ಪ್ರಧಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್! ವ್ಯಕ್ತಿ ಪೊಲೀಸರ ವಶಕ್ಕೆ-Derogatory post

 SUDDILIVE || SAGARA

ಪ್ರಧಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್! ವ್ಯಕ್ತಿ ಪೊಲೀಸರ ವಶಕ್ಕೆ-Derogatory post against the Prime Minister!

Derogatory, post


ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಗರದ ಕಾರ್ಗಲ್ ನಿವಾಸಿ ಒಬ್ಬ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಆತನನ್ನು ಸಾಗರದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಇತ್ತೀಚಿಗೆ ಭಾರತ ಪಾಕ್ ಯುದ್ಧ ಶುರುವಾಗಿ ಕದನ ವಿರಾಮದ ಬೆನ್ನಲ್ಲೇ ಮೋದಿ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿವೆ. ಸಾಧ್ಯವಾದಷ್ಟನ್ನ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.

ಕಾರ್ಗಲ್ ನ ಮಂದಾರ ಕಫರ್ಟ್ ಎಂಬ ಹೋಟೆಲ್ ಮಾಲೀಕ ಶಕೀರ್ ಹುಸೇನ್ ಪ್ರಧಾನಿ ಮೋದಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಎದುರು ಮಂಡಿಯೂರಿ ಕದನ ವಿರಮವೋ ಅಥವಾ ಅದಾನಿ ಬಂಧನವೋ ಎಂದು ಕೇಳುವ ಮತ್ತು ಮೋದಿ ಕದನವಿರಾಮವೇ ಇರಲಿ ಬಾಸ್ ಎಂಬ ಪೋಸ್ಟ್ ನ್ನ ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದನು. 

ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಅವರ ಆದೇಶದ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಎಫ್ಐಆರ್ ಆಗುವ ಸಾಧ್ಯತೆಯಿದೆ. 

Derogatory post

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close