SUDDILIVE || SHIVAMOGGA
ಗರಿಗೆದರಿದ ಕ್ರೀಡಾ ಚಟುವಟಿಕೆ-Feathered sporting activity
ಮೂರು ದಿನಗಳ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ನಿನ್ನೆ ರಾಜಕೀಯ ನಾಯಕರು ಚಾಲನೆ ಕೊಟ್ಟ ಬೆನ್ನಲ್ಲೇ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ.
ಬಾಲ್ ಬ್ಯಾಟ್ ಮಿಟನ್, ಕ್ರಿಕೆಟ್, ಹಾಕಿ, ಜಾವಲಿನ ಥ್ರೋ, ಖೊ... ಖೋ, ಥ್ರೋ ಬಾಲ್, ರಿಂಗ್ ಎಸೆತ ಸೇರಿ 24 ಈವೆಂಟ್ಸ್ ಗಳು ಜರುಗಲಿದೆ. ನೆಹರೂ ಕ್ರೀಡಾಂಗಣ, ಎನ್ ಇಎಸ್ ಮೈದಾನ, ಗೋಪಾಳದ ಈಜುಕೊಳ, ಜೆಎನ್ ಸಿಸಿ ಇಂಜಿನಿಯರ್ ಕಾಲೇಜು, ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 24 ಈವೆಂಟ್ಸ್ ಗಳು ಜರುಗಲಿದೆ.
ಕ್ರೀಡಾಕೂಟದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದೆ. ಸುಮಾರು 11½ ಸಾವಿರ ಜನ ಸರ್ಜಾರಿ ನೌಕರರು ಈ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ಸ್ಪರ್ಧೆ ಗೆದ್ದವರಿಗೆ ಬಹುಮಾನವನ್ನ ನೀಡಲಾಗುವುದು. ಒಟ್ಟಾರೆಯಲ್ಲಿ ಸರ್ಕಾರಿ ನೌಕರರು ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.
Feathered sporting activity