ಬ್ಯಾಂಕ್ ನೋಟಿಸ್ ಗೆ ಬೇಸತ್ತು ರೈತ ಆತ್ಮಹತ್ಯ-Farmer commits suicide

 Suddilive || Tharikere

ಬ್ಯಾಂಕ್ ನೋಟಿಸ್ ಗೆ ಬೇಸತ್ತು ರೈತ ಆತ್ಮಹತ್ಯೆ-Farmer commits suicide after getting fed up with bank notices

ಸಾಲಬಾದೆಯಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲೂಕು ಮುದ್ದುಗುಂಡಿ ತಾಂಡ್ಯದಲ್ಲಿ ನಡೆದಿದೆ. 

ಮುದ್ದುಗುನಡಿ ತಾಂಡ್ಯ ತಿಮ್ಮನಾಯ್ಕ್ (65) 2014 ಯೂನಿಯನ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ,  16 ಲಕ್ಷ ಸಾಲ ಪಡೆದಿದ್ದ ರೈತನ ಸಾಲ  42 ಲಕ್ಷ ರೂ. ತಲುಪಿತ್ತು. ನಂತರ ಸೆಟ್ಲುಮೆಂಟ್ ಮೂಲಕ 32  ಲಕ್ಷ ರೂ. ಕ್ಟಲು ತೀರ್ಮಾನ ಮಾಡಿರುವ ಬ್ಯಾಂಕ್ ಇತ್ತೀಚೆಗೆ ನೋಟೀಸ್ ಸಹ ನೀಡಿತ್ತು.  ಬೆಳೆ ಸಾಲ ಮತ್ತು ಇತರೆ ಅಭಿವೃದ್ದಿಗಾಗಿ ತಿಮ್ಮ ನಾಯ್ಕ್ ಸಾಲ ಮಾಡಿದ್ದರು .

6 ಎಕರೆ ಜಮೀನು ಹೊಂದಿದ ತಿಮ್ಮನಾಯ್ಕ್ ನಾಲ್ಕು ಎಕರೆ ಅಡಿಕೆ ಮತ್ತು ರಾಗಿ, ಹುರುಳಿ ಬೆಳೆಯುತ್ತಿದ್ದರು.  ಉಳಿದ ಎರಡು ಎಕರೆ ಜಾಗದಲ್ಲಿ ಖಾಲಿಯಿದ್ದವು. ನೋಟೀಸ್ ಬಂದಿದೆ ಎಂಬ ವಿಷಯವನ್ನ ಮನಸದಸಿಗೆ ಹಚ್ಚಿಕೊಂಡ ರೈತ ಮೇ.28 ರಂದು ಹೊಲದಲ್ಲಿ ರೌಂಡಪ್ ಸೇವಿಸಿದ್ದ ರೈತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತರಿಗೆ ಎರಡು ಗಂಡು ಮಕ್ಕಳಿದ್ದರು. 

Farmer commits suicide

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close