SUDDILIVE || SHIVAMOGGA
ಇಡಿ ದಾಳಿ, ರಾಯಭಾರಿ, ರಿಯಲ್ ಎಸ್ಟೇಟ್ ಹಾಗೂ ಡಿ.ಎಸ್ ಅರುಣ್...!ED raid, real estate and D.S.Arun
ಗೃಹ ಸಚಿವ ಡಾ.ಪರಮೇಶ್ವರ್ ಮನೆಯ ಮೇಲೆ ಇಡಿ ದಾಳಿ ಮತ್ತು ಮೈಸೂರು ಸ್ಯಾಂಡಲ್ ಗೆ ಹೊರ ರಾಜ್ಯದ ಚಿತ್ರನಟಿ ತಮ್ಮನ್ನಾ ಭಾಟಿಯಾ ಅವರ ರಾಯಭಾರಿಗೆ ಹಾಗೂ ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಣಕ್ಕೆ ಸೇರಿಸಿರುವ ರಾಜ್ಯ ಕಾಂಗ್ರೆಸ್ ಕ್ರಮದ ಬಗ್ಗೆ ಎಂಎಲ್ ಸಿ ಡಿ.ಎಸ್ ಅರುಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರನ್ಯ ರಾವ್ ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಮನೆಯ ಮೇಲೆ ದಾಳಿ ನಡೆದಿದೆ. ಈ ವಿಚಾರದಲ್ಲಿ ಮಂಗಳೂರಿನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಹತ್ಯೆಯಾದಾಗ ಅವರ ಮನೆಗೆ ಹೋಗೊಲ್ಲ. ಕಾರಣ ಆತನೊಬ್ಬ ಕ್ರಿಮಿನಲ್ ಎಂದು ಇದೇ ಗೃಹ ಸಚಿವರು ಹೇಳಿದ್ದರು. ಈಗ ಪರಮೇಶ್ವರ್ ತಮ್ಮನ್ನ ಏನೆಂದು ಕರೆದುಕೊಳ್ತಾರೆ ಎಂದು ಪ್ರಶ್ನಿಸಿದರು.
ಹಾಗಿದ್ದರೆ ನಿನ್ನೆ ಗೃಹ ಮಂತ್ರಿಗಳ ಮನೆ ಮೇಲೆ ಯಾಕೆ ಇಡಿ ದಾಳಿ ಆಯಿತು? ರನ್ಯ ರಾವ್ ಅವರ 40 ಲಕ್ಷ ಸ್ಮಗ್ಲಿಂಗ್ ಹಣಕ್ಕಾಗಿ ಇರಬಹುದಾ ಎಂದು ಕೇಳುತ್ತೇನೆ. ರನ್ಯ ರಾವ್ ಅವರು ಎಷ್ಟು ಬಾರಿ ದುಬೈಗೆ ಹೋಗಿದ್ದಾರೆ ಹಾಗೆ ಅವರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಗೃಹ ಮಂತ್ರಿಗಳಾದ ಅವರಿಗೆ ಬ್ಯಾಗ್ ರೌಂಡ್ ಚೆಕ್ ಮಾಡುವುದು ಸುಲಭದ ಕೆಲಸ ಅದನ್ನ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ರಾಯಭಾರಿಗೆ ತಮನ್ನ
ಇದರ ಜೊತೆ ತಮನ್ನಾ ಅವರನ್ನು ಮೈಸೂರ್ ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನೇಮಕ ಮಾಡಿದೆ. ಕಳೆದ 30 ವರ್ಷಗಳ ಹಿಂದೆ ಮೈಸೂರು ಸ್ಯಾಂಡಲ್ ಪೌಡರ್ ಶಿವಮೊಗ್ಗದ ವ್ಯಕ್ತಿ ಒಬ್ಬರು ರಾಯಭಾರಿಯಾಗಿದ್ದರು. 30 ವರ್ಷಗಳ ಹಿಂದೆಯೇ ಒಬ್ಬರು ಮಾಡೆಲ್ ಅದಕ್ಕೆ ರಾಯಭಾರಿಯಾಗಿದ್ದರು ಎಂದರೆ ಕರ್ನಾಟಕದಲ್ಲಿ ಇನ್ಯಾರೋ ಬೇರೆಯವರು ಇಲ್ಲವೇ
ಕರ್ನಾಟಕದಲ್ಲಿ ಪ್ಯಾನ್ ಇಂಡಿಯಾಗೆ ಮಾರ್ಕೆಟಿಂಗ್ ಮಾಡುವಂತಹ ಸೆಲೆಬ್ರಿಟಿಗಳು ಹಾಗೂ ಮಾಡೆಲ್ ಗಳು ಇದ್ದಾರೆ. ಅಂತವರನ್ನ ಹುಡುಕುವ ಕೆಲಸ ರಾಜ್ಯ ಸರ್ಕಾರ ಮಾಡಿಲ್ಲ ಎಂದು ದೂರಿದರು.
ರಿಯಲ್ ಎಸ್ಟೇಟ್ ಸರ್ಕಾರ
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅರುಣ್ ಈಗಿರುವ ರಾಜ್ಯ ಸರ್ಕಾರ ಒಂದು ರಿಯಲ್ ಎಸ್ಟೇಟ್ ಸರ್ಕಾರ ರಿಯಲ್ ಎಸ್ಟೇಟ್ ನ ಅನುಗುಣವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಆಟ ಆಡುತ್ತಿದೆ. ರಿಯಲ್ ಎಸ್ಟೇಟ್ ನ ಡಿಮ್ಯಾಂಡ್ ಹಾಗೂ ಸಪ್ಲೇ ಮೇಲೆ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಎಂಬ ಹೆಸರಿನ ಬ್ರಾಂಡ್ ಅನ್ನ ಉಪಯೋಗಿಸಿ ರಾಮನಗರ ಹೆಸರು ಬದಲಾಯಿಸಿದ್ದು ಸರಿಯಲ್ಲ. ರಾಮನಗರಕ್ಕೆ ಅದರದೇ ಆದ ಇತಿಹಾಸ ಇದೆ. ಆದರೆ ವ್ಯಾಪಾರದ ದೃಷ್ಟಿಯಿಂದ ಈ ರೀತಿ ಮಾಡಿರುವುದು ಸರಿಯಲ್ಲ.
ED raid, real estate and D.S.Arun