ಮಹಿಳೆ ಮತ್ತು ಯುವಕ ಆತ್ಮಹತ್ಯೆ-ಕಾರಣವೇನು?Woman and young man commit suicide

 SUDDILIVE || SHIVAMOGGA

ಮಹಿಳೆ ಮತ್ತು ಯುವಕ ಆತ್ಮಹತ್ಯೆ-ಕಾರಣವೇನು?Woman and young man commit suicide - what is the reason?

Commit, Suicide


ಮದುವೆಯಾಗಿ 14 ವರ್ಷ ಕಳೆದಿದ್ದು ಮತ್ತೋರ್ವ ಗಂಡಸಿನ ಆಶ್ರಯ ಬಯಸಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 


ಸುಜಾತ (33) ಎಂಬ ಮಹಿಳೆಗೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಎರಡು ಮಕ್ಕಳಿದ್ದರು. ಗಂಡ ದಿಡೀರ್ ಎಂದು ನಾಪತ್ತೆಯಾದ ಬೆನ್ನಲ್ಲೇ ಆತ ಕಳೆದ ಮೂರು ನಾಲ್ಕು ವರ್ಷದಿಂದ ಸಂಪರ್ಕಕ್ಕೆ ಬಂದಿಲ್ಲ. ಬೆಳಗಾವಿಯಲ್ಲಿದ್ದ ಸುಜಾತ ಮೂರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದ ರಿಪ್ಪನ್ ಪೇಟೆಯ ತಮ್ಮಡಿಹಳ್ಳಿಕೊಪ್ಪದಲ್ಲಿರುವ ತವರು ಮನೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು.  

ಗಂಡ ಬಿಟ್ಟು ಎರಡು ಮೂರು ವರ್ಷ ಆಗಿತ್ತು. ಇತ್ತ ಮೊಬೈಲ್ ನ ಮೂಲಕ ಆಯನೂರು ಕೋಟೆಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್ ಸುಜಾತಳ ಸಂಪರ್ಕಕ್ಕೆ ಬಂದಿದ್ದ. ಸಂಪರ್ಕ ಸಲುಗೆಗೆ ತಿರುಗಿದೆ. ಕಳೆದ ಒಂದು ವಾರದಿಂದ ಸುಜಾತಳ ಜೊತೆ ಬಂದು ವಾಸವಾಗಿದ್ದ. 

ಕಲ್ಮನೆಯಲ್ಲಿದ್ದ ಸುಜಾತಳ ಸಹೋದರಿ ಗೀತ, ರಿಪ್ಪನ್ ಪೇಟೆಯ ಮಕ್ಕಳು ಶಾಲೆಗೆ ಸೇರಿಸಲು ಬಂದಿದ್ದರು. ಆಗ ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದ್ದ ಸಚಿನ್ ಗೆ ಬುದ್ದಿವಾದ ಹೇಳಲಾಗಿತ್ತು. 

ಬುದ್ದಿವಾದ ಹೇಳಿ ಸಹೋದರಿ ಇತ್ತ ಬರುತ್ತಿದ್ದಂತೆ ನಿನ್ನೆ ಬೆಳಿಗ್ಗೆ  ಸುಜಾತ ಮತ್ತು ಸಚಿನ್ ಕಳೆ ನಾಶಕವನ್ನ ಕುಡಿದಿದ್ದಾರೆ. ಸಚಿನ್ ಸುಜಾತಳಿಗೆ ಬಲವಂತವಾಗಿ ಕುಡಿಸಿ ಸಾಯಿಸಿರುವುದಾಗಿ ಸುಜಾತಳ ಕುಟುಂಬ ಆರೋಪಿಸಿದೆ.  ನಿನ್ನೆ ಬೆಳಿಗ್ಗೆ 9 ಗಂಟೆಯಲ್ಲಿ ನಡೆದಿದೆ. 

ಅಕ್ಕ ಗೀತ ತಕ್ಷಣವೇ ವಿಷಯ ತಿಳಿಸಲಾಗಿತ್ತು. ಅವರು ಮನೆಗೆ ಬಂದಾಗ, ಸುಜಾತನ  ಮಗ ಕಳೆನಾಶಕ ವಿಷಯ ತೆಗೆದುಕೊಂಡಾಗ ಗೊತ್ತಾಗಿದೆ. ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನೆ ರಾತ್ರಿ 11-50 ಕ್ಕೆ ಮೆಗ್ಗಾನ್ ನಲ್ಲಿ ಇಬ್ಬರೂ ಜೀವಕಳೆದುಕೊಂಡಿದ್ದಾರೆ. 

Woman and young man commit suicide

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close