ್ ನಲ್ಲಿ ಮುಸ್ಲಿಂ ಗೂಂಡಾಗಳಿಂದ ಹಿಂದೂ ಯುವಕರ ಮೇಲೆ ಚಾಕು ಇರಿತ ಘಟನೆ ನಡೆದಿದೆ. ಈ ರೀತಿಯ ಪ್ರಕರಣಗಳು ನಗರದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ಮುಸ್ಲಿಂ ಗೂಂಡಾಗಳಿಗೆ ಕಾನೂನು ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡು ಅವರನ್ನು ಗಡಿಪಾರು ಮಾಡಬೇಕೆಂದು ಶಿವಮೊಗ್ಗ ನಗರ ಬಿಜೆಪಿ ಮನವಿಯಲ್ಲಿ ಒತ್ತಾಯಿಸಿದೆ. 

ಮನವಿ ಸಲ್ಲಿಸುವ ವೇಳೆ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಂಜುನಾಥ್ ಕೆ.  ಹೆಚ್ ಕೆ ದೀನ್ ದಯಾಳ್, ಎಸ್ , ಮಾಜಿ ಕಾರ್ಪರೇಟರ್ ಗಳಾದ ಜ್ಞಾನೇಶ್ವರ್, ಸುರೇಖಾ ಮುರಳೀಧರ್, ವಿಕ್ರಂ ಮೊದಲಾದವರು ಉಪಸ್ಥಿರಿದ್ದರು. 

Deport Muslim goons


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close