ಸಕ್ರೆಬೈಲಿನಿಂದ 2, ದುಬಾರೆಯಿಂದ 4 ಆನೆಗಳು ಆಂದ್ರಕ್ಕೆ ಹಸ್ತಾಂತರ-Elephts are being handed over to Andra

 SUDDILIVE || SHIVAMOGGA

ಸಕ್ರೆಬೈಲಿನಿಂದ 2, ದುಬಾರೆಯಿಂದ 4 ಆನೆಗಳು ಆಂದ್ರಕ್ಕೆ ಹಸ್ತಾಂತರ-Elephts are being handed over to Andra

Elephant, andra


ಮೇ.21 ರಂದು ನೆರೆಯ ರಾಜ್ಯವಾದ ಆಂದ್ರಕ್ಕೆ 6 ಆನೆಗಳನ್ನ ಹಸ್ತಾಂತರಿಸಲಾಗುತ್ತಿದ್ದು, ಸಕ್ರೆಬೈಲಿನ 2 ಆನೆಗಳನ್ನ ನೀಡಲಾಗುತ್ತಿದೆ. ವಿಧಾನ ಸೌಧದ ಮುಂದೆ ಸಿಎಂ ಮತ್ತು ಡಿಸಿಎಂ ಮೂಲಕ 6 ಆನೆಗಳನ್ನ ಹಸ್ತಾಂತರಿಸಲಾಗುತ್ತಿದೆ. 

ದುಬಾರೆಯ 4 ಆನೆಗಳು ಶಿವಮೊಗ್ಗದ ಸಕ್ರೆಬೈಲಿನ 2 ಆನೆಗಳನ್ನ ಹಸ್ತಾಂತರಿಸಲಾಗುತ್ತಿದೆ. ದುಬಾರೆಯ ದೇವ, ರಂಜನ್, ಮಾಸ್ತಿ, ಕರುಣ ಎಂಬ ನಾಲ್ಕು ಆನೆಗಳು ಹಾಗೂ ಸಕ್ರೆಬೈಲಿನ ಕೃಷ್ಣ ಮತ್ತು ಅಭಿಮನ್ಯು ಎಂಬ ಎರಡು ಆನೆಗಳನ್ನ ಕಳುಹಿಸಲಾಗುತ್ತಿದೆ. 

ಅಚ್ಚರಿ ಎಂದರೆ ಉತ್ತರ ಕನ್ನಡದ ದಾಂಡೇಲಿಗೆ ತಾಯಿ ಮತ್ತು ಮಗನನ್ನ ಬೇರ್ಪಡಿಸಲು ಈ ಹಿಂದೆ ಸಕ್ರೆಬೈಲಿನಿಂದ ಕೃಷ್ಣ ಮತ್ತು ಅಭಿಮನ್ಯು ಎಂಬ ಎರಡು ಆನೆಗಳನ್ನ ಕಳುಹಿಸಲಾಗಿತ್ತು. 

ಆನೆಗಳನ್ನ ಅಲ್ಲೆ ಬಿಟ್ಟು ಮಾವುತರು ವಾಪಾಸಾಗಿದ್ದರು. ಆ ಆನೆಗಳು ಅಲ್ಲೆ ಉಳಿದುಕೊಂಡಿತ್ತು. ಈಗ ಆ ಆನೆಗಳನ್ನ ಶಿವಮೊಗ್ಗಕ್ಕೆ ಕರೆಯಿಸಿಕೊಂಡು ಮೇ.21 ಕ್ಕೆ ಬೆಂಗಳೂರಿನ ವಿಧಾನ ಸೌಧದ ಮುಂದೆ ತಂದಿರಿಸಿ ಹಸ್ತಾಂತರಿಸಲಾಗುತ್ತಿದೆ. ಈ ವೇಳೆ ಪರಿಸರ ಆಸಕ್ತರ ಕೆಂಗಣ್ಣಿಗೂ ಈ ಹಸ್ತಾಂತರದ ಪ್ರಕ್ರಿಯೆ ಕೆಂಗಣ್ಣಿಗೆ ಗುರಿಯಾಗಿದೆ. 

ಆಂದ್ರದಲ್ಲಿ ಆನೆಗಳ ಹಾವಳಿಯನ್ನ ತಪ್ಪಿಸಲು ಕರ್ನಾಟಕದ 6 ಆನೆಗಳನ್ನ ಕರೆಯಿಸಿಕೊಂಡು ಆಪರೇಷನ್ ನಡೆಸಲು ಸಜ್ಜಾಗಿದೆ. ಆನೆ-ಮಾನವ ಸಂಘರ್ಷ ತಪ್ಪಿಸುವ ಸಲುವಾಗಿ ಈ ಕುಮ್ಕಿ ಆನೆಗಳನ್ನ ಹಸ್ತಾಂತರಿಸಲಾಗುತ್ತಿದೆ. 

Elephts are being handed over to Andra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close