SUDDILIVE || SHIVAMOGGA
ಅಪ್ರಾಪ್ತೆ ಬಾಲಕಿಯ ಸಾವಿಗೆ ನ್ಯಾಯಕೊಡಿಸಿ-ಡಿಎಸ್ ಎಸ್ ಅಂಬೇಡ್ಕರ್ ವಾದ ಪ್ರತಿಭಟನೆ-Protest for demanding justice for minor girl's death - DSSS Ambedkar advocates
ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕು ಭದ್ರಾಪುರ ಗ್ರಾಮದ ಅಪ್ರಾಪ್ತ ಮಾತುಬಾರದ (ಮೂಗಿ) ಬಾಲಕಿ ಖುಷಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಇಂದು ಡಿಎಸ್ ಎಸ್ (ಅಂಬೇಡ್ಕರ್ ವಾದ) ಸಂಘಟನೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿರು.
ರಾಮನಗರ ಜಿಲ್ಲೆ ಭದ್ರಾಪುರ ಗ್ರಾಮದ ಪರಿಶಿಷ್ಟ ಪಂಗಡದ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 15 ವರ್ಷದ ಅಪ್ರಾಪ್ತ ಮಾತುಬಾರದ (ಮೂಗಿ) ಬಾಲಕಿ ಖುಷಿ ಬಿನ್ ಲೇಟ್ ಯಲ್ಲಪ್ಪ ಇವಳು ದಿನಾಂಕ:11-05-2025 ರಂದು ಮನೆಯಿಂದ ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದು ದಿನಾಂಕ:12-05-2025ರಂದು ಭದ್ರಾಪುರ ಗ್ರಾಮದ ರೈಲ್ವೆ ಹಳಿ ಪಕ್ಕ ಮೋರಿ ಹತ್ತಿರ ಶವವಾಗಿ ಪತ್ತೆಯಾಗಿರುತ್ತಾಳೆ.
ಈ ಸಂಭಂದ ರಾಮನಗರ ಜಿಲ್ಲೆಯ ಬಿಡದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಖುಷಿಯ ಸಾವಿನ ಬಗ್ಗೆ ಸಮುದಾಯಕ್ಕೆ ಹಲವು ಅನುಮಾನಉಂಟಾಗಿ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯದವರು ಮತ್ತು ಸುತ್ತಮುತ್ತಲಿನ ಸ್ಥಳೀಯರು ಆತಂಕ ಹಾಗು ಅಭದ್ರತೆಯ ಭಯದ ವಾತವರಣದಲ್ಲಿದೆ ಎಂದು ಮನವಿಯಲ್ಲಿ ಸಂಘಟನೆ ತಿಳಿಸಿದೆ.
ಬಾಲಕಿ ಖುಷಿಯ ಸಾವಿನ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಆದೇಶಿಸ ಬೇಕೆಂದು ಸಮಿತಿಯು ಮನಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಎ.ಡಿ.ಆನಂದ, ಪ್ರಸನ್ನ ಕುಮಾರ್, ಮಂಜುನಾಥ್, ಶಿವು ಆಸ್ಕಿ ಮೊದಲಾದವರು ಭಾಗಿಯಾಗಿದ್ದರು.
Protest for demanding justice for minor girl